ಪುಟ:Ekaan'gini.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾ೦ಗಿನಿ ಸ್ವಾಗತ?" "ಮುಚ್ಚು ಬಾಯಿ!ಯಾರ ಹೆ೦ಡತಿ?ಯಾರ ಮುಗು?ಯಾರು ನಿನಗೆ ಬಾ ಅ೦ದೋರು?" ಎಡಗೈಯಲ್ಲಿ ಮಗುವನ್ನೆತ್ತಿಕೊಂಡು, ಒಲಗೈಯಿಂದ ಮಾಂಗಲ್ಯಸೂತ್ರವನ್ನು ಮುಟ್ಟಿ ತೋರಿಸುತ್ತಾ ಸುನಂದಾ ಕೇಳಿದಳು: "ಇದು ನೆನಪಿದೆಯಾ?" ಆ ನೆನಪು ಆತನಿಗೆ ನೀಡುತಿದ್ದುದೆಲ್ಲ ಈತಿ ಬಾಧೆಯ ನರಳಾಟ. "ಸುನಂದಾ!" "ಆ!ಹೆಸರು ಮರೆತಿಲ್ಲ ನೀವು!" "ಹೇಳಬೇಕಾದ್ದನ್ನೆಲ್ಲ ನಿಮ್ಮ ತಂದೆಗೆ ಆ ದಿವಸವೆ ಹೇಳಿದೀನಿ. ಪುನಃ ನೀವೇಲ್ಲ ಯಾಕ್ಬಂದಿದೀರಾ ? " "ನೀವು ಹೇಳಿದಿರಿ. ಆದರೆ ನಾನು ಹೇಳೋದು ಬೇಡ್ವೆ ?" "ಅಷ್ಟು ವರ್ಷ ಜತೇಲಿದ್ದಾಗ ಎಲ್ಲಾ ಹೇಳಿ ಮುಗಿಸಿದೀಯಾ ನೀನು. ಇನ್ನೂ ಏನು ಉಳಿದಿರೋದು?" "ಯಾಕೆ ಹೀಗೆಲ್ಲಾ ಮಾತಾಡ್ತೀರಾ? ಏನಾಗಿದೆ ನಿಮಗೆ?" "ನನಗೂ ನಿನಗೂ ಯಾವ ಸಂಧವೂ ಇಲ್ಲ - ತಿಳೀತೆ?" ಇದ್ದದ್ದೇನಾಯ್ತು?" "ನಿಲ್ಸು ಮಾತು!" ಅವರಿಬ್ಬರೂ ಮಾತನಾಡುತ್ತಿದ್ದರೆಂದು ಅಳು ನಿಲ್ಲಿಸಿ ಆ ಇಬ್ಬರ ಮುಖಗಳನ್ನೇ

ಸರಸ್ವತಿ ನೋಡಿದಳು.

"ನೀವು ಕತ್ತು ಕುಯ್ದು ಹಾಕ್ತೀನಿ ಅಂದರೂ ಆಡೋ ಮಾತು ನಾನು ಆಡ್ಬೇಕು." ಕುಳಿತಿದ್ದ ಕುರ್ಚಿಯ ಎರಡೂ ಕೈಗಳನ್ನು ಪುಟ್ಟಣ್ಣ ಹಿಡಿದು ಹಿಸುಕಿದ. ಹೊರಗಿನಿಂದ ಹೊಟಲಿನ ಹುಡುಗನ ಸ್ವರ ಕೇಳಿಸಿತು: "ಸಾರ್, ಕಾಫಿ ತರಾಲ?" "ಬೇಡ.ನಾನೇ ಕೆಳಗ್ಬರ್ತಿನಿ," ಎಂದ ಪುಟ್ಟಣ್ಣ. ಸಾಮಾನ್ಯ ಗಿರಾಕಿಯಾಗಿದ್ದಿದ್ದರೆ ಹೊಟೆಲಿನ ಮ್ಯಾನೇಜರರಿಂದ