ಪುಟ:Ekaan'gini.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಇಷ್ಟೆಲ್ಲಾ ಆಯ್ತು ,ನಿನ್ನೆ". ಆನಂತರ ಅಲ್ಲಿ ನೆಲೆಸಿದ ಮೌನವನ್ನು ಆಗಾಗ್ಗೆ ಮುರಿಯುತ್ತಿದ್ದವಳು

ಸರಸ್ವತಿಯೊಬ್ಬಳೇ. ಆಕೆ ಪಕ್ಕದ ಕೊಠಡಿಗೆ ಹೋದಳು ಸುತ್ತಿ ಇಟ್ಟಿದ್ದ
ಹಾಸಿಗೆಯನ್ನು ಎಳೆದಳು.ಪೆಟ್ಟಿಗೆಗೆ ಬಡಿದಳು. ಆದರೂ ಯಾರ ಗಮನ

ವನ್ನು ಸೆಳೆಯುವುದಕ್ಕೂ ಸಮರ್ಥಳಾಗದೆ ಹೊರ ಬಂದು ,ಅಮ್ಮನ ಸೆರಗಿ ನಿಂದ ಮುಖ ಮುಚ್ಚಿಕೊಂಡು.ಕದ್ದು ಕದ್ದು ನೋಡುತ್ತಾ ಕುಸುಮಳನ್ನು

ಕಣ್ಣು ಮುಚ್ಚಾಲೆಯಾಟಕ್ಕೆ ಕರೆದಳು.

ಅಷ್ಟರಲ್ಲೆ ಶ್ಯಾಮ ಬಂದ. "ಸ್ಕೂಲು ಆಯ್ತೇನೋ ?" ಎಂದರು ರಾಧಮ್ಮ. "ಮೇಷ್ಟ್ರಿಲ್ಲಾಂತ ರಜಾ ಕೊಟ್ರು". ಸರಸ್ವತಿಯನ್ನು ಕಂಡು ಶ್ಯಾಮ ಮುಗುಳುನಕ್ಕ. ಉಳಿದವರ ಬಾಡಿದ

ಮುಖಗಳನ್ನೂ ಗಮನಿಸಿದ.

ರಾಧಮ್ಮ ಒಳಹೋದರು. ಸರಸ್ವತಿಯನ್ನು ಎತ್ತಿಕೊಂಡು ತನ್ನ ಹಿಂದೆಯೆ

ಬಂದ ಮಗನಿಗೆ ತಿಂಡಿ ಕೊಟ್ಟರು.

"ಆಟಕ್ಕೆ ಹೋಗ್ತೀಯೇನು ಇನ್ನು?" ಎಂದು ಕೇಳಿದರು. "ಹೂಂ. ಯಾಕೆ ಹೇಳು?" "ಮಗೂನ ಆಡಿಸ್ಕೊಂಡು ಬರ್ತಿಯೇನೋಂತ ಕೇಳ್ದೆ." "ಶ್ಯಾಮ ತನ್ನ ಆಟದ ಯೋಚನೆ ಬಿಟ್ಟು "ಹೂಂ" ಎಂದ ಸ್ವಲ್ಪ ಹೊತ್ತಿ ನಲ್ಲಿ ಸರಸ್ವತಿಯನ್ನೆತ್ತಿಕೊಂದು ಹೊಂಟು ನಿಂತ ಶ್ಯಾಮನ ಕೈಗೆ ,ರಾಧಮ್ಮ ಆರುಕಾಸು ಕೊಟ್ಟರು "ಪೆಪ್ಪರಮಿಂಟು ತಗೋ",ಎಂದರು. ಮತ್ತೆ ಚಾಪೆಯ ಮೇಲೆ ಮೂವರೂ ಕುಳಿತುದಾಯಿತು. ಆಗ ಮಾತಿಗೆ ಮೊದಲು ಮಾಡಿದವಳು ಕುಸುಮಾ. "ಈಗೇನ್ಮಾಡ್ತೀರಿ ಸುನಂದಕ್ಕ?" ಹೆಚ್ಚಿನ ಒಲವನ್ನು ತೋರಿಸಲು ಸಹಾಯಕವಾಗಿತ್ತು 'ಅಕ್ಕ' ವಿಶೇಷಣ. "ಎನ್ಮಾಡ್ಲಿ? ನನಗೇನೂ ತೋಚ್ತಾ ಇಲ್ಲ. ಊರಿಗೆ ಹೋಗ್ತೀನಿ.ಅಲ್ಲಿ

 ತಾಯಿ ತಂದೆಯರ ಇಳಿವಯಸ್ಸಿನಲ್ಲಿ ಅವರ ಜತೇಲಿದ್ದು ಸೇವೆ ಮಾಡ್ತೀನಿ."

ರಾಧಮ್ಮ ತಮ್ಮ ನಸ್ಸಿನಲ್ಲಿದ್ದುದನ್ನು ಹೇಳ ಹೊರಟರು.