ಪುಟ:Ekaan'gini.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ಏಕಾಂಗಿನಿ ಮಾತನಾಡಿದ್ದೆವು-ನೆನಪೆ?"

"ಅದರ ಪ್ರಸ್ತಾಪ ಈಗ ಯಾತಕ್ಕೆ?"
"ಮಾತಿಗೆ ಹೇಳ್ದೆ....."
 "ಏನೋ ಅಂದಿರ್ತೀನಿನಿ. ಮನಸ್ಸಿಗೆ ಹಚ್ಕೋಬೇಡಿ."
 "ಛೆ! ಛೆ! ನೀವು ಸರಿಯಾದ್ದನ್ನೇ ಅಂದಿದ್ದಿರಿ. ಅದರಲ್ಲಿ ಯಾವ ತಪ್ಪೂ
ಇರಲಿಲ್ಲ. ನನ್ನ ದುರವಸ್ಥೆ ನೋಡ್ತಾ ಅದನ್ನ ನೆನಸ್ಕೊಂಡೆ ಅಷ್ಟೆ."
 ಕಾಫಿ ಬಂತು. ಮೂವರೂ ಕುಡಿಯುತಿದ್ದಂತೆಯೇ ಕುಸುಮಳ ಮನೆಯ
'ಜವಾನಿ' ಬಂದಳು.
 "ರಾಯ್ರು ಬಂದವ್ರೆ."
ಬೇರೆ ದಿನವಾಗಿದ್ದರೆ ಹೊರಡಲು ಕುಸುಮಾ ಆತುರಪಡುತಿದ್ದಳು. ಈ
ದಿನ ಹಾಗೆ ಓಡಲು ಮನಸ್ಸಿರಲಿಲ್ಲ.
 "ಹೋಗು. ಏನೋ ಮಾತಾಡ್ತಿದಾರೆ, ಎರಡ್ನಿಮಿಷ ಬಿಟ್ಕೊಂಡು ಬರ್ತಾ

ರೇಂತ ಹೇಳು," ಎಂದಳು.

"ಆತ ಆ ಹೋಟ್ಲು ಬಿಟ್ಬಟ್ಟಿರಬಹುದೂಂತೀರಾ?" ಎಂದು ರಾಧಮ್ಮ 

ಕೇಳಿದರು, ಕುಸುಮಳ ಮನೆಯ ಕೆಲಸದಾಕೆ ಹೊರಟುಹೋದೊಡನೆ.

 "ಹಾಗೆ ಅನಿಸೋಲ್ಲ. ಅದೆಲ್ಲ ನನ್ನನ್ನು ಓಡಿಸೋದಕ್ಕೆ ನಾಟಕ."
  ರಾಧಮ್ಮನ ಮನಸ್ಸಿನಲ್ಲಿದ್ದುದನ್ನು ಆ ಕ್ಷಣ ಊಹಿಸಿ ಸುನಂದಾ ಮುಂದು

ವರಿದಳು:

  "ಯಾಕೆ ಕೇಳಿದಿರಿ ರಾಧಮ್ಮ? ಅಲ್ಲಿಗೆ ಹೋಗಿ ಅವರ ಜತೇಲಿ ಮಾತಾ

ಡೋಣ ಅಂತ್ಲೆ?"

  "ನಾನೂ ನಮ್ಮ ಯಜಮಾನರೂ ಹೋಗ್ತೀವಿ."
 "ಬೇಡಿ ರಾಧಮ್ಮ. ಏನೂ ಪ್ರಯೋಜನವಾಗೋದಿಲ್ಲ. ಇಷ್ಟಿದ್ದೂ
ನೋಡಲೇ ಬೇಕೂಂತಿದ್ರೆ ಆ ಹೋಟ್ಲಿಗೆ ಹೋಗ್ಬೇಡಿ. ಮಾನವಿರೋ 
ಹೆಂಗಸು ಗಂಡಸು ಆ ಜಾಗಕ್ಕೆ ಕಾಲಿಡಬಾರದು."
 ರಾಧಮ್ಮ ಮಾತನಾಡಲಿಲ್ಲ. ಆಕೆ ಇನ್ನೂ ಆಸೆ ಕಟ್ಟಿಕೊಂಡಿದ್ದುದನ್ನು
ಕಂಡು ಕುಸುಮಳಿಗೆ ಆಶ್ಚರ್ಯವೆನಿಸಿತು. ಆದರೂ ಅದನ್ನು ವ್ಯಕ್ತಪಡಿಸು

ವುದು ಅನುಚಿತವೆಂದು ಸುಮ್ಮನಿದ್ದು, ಆಕೆ ಎದ್ದಳು.