ಪುಟ:Ekaan'gini.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ದಿತ್ತು.ಮೊದಲೇ ಗಂಡು ಹುಟ್ಟಿದ್ದರೆ ಸುನಂದೆಗೆ ಅಣ್ಣಂದಿರಿರುತ್ತಿದ್ದರು,.ಅಥವಾ ಅಣ್ಣಂದಿರು-ಅಕ್ಕಂದಿರು...ಅದು ಸುನಂದೆಯ ಪಾಲಿನಕೊರತೆ.ಆದರೆ ಆಕೆಯ ತಾಯಿಯನ್ನು ಕೊರೆದುದು ಗಂಡು ಸಂತಾನ ಪ್ರಾಪ್ತಿಯಾಗಲಿಲ್ಲವೆಂಬ ದುಃಖ.ಕೃಷ್ಣಪ್ಪನವರಿಗೂ ಬೇಸರವಿರಲಿಲ್ಲವೆಂದಲ್ಲ.ಆದರೆ ಹೆಂಡತಿಯ ಕೊರಗು ಕಂಡು ತಮ್ಮದನ್ನು ಬೇಗನೆ ಅವರು ಮರೆತರು.ಇಬ್ಬರೂ ಕಾಹಿಲೆಯವರೇ ಆದರೆ ಔಷಧೋವಚಾರ ನಡೆಸುವವರು ಯಾರು?ದೇವರು ಕೊಟ್ಟುದೇ ವರ ಪ್ರಸಾದವೆಂದು ನೆಮ್ಮದಿಯಿಂದಿರಬೇಕು--ಎಂದು ಹೆಂಡತಿಯನ್ನು ಸಂತೈಸಲು ಆವರು ಯತ್ನಿಸಿದರು.

 ಇಷ್ಟು  ವರ್ಷಗಳಕಾಲ  ಸುಖದುಃಖಗಳಲ್ಲಿ ಪಾಲುಗಾರ್ತಿಯಾಗಿದ್ದ ಜೀವ ಬಡಕಲಾಗಿ ಹಾಸಿಗೆ ಹಿಡಿದುದನ್ನು ಕಂಡು ಕೃಷ್ಣಪ್ಪನವರು ಚಿಂತೆಗೊಳಗಾದರು.ಆಕೆಯನ್ನು ಭಾಧಿಸಿದುದು ಕೆಮ್ಮು ಜ್ವರ.ಡಾಕ್ಟರ ಸುದ್ದಿಯನ್ನೂ ಎತ್ತುವಹಾಗಿರಲಿಲ್ಲ,"ಸಾಯೋಕಾಲಕ್ಕೆ ಸೀಮೆ   ಔಷಧಿ  ಕುಡಿಸ್ತೀರಾ?"ಎಂಬ ಆಕ್ಷೇಪ.ಕೃಷ್ಣಫ್ಫನವರು ತಮಗೆ ತಿಳದ ಗೃಹವೈದ್ಯವನ್ನೆಲ್ಲ ಮಾಡಿದರು.ಆಯುರ್ವೇದ ಪಂಡಿತರನ್ನು ಕರೆದು ತಂದು ಹೆಂಡತಿಯನ್ನು ತೋರಿಸಿದರು.
   ಜ್ವರ ಇನ್ನೇನು ಇಳಿಮುಖವಾಗಬೇಕು ಎನ್ನುವಷ್ಟರಲ್ಲೆ ನಡುಬೆನ್ನಲ್ಲೊಂದು ಕುರುವೆದ್ದಿತು.ಏನೋ ಸಣ್ಣ ವಿಷಯ ಎಂದು ಕೃಷ್ಣಪ್ಪನವರು,ಬೇಗನೆ ಹಣ್ಣಾಗಿ ಒಡೆಯಲೆಂದು,ಗಂಧವನ್ನು ತೇದು ಹಚ್ಚಿದರು.
                                                                                           ಅದರೆ ಅದು ಗುಣವಾಗಲಿಲ್ಲ.ವಿಪರೀತಕ್ಕಿಟ್ಟುಕೊಂಡಿತು.ಅಗಲವಾಗುತ್ತದೊಡ್ಡದಾಯಿತು.ತಡೆಯಲಾಗದ ಸಿಡತ-ನೋವು.ಮಗ್ಗುಲಲ್ಲೇ ಶಯನ.ಎದ್ದು ಕುಳ್ಳಿರಿಸಿದ ಬಳಿಕ,ಇನ್ನೂಂದು ಮಗ್ಗುಲಲ್ಲಿ.
    ಅಕ್ಕಪಕ್ಕದ ಮನೆಗಳವರು ಬಂದು ರೋಗಿಯನ್ನು ಕಂಡು "ಅಯ್ಯೋ"ಎಂದರು.ತಂದೆ ಮತ್ತು ಮಗಳ ಬೆಂಗಳೂರು ಪ್ರವಾಸವನ್ನು ಕುರಿತು ಅಗಲೆ ಸಾಕಷ್ಟು ಊಹಾಪೋಹ ಮಾಡಿದ್ದ ಅವರೆಲ್ಲ,ಸದ್ಯಃ ಆ ವಿಚಾರವನ್ನು ಬದಿ ಗಿರಿಸಿ ಸಂಕಷ್ಟದಲ್ಲಿ ಸಿಲುಕಿದ್ದವರಿಗೆ ಸಹಾನುಭೂತಿ ತೋರಿದರು.
   -"ಏನಾದರೂ ಬೇಕಾದರೆ ಹೇಳಿ ಕಳಿಸಮ್ಮ,ಸುನಂದಾ."
   -"ಕಷ್ಟದ ಸಮಯದಲ್ಲಿ ನೆರೆಹೊರೆಯವರಲ್ಲದೆ ಬೇರೆ ಯಾರು ಆಗ್ತಾರೆ?"