ಪುಟ:Ekaan'gini.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ _"ಸಂಕೋಚ ಪಟ್ಕೋಬೇಡಮ್ಮ.ಸುಶೀಲೇನ ಕಳಿಸ್ಲಾ? ಅಡುಗೆ ಕೆಲಸದಲ್ಲಾದರೂ ಸಹಾಯವಾಗ್ತಾಳೆ."

 ಎಲ್ಲರಿಗೂ ಸುನಂದಾ,"ಎನೂ ಬೇಡೀಮ್ಮ.ಬೇಕಾದರೆ ಖಂಡಿತ ಕೇಳ್ತೀನಿ,"ಎಂದಳು.ವಿಸ್ಮಯವನ್ನುಂಟಮಾಡುವ ಹಾಗಿತ್ತು ಅಕೆ ಕಂಡಿದ್ದ ಮನುಷ್ಯ ಸ್ವಭಾವ..!
    ಅದರೆ ಒಂದರ ಅಗತ್ಯ ಮಾತ್ರ ಆಕೆಗಿತ್ತು. ಅದು ಒಡಹುಟ್ಟದವಳ ಸಾಮಿಪ್ಯ.ಬೆಂಗಳೂರಿಂದ ಬಂದ ಮೇಲೆ ತಂಗಿಗೆ ದೀರ್ಘವಾಗಿ ಬರೆಯ ಬೇಕೆಂದುಕೊಂಡಿದ್ದಳು ಸುನಂದಾ.ಅದರೆ ಬರೆಯಲು ಹೂರಟಾಗ ಬೇಸರ ಬರುತ್ತಿತ್ತು ಸುಖಿಯಾಗಿದ್ದತಂಗಿಗೆ ತನ್ನ ದುಃಖದ ವಿಷಯ ತಿಳಸುವುದಾದರೂ ಯಾಕೆ?ಅಕೆಗೊ ಬೇಸರ ಉಂಟುಮಾಡಿರುವುದರಿಂದ ಏನು ಪ್ರಯೋಜನ?ಇನ್ನೂ ಸ್ವಲ್ಪದಿನ ಬಿಟ್ಟು ಬರೆದರಾಯ್ತು,ಈಗಲೇ ಏನು ಅವಸರ?....
    ಆಕ್ಕನ ಮೌನ ವಿಜಯಾಗೆ ಆರ್ಥವಾಗಿರಲಿಲ್ಲ.ಅಕೆ ರೇಗಿ ಒಂದರಮೇಲೊಂದು ಎರಡು ಕಾಗದ ಬರೆದಿದ್ದಳು.
  "ಇನ್ನು ನಾನು ಬರೆಯೋದಿಲ್ಲ.ನಿನ್ನ ಉತ್ತರ ಬರದ ಹೊರತು ನಾನು ಬರೆಯೋದಿಲ್ಲ.ಯಾಕೆ ಹೀಗೆ ಮಾಡ್ತಿದೀಯಾ?ನೀವೆಲ್ಲ ನನ್ನನ್ನು ಮರೆತೇ ಬಿಟ್ಟರೇನು?ನಾನು ನಿಮಗಿನ್ನು ಬೇಡವೇನು?ನಿನಗೆ ಅಮ್ಮನಿಗೆ ಅಪ್ಪನಿಗೆ ಯಾರಿಗೂ ನನ್ನ ನೆನವೇ ಅಗೋದಿಲ್ಲವೇನು?"_ಹೀಗಿದ್ದುವು ಎರಡನೆಯ ಕಾಗದದ ಕೊನೆಯ ಸಾಲುಗಳು.
  ಅದನ್ನೋದಿದ ಕೃಷ್ಣಪ್ಪನವರು ಕೇಳಿದರು:

"ಕಾಗದ ಬರೀಬಾರ ಸುಂದಾ?"

  ಬರೀತೀನಪ್ಪಾ"
ಸುನಂದೆ ತೋರುತ್ತಿದ್ದುದು ಅಲಕ್ಷ್ಯವಲ್ಲವೆಂದು ಕೃಷ್ಣಪ್ಪನವರಿಗೆ ಅರ್ಥವಾಗಿತ್ತು,ಆಮೌನದ ಕಾರಣವನ್ನು ಊಹಿಸಿಕೊಳ್ಳುವುದು ಕಷ್ಟವಾಗಿರಲಿಲ್ಲ.ಅದರೂ ಎಷ್ಟು ದಿನ ಅಂತ ಕಾಗದ ಬರೆಯದೇ ಇರುವುದು ಸಾಧ್ಯ?
  ತಂದೆಯಷ್ಟೇ ಅಲ್ಲ,ಸುನಂದೆಯ ತಾಯಿಯೂ ಕೇಳುತ್ತಿದ್ದರು:
"ವಿಜೀ ಕಾಗದ ಬಂತೇನೇ?"

"ಬಂತು."