ಪುಟ:Ekaan'gini.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ಸುಳಿವೇ ಇಲ್ಲವೆಂದು ನರಳುತಿದ್ದ ತಾಯಿ. ಬೆಳಕು ಬೀಳದಂತೆ ಬಾಗಿಲು ಮರೆ ಮಾಡಿ ಕೊಠಡಿಯ ಹೊರಗೆ ಕುಳಿತು ಬರೆಯುತಿದ್ದ ಸುನಂದಾ. ಬರೆಯುವ ಆಯಾಸದಿಂದ ಕೈ ಬೆರಳುಗಳು ಆಗಾಗ್ಗೆ ಸುಮ್ಮನಾದುವು. ಕಣ್ಣುಗಳು ಚಲಿಸದೆ ಜಡವಾಗಿ ಬರೆದ ಸಾಲುಗಳ ಮೇಲೆಯೆ ಮಂದ ನೋಟ ಬೀರಿದುವು. ಕಪೋಲಗಳು ತೊಯ್ದುವು. ಬರೆದು ಮುಗಿದ ಬಳಿಕ ಮನಸ್ಸಿನಲ್ಲೆ ಸುನಂದಾ ಅದನ್ನೋದಿದಳು. "ಪ್ರೀತಿಯ ವಿಜೀ"ಗೆ ಬರೆದ ಕಾಗದ ಹೀಗೆ ಆರಂಭವಾಗಿತ್ತು; "ನನ್ನ ಮೇಲೆ ನೀನು ತುಂಬಾ ರೇಗಿಬೇಕು ಅಲ್ಲವೇನೆ? ಬೆಂಗಳೂರಿನಿಂದ ನಾವು ಅವತ್ತೆ ವಾಪಸು ಬಂದೆವು. ಬಂದ ಕೂಡಲೆ, ಬರೆಯಬೇಕು ಅನಿಸಿತ್ತು. ಆದರೆ ಆಗಲಿಲ್ಲ. ಕಾರಣ ಏನೆಂದು ಹೇಳಬೇಕೋ ತಿಳಿಯದು. ನಿನಗೆ ಬೆಂಗಳೂರು ಯಾತ್ರೆಯ ಫಲಿತಾಂಶ ತಿಳಿಯುವ ಆತುರವೆಂದು ಬಲ್ಲೆ. ಬಹುಶಃ ಇಷ್ಟರಲ್ಲೆ, ನೀನು ಊಹಿಸಿರಬಹುದು ಅಲ್ಲವೆ? ಶುಭ ಸಮಾಚಾರ ಒಂದೂ ಇಲ್ಲವೆಂದು ಲೆಕ್ಕ ಹಾಕಿರಬಹುದು, ಅಲ್ಲವೆ?

           "ನನ್ನ ಸಹನಶಕ್ತಿಯನ್ನು ಕಂಡು ಒಮ್ಮೊಮ್ಮೆ ನನಗೆ ಆಶ್ಚರ್ಯವೆನಿಸಿದೆ. ನನ್ನ ಈ ನರಕ ಜೀವನ ಆರಂಭವಾಗಿ ಆಗಲೆ ಒಂದು ವರ್ಷಕ್ಕೂ ಮೇಲಾಯಿತಲ್ಲ! ಇಷ್ಟೆಲ್ಲಾ ಆದಮೇಲೂ ನಾನು ಬದುಕಿಯೇ ಇದೇನೆ ಎನ್ನುವುದು ಸಾಮಾನ್ಯ ವಿಷಯವೆ? ನಿನ್ನ ಮದುವೆಗೆ ಮುಂಚೆ, ಸರಸ್ವತಿಯ ಮೊದಲ ಹುಟ್ಟು ಹಬ್ಬದ ದಿವಸ ನೀನು ಉಡುಗೊರೆ ಕಳಿಸಿದ್ದು ನೆನಪಿದೆಯಾ ವಿಜೀ? ಕಣ್ಣೀರಲ್ಲಿ ನಾನು ಕೈ ತೊಳೆಯೋದು ಶುರುವಾಗಿ ಆಗಲೆ ಏಳು ತಿಂಗಳಾಗಿತ್ತು. ನಿಮಗೆ ಯಾರಿಗೂ ಹೇಳಿಯೇ ಇರಲಿಲ್ಲ. ಆಗ ನನ್ನ ಮನಸ್ಸಿನಲ್ಲಿ  ಏನಿತ್ತು ಗೊತ್ತೆ?-ಇಷ್ಟೊಂದು ಓದಿರುವ ತಿಳಿದಿರುವ ನಾನು, ಹೋರಾಟವನ್ನು ಬಿಟ್ಟುಕೊಡಬಾರದು; ಸೋಲನ್ನೋಪ್ಪಿಕೊಳ್ಳಬಾರದು. ನನ್ನ ಸಂಸಾರ ಛಿದ್ರವಾಗದಂತೆ ನಾನು ನೋಡಿಕೊಳ್ಳಬೇಕು. ಗಂಡನನ್ನು ಸರಿಹಾದಿಗೆ ತರಬೇಕು. ನಾನು ಜಯಿಸಬೇಕು, ಜಯಿಸಲೇಬೇಕು_ _ಅಂತ. ಈಗ ಅಂಥ ಯಾವ ಆಸೆಯೂ ನನಗೆ ಉಳಿದಿಲ್ಲ. ನಾಳೆ ಏನಾಗುತ್ತೋ ಮುಂದಿನ ವರ್ಷ ಏನಾಗುತ್ತೊ ನನಗೆ ತಿಳಿಯದು.

"ಬೆಂಗಳೂರಿನಲ್ಲಿ ಏನಾಯಿಯತೆಂದು ಬರೆಯಬೇಕೇನು? ಬರೆಯುವಇಚ್ಛೆಯೇ