ಪುಟ:Ekaan'gini.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೧೨೭

ಬಹಳ ದಿನಗಳನಂತರ ಮನೆಗೆ ಬಂದಿದ್ದ ಚಿಕ್ಕಮ್ಮ ತನ್ನನ್ನು ಎತ್ತಿಕೊಂಡು ಮುದ್ದಿಡಲಿಲ್ಲವೆಂದು ಸರಸ್ವತಿಗೆ ಸಿಟ್ಟು ಬಂದಿತ್ತು.ಬಾ ಎಂದಿದ್ದರೆ ಸಂತೋಷ ವಾಗಿ ತಾನೂ ಚಿಕ್ಕಮ್ಮನ ಜತೆ ಮಲಗಿಕೊಳ್ಳುತ್ತಿದ್ದಳು.ಆದರೆ ಚಿಕ್ಕಮ್ಮ ಕರೆದಿರಲಿಲ್ಲ.ಹೀಗಾಗಿ ಸರಸ್ವತಿ ಚಿಕ್ಕಮ್ಮನ ಜತೆಯಲ್ಲೇ ಇದ್ದು,ಆಕೆಯ ಕೆಲಸ ಕಾರ್ಯಗಳಿಗೆ ತುನ್ನಿಂದಾದಷ್ಟು ಅಡ್ಡಿ ಪಡಿಸಿದಳು. ....ಸಂಜೆ ಮೊದಲು ಎದ್ದು ಗಡಿಯಾರ ನೋಡಿದವನು ವೆಂಕಟರಾಮಯ್ಯ "ಆರು ಘಂಟಿ ಆಗೋಯ್ತು ನಾನಿನ್ನು ಹೊರಡ್ಬೇಕು." "ಇವತ್ತೇ ಹೋಗ್ತೀರಾ?"ಎಂದಳು ಸುನಂದಾ. ಸಂವಾದದ ಸದ್ದು ಕೇಳಿಸಿದಂತಾಗಿ ವಿಜಯಳೂ ಬೆಚ್ಚಿಬೀಳುತ್ತ ಎದ್ದಳು. "ಯಾರು? ಏನಾಯ್ತು?"ಎಂದಳಾಕೆ. "ಯಾರು ಉತ್ತರ ಕೊಡಲಿಲ್ಲ. ಮತ್ತೊಂದು ಕ್ಷಣದಲ್ಲೆ ವಿಜಯಳಿಗೆ ಪೂರ್ಣ ಅರಿವು ಬಂತು. ಅಕ್ಕತಂಗಿಯರಿಬ್ಬರನ್ನೂ ಉದ್ದೇಶಿಸಿ ಹೇಳಿದಂತೆ ವೆಂಕಟರಾಮಯ್ಯನೆಂದು "ನಾನು ಒಂದೇ ದಿವಸದ ರಜಾ ತಗೊಂಡಿರೋದು.ವಿಜಯಾನ ಇಲ್ಲಿ ಬಿಟ್ಟು ಹೋಗೋಕೇಂತ ನಾನು ಬಂದೆ. ಸಾಯಂಕಾಲದ ರೈಲ್ನಲ್ಲಿ ಹೊರ ಡ್ತೀನಿ". ವಿಜಯಾ ಮಾತನಾಡಲಿಲ್ಲ ಸುನಂದಾ ತಂದೆಯನ್ನೆಬ್ಬಿಸಿದಳು. ಅಳಿಯ ಹೊರಟು ನಿಂತುದನ್ನು ಕಂಡು ಕೃಷ್ಣಪ್ಪನೆಂದರು; "ನಿಮ್ಮಿಷ್ಟ.ನನಗೆ ಗಂಡು ಮಕ್ಕಳಿಲ್ಲ ವೆಂಕಟರಾಮಯ್ಯ.ಆ ಕಾರಣ ದಿಂದ ನೀವು ನನ್ನ ಪಾಲಿಗೆ ಅಳಿಯನಿಗಿಂತಲೂ ಜಾಸ್ತೀ. ನಾನು ನಿಮ್ಮ ಹತ್ತಿರ ಎಷ್ಟೋ ವಿಷಯ ಮಾತನಾಡ್ಬೇಕು. ನನಗೂ ವಯಸ್ಸಾಯ್ತು. ಇನ್ಯಾ ರಿದಾರೆ ಹೇಳಿ?" ಕೃಷ್ಣಪ್ಪನವರು ತೋರುತ್ತಿದ್ದ ವಿಶ್ವಾಸವನ್ನು ಕಂಡು ಮೂಕನಾಗಿ ವೆಂಕ ಟರಾಮಯ್ಯ ಉತ್ತರವಿತ್ತ; "ಏನು ಹೇಳ್ಬೇಕೋ ತೋಚ್ತಾ ಇಲ್ಲ ಮಾವ.ಇನ್ನೆರಡು ವಾರಬಿಟ್ಕೊಂಡು ಪುನಃ ಬರ್‍ತೀನಿ." "ಹಾಗೇ ಮಾಡಿ- ಏಳೆಂಟು ದಿವಸದ ರಜಾ ಪಡಕೊಂಡು ಬನ್ನಿ,"