ಪುಟ:Ekaan'gini.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾ೦ಗಿನಿ ೧೪೩ ತಾವು ಊಹಿಸಿದ್ದುದಕ್ಕಿಂತಲೂ ಒಂದು ತೂಕ ಹೆಚ್ಚಾಗಿತ್ತು ಆಳಿಯನ ಹಿ೦ಮೆ. ವೆಂಕಟರಾಮಯ್ಯನ ಮಾತು ಕೇಳಿ ಕೃಷ್ಣಪ್ಪನವರ ಗ೦ಟಲು ಕಟ್ಟಿತು. “ನನಗೆ ಗಂಡು ಮಕ್ಕಳಿಲ್ಲ ವೆ೦ಕಟರಾಮಯ್ಯ.” “ಒಪ್ಪೋದಾದರೆ ಮಗನ ಮೇಲಿಡಬೇಕಾದ ಪ್ರೀತಿ ವಿಶ್ವಾಸಾನ ನನ್ನ ಮೇಲಿಡಿ, ಅಳಿಯದೇವರು-- ಆನರು -ಇವರು ಅಂತ ಗಾವುದ ಆಚೆಗೆ ಇಡ ಬೇಡಿ.” “ಅಪ್ಪಾ! ನಿನಗೆ ಮಗಳನ್ನು ಕೊಟ್ಟು ನಾನು ಧನ್ಯನಾದೆ. ಯಾವ ಘಳಿ ಗೇಲಿ ಭಗವಂತ ಈ ಸಂಬಂಧ ಕುದುರಿಸಿದ್ನೋ !" “ಹಣದ ವಿಷಯ ಮಾತ್ರ ಇನ್ನು ಪ್ರಸ್ತಾಪ ಮಾಡ್ಬೇಡಿ,” “ಆಗಲಿ ಪ್ರಸ್ತಾಪ ಮಾಡೋದಿಲ್ಲ, ಆದರೆ ಕೊನೇ ಇತ್ಯರ್ಧವನ್ನೂ ಮಾಡೋದಿಲ್ಲ. ದೇವರು ಆ ಹೊತ್ತಿನಲ್ಲಿ ಹ್ಯಾಗೆ బుద్ధి ಕೊಡ್ತಾನೋ ಹಾಗ್ಮಾಡ್ತೀನಿ." ಬೆಂಗಳೂರಿಗೆ ನಾದಿನಿಯೊಡನೆ ಮಾವ ಹೊರಟು ಹೋಗುವ ವಿಷಯ ವೆಂಕಟರಾಮಯ್ಯನಿಗೆ ಒಪ್ಪಿಗೆಯಾಗಿತ್ತು, ಯಾವ ಪ್ರಯತ್ನವಿದ್ದರೂ ಅಲ್ಲಿಯೇ ಇದ್ದು ಮಾಡುವುದು ಶ್ರೇಯನ್ಕರ— ಎನ್ನುವುದು ಆತ ವ್ಯಕ್ತಪಡಿ ಸಿದ ಅಭಿಪ್ರಾಯ. "ನಿಮಗೆ ಗೊತ್ತಿದೆಯೋ ಇಲ್ಲವೋ, ಬೆಂಗಳೂರು ನನಗೆ ಪರಿಚಯದ ಊರೇ, ನಮ್ಮ ಸೊಸೈಟಿಗೆ ಸಾಮಾನು ಕೊಂಡುಕೊಳ್ಳೋದಕ್ಕೇಂತ ಹಿ೦ದೆ ತಿಂಗಳಿಗೊಮ್ಮೆಯಾದರೂ ನಾನಲ್ಲಿಗೆ ಹೋಗ್ತಿದ್ದೆ.” “ಹಾಗೇನು ? ಬೆ೦ಗಳೊರಲ್ಲಿ ಎಲ್ಲಿರ್ತಿದ್ರಿ? ” “ಸೋಮಶೇಖರ ಅಂತ ನನ್ನ ಬಾಲ್ಯ ಸ್ನೇಹಿತ ಒಬ್ಬ ಅಲ್ಲಿದಾನೆ. ಅವನ ಹುಟ್ಟೂರು ಶಿವಮೊಗ್ಗಾ, ಹೋದಾಗಲೆಲ್ಲ ಅವನಲ್ಲಿರೋದು ಪದ್ಧತಿ.” ಆ ಗೆಳೆಯನ ಉದ್ಯೋಗವೇನೆಂದು ಹೇಳಲಿಲ್ಲವೆಂದು ವೆಂಕಟರಾಮಯ್ಯ ಮು೦ದುವರಿದ; "ಆತ ಆಡ್ವೇಕೇಟು. ಒಳ್ಳೇ ವ್ರಾಕ್ಟೀಸಿದೆ" “ಹೌದೆ?” ಎಂದರು ಕೃಷ್ಣಪ್ಪನವರು. “ಸರಿ, ಇನ್ನು ಈ ಊರಿಗೆ ಬರೋ