ಪುಟ:Ekaan'gini.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪ ಏಕಾ೦ಗಿನಿ

ಬದಲು ನೀವು ಬೆ೦ಗಳೊರಿಗೆ ಬ೦ದರಾಯ್ತು. ಇನ್ನೊಬ್ಬರ ಮನೇಲಿ ಯಾಕೆ ? ನಿಮ್ಮ ಮನೇಲೇ ನೀವು ಉಳಕೋಬಹುದು,” ಎಂದೊ ಹೇಳಿದರು ಮೊದಲ ಮಳೆಗೆ ಹಸುರು ಮೊಳೆತ ಕೆರೆಯ ಏರಿಯೆಲ್ಲಾ ಸುಂದರವಾಗಿ ತೋರುತಿತ್ತು, ದೂರದಲ್ಲಿದ್ದ ಬೆಟ್ಟಿದಾಚೆಗೆ ನೊ ಡುತ್ತಿದ್ದವರ ಕಣ್ಣು ತಪ್ಪಿಸಿ ಧುಮುಕಲು, ಸೊರ್ಯ ಸನ್ನದ್ಧನಾಗುತಿದ್ದ. ಕೆ೦ಪನೆಯ ಕಿರಣಗಳು ಮೇಲೆ ಬಿದ್ದು ಕೆರೆಯ ನೀರು ರಕ್ತರಂಜಿತವಾಗಿತ್ತು. ಆ ದೃಶ್ಯವನ್ನು ಶಾಂತನಾಗಿ ದಿಟ್ಟಸುತ್ತ ಕುಳಿತಿದ್ದ ಅಳಿಯನ ಮುಖ ವನ್ನು ಕೃಷ್ಣಪ್ಪನವರು ನೋಡಿದರು. ಸ್ವಲ್ಪ ಕಾಲದ ಹಿ೦ದೆ ಆಟದ ಬಯ ಲೊ೦ದರ ಅ೦ಚಿನಲ್ಲಿ ಬೇರೊಬ್ಬ ಅಳಿಯ ಜೊತೆಗೆ ಕುಳಿತಿದ್ದುದು ನೆನಪಾಗಿ, ಆವರ ಕಣ್ಣು ಮ೦ಜಾಯಿತು.

                                                                    ೧೮

ಮನೆಯ ಮಾರಾಟ ಸುಲಭವಾಗಿರಲಿಲ್ಲ ದುಡ್ಪು ಎಲ್ಲರ ಕೈಯಲ್ಲೂ ಬಿಗಿ ಯಾಗಿತ್ತು. ಆಸಕ್ತಿ ತೋರಿಸಿದ ಒಬ್ಬಿಬ್ಬರು ಬಲು ಕಡಮಗೆ ಕೇಳಿದರು ವಿಜಯಾ ಗಂಡನ ಮನೆಗೆ ಹಿಂತಿರುಗಿ ಆಗರ ಮೂರು ವಾರಗಳಾಗಿದ್ದುವು. ಆದರೂ ಬೆ೦ಗಳೂರಿಗೆ ಮನೆ ಬದಲಾಯಿಸುವ ಯೋಜನೆ ಕೈಗೂಡಲಿಲ್ಲ ಒಬ್ಬಿಬ್ಬರು ಹಿತಚಿಂತಕರು ಹೇಳಿದರು; “ಆತುರ ಪಡೇಡಿ ನೀವು ಆತುರ ತೋರಿಸಿದರೆ ಇನ್ನೂ ಕಡಮೆಗೆ ಕೇಳ್ತಾರೆ." ಮಾರಾಟದ ಯತ್ಯವನ್ನು ದಳ್ಳಾಳಿಗಳಿಗೆ ಒಪ್ಪಿಸಲು ಕೃಷ್ಣಪ್ಪನವರು ಮೊದಲು ಸಿದ್ಧರಿರಲಿಲ್ಲ. ಕೊನೆಗೆ ಆವರಿಗೆ ತೋರಿದ ಹಾದಿ ಅದೊಂದೇ. ಈ ನಡುವೆ ಕೃಷ್ಣಪ್ಪನವರೊಮ್ಮೆ ಬೆಂಗಳೂರಿಗೆ ಹೋಗಬಂದರು. ಅವರು ಹೋದುದು, ತಮ್ಮ ತೀರ್ಮಾನವನ್ನು ಕುರಿತು ರಾಮಕೃಷ್ಣಯ್ಯನೊಡನೆ ಮಾತನಾಡಲು, ಸಣ್ಣದೊಂದು ಮನೆ ಹುಡುಕಿ ಇಡೆಂದು ಹೇಳಲು. ಹಿಂತಿರುಗಿದ ತಂದೆಯನ್ನು ಸುನಂದಾ ಕೇಳಿದಳು;