ಪುಟ:Ekaan'gini.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೧೪೫

“ರಾಧಮ್ಮನವರನ್ನು ಕಂಡಿದ್ದಿಯಾ ಅಪ್ಪ?”
“ಇಲ್ಲ ಸುನಂದಾ. ಪುರಸೊತ್ತಾಗಲಿಲ್ಲ. ಇನ್ನು ಹ್ಯಾಗೂ ಅದೇ ಊರಿಗೆ.

ಹೋಗ್ತೇವಲ್ಲ ನಾವು.”

ಅವರು ಮತ್ತೂ ಒಂದು ಮಾತು ಸೇರಿಸಿದರು.
“ಆತ ಇನ್ನೂ ಅದೇ ಹೋಟ್ಲಲ್ಲಿದಾನೆ."
ಸುನಂದಾ ಮಾತನಾಡಲಿಲ್ಲ. ಅದು ಅವಳಿಗೆ ಮುಖ್ಯ ವಿಷಯವಾಗಿರಲಿಲ್ಲ
“ನೀನು ಬೆಂಗಳೂರಿಗೆ ಹೋಗಿದ್ದ ಸಮಯದಲ್ಲೇ ಅಲ್ಲಿಂದ ನನಗೆ ರಾಧ 

ಮ್ಮನ ಕಾಗದ ಬಂತು. ಓದ್ತೀಯಾ?”

ಕೃಷ್ಣಪ್ಪನವರ ಹಣೆಯ ಮೇಲೆ ಮುಖದಮೇಲೆ ನೆರಿಗೆಗಳು ಮೂಡಿದುವು.
“ಏನು ಬರೆದಿದ್ದಾರೆ?”
“ ನೀನೇ ಓದಿ ನೋಡು.”
ಸುನಂದಾ ಎರಡು ಕಾಗದಗಳನ್ನು ತಂದು ತಂದೆಯ ಕೈಗೆ ಕೊಟ್ಟು

ಹೇಳಿದಳು;

"ಒ೦ದು ರಾಧಮ್ಮನದು. ಇನ್ನೊಂದು ಕುಸುಮಾ ಬರೆದದ್ದು.”
ರಾಧಮ್ಮ ಬರೆದಿದ್ದುದು, ಅವರಿಗಾದ ವಿಚಿತ್ರ ಅನುಭವದ ಕಥೆ. ಅವರು

ತಮ್ಮ ಗಂಡನೊಡನೆ ಒಂದು ಸಂಜೆ, ಪುಟ್ಟಣ್ಣನನ್ನು ಕಾಣಲು ಆತನ ಆಫೀ ಸಿಗೆ ಹೋಗಿದ್ದರು. ಹೊರಗೆ ಕಾಯುತ್ತ ನಿಂತಿದ್ದರು. 'ಆತನನ್ನು ಕಂಡಾಗ ನನ್ನ ಹೊಟ್ಟೆಯಲ್ಲಿ ಕಿಚ್ಚಿಟ್ಟ ಹಾಗಾಯ್ತು.ನೀವು ಇಷ್ಟೊಂದು ಸೊರಗಿದೀರಿ. ಆತನೋ, ಕೊಬ್ಬಿ ಹ್ಯಾಗಿದಾರೇಂತ! ಮುಂದೆ ನಡೆದ ವಿಷಯ ಕೇಳಿ, ಆತ ಗೇಟು ದಾಟಿದ ಕೂಡಲೆ ಅಲ್ಲೆ ಇದ್ದ ನಮ್ಮ ಯಜಮಾನರು ನಮಸ್ಕಾರ ಅಂದರು: ಯಾರು ಎನ್ನುವುದು ಆತನಿಗೆ ಮೊದಲು ಗೊತ್ತಾಗಲಿಲ್ಲವೋ ಏನೋ. ಪ್ರತಿಯಾಗಿ ನಮಸ್ಕಾರ ಅಂದರು: ಅಷ್ಟರಲ್ಲಿ ಅವರ ದೃಷ್ಟಿ ಅಲ್ಲೆ ನಿಂತಿದ್ದ ನನ್ನ ಮೇಲೆ ಬಿತ್ತು ನಾನು ನಮಸ್ಕಾರ ಅಂದೆ. ಆತ ಉತ್ತರ ಕೊಡಲಿಲ್ಲ. ನನ್ನನ್ನೆದುರುಗುಟ್ಟಿ ನೋಡಿದ. ನಮ್ಮ ಯಜಮಾನರು, ನಿಮ್ಮ ಹತ್ತಿರ ಸ್ವಲ್ಪ ಮಾತಾಡ್ಬೇಕಾಗಿದೆ-ಎಂದರು. ಆತ ಏನು ಹೇಳಿದರು ಗೊತ್ತೆ? ನೀವು ಯಾರೋ ನನಗೆ ಗೊತ್ತಿಲ್ಲ. ನನಗೆ ನಿಮ್ಮ ಪರಿಚಯವಿಲ್ಲ. ಮಾತನಾಡೋದಕ್ಕೆ ಪುರಸತ್ತೂ ಇಲ್ಲ, ಹೋಗಿ-ಅಂತ ಅಷ್ಟು ಹೇಳಿ ಆತ

   10