ಪುಟ:Ekaan'gini.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಏಕಾಂಗಿನಿ ೧೪೯

ನಿಂತಿತು.

 ಆದರೆ ಕೃಷ್ಣಪ್ಪನವರು ಪರಿಸ್ಥಿತಿಯನ್ನು ನೋಡುತ್ತಿದ್ದ ರೀತಿಯೇ ಬೇರೆ.

ಅವರ ಅಭಿಪ್ರಾಯದಲ್ಲಿ ಪುಟ್ಟಣ್ಣ, ಮತ್ತು ಸುನಂದಾ ಜತೆಯಾಗಿ ಬಾಳ್ವೆ ಮಾಡಲು ತೊಡಗುವುದು ಮುಖ್ಯ , ಮನಸ್ಸುಗಳ ಮಿಲನ ಆ ಬಳಿಕ.ತಮ್ಮ ಮಗಳನ್ನು ವರಿತ್ಯಕ್ತ ಪತ್ನಿಯಾಗಿ ಕಲ್ಪಿಸಿಕೊಳ್ಳುವುದು ಅವರಿಂದ ಸರ್ವಥಾ ಸಾಧ್ಯವಿರಲಿಲ್ಲ, ಹೀಗಾಗಿ, ಪ್ರತಿಕೂಲವಾಗಿಯೇ ಸಾವಿರ ಸಾಕ್ಷ್ಯಗಳು ಕಂಡರೂ ಅಳಿಯನೂ ಮಗಳೂ ಒ೦ದಾಗಬೇಕೆಂಬ ಆಸೆಯನ್ನು ಅವರು ಬಿಟ್ಟುಕೊಡಲಿಲ್ಲ.

 ಆ ಆಸೆ ಫಲಿಸುವುದು ಸಾಧ್ಯವಿದ್ದರೆ, ಅದು ಬೆ೦ಗಳೂರಲ್ಲೇ ಆ ಊರಲ್ಲಿ

ವಾಸವಾಗಿದ್ದರೆ ಮಾತ್ರ ನಿರಂತರ ಯತ್ನ ನಡೆಸಬಹುದು

 ತಂದೆಯ ಯೋಚನೆಗಿಂತ ಮಗಳದು ಭಿನ್ನವಾಗಿತ್ತು. ಬೆಂಗಳೂರು ದೊಡ್ಡ

ಊರು, ಪ್ರಾಯಶಃ ಸ್ವಚ್ಚಂದವಾಗಿ ಉಸಿರಾಡುವುದಾದರು ಅಲ್ಲಿ ಸಾಧ್ಯವಾಗಬಹುದು.ಸರಸ್ವತಿಯ ಬೆಳವಣಿಗೆಗೆ ಆ ವಾತಾವರಣವೇ ಮೇಲು ಎನಿ ಸಿದ್ದರೂ ಈಗಿರುವ ಗವಿಯನ್ನು ಬಿಟ್ಟು ಹೊರಹೋಗುವುದಗತ್ಯ.ಅಲ್ಲಿ ಕಾದಿರು ವುದೂ ಆಪತ್ತೇ ಎನ್ನೋಣ ಆಗಲಿ.ಆದರೆ ಈಗಾಗಲೇ ಒದಗಿರುವುದ್ದಕ್ಕಿಂತ ಅದು ಹೆಚ್ಚು ಕರಿಣದ್ದೆನಿಸುವುದು ಸಾಧ್ಯ ಉಂಟೆ?

  ....ಕೃಷ್ಣಪ್ಪನವರು ಸೋತಿದ್ದ ಕಡೆ ದಳ್ಳಾಳಿ ಯಶಸ್ವಿಯಾದರು.ಮನೆ

ಕೊಂಡವರ ಕೈಬಿಟ್ಟುದು ನಾಲ್ಕು ಸಾವಿರದ ಐನೂರು. ಕೃಷ್ಣಪ್ಪನವರ ಕೈ ಸೇರಿದುದು ಮೂರು ಸಾವಿರದ ಐನೂರು.

 ಕೊಂಡುಕೊಂಡ ಗುಣಪಾಲಯ್ಯ ಶೆಟ್ಟರು ಮನೆಯ ಮುಂದೆ ನಿಂತು

ಹೇಳಿದರು :

 "ಈ ರೂವಾನೇ ಬದಲಾಯಿಸ್ಬೇಕು . ಎದುರಿಗೆಲ್ಲಾ ತಾರಸಿ ಕಟ್ಟಿಸಿ

ದೊಡ್ಡದ್ಮಾಡ್ಬೇಕು. ಒಳ್ಳೇ ಗೂಡು ಇದ್ದ ಹಾಗಿದೆ!”

 ಆ ಮಾತನ್ನು ಕೇಳಿದ ಕೃಷ್ಣಪ್ಪನವರು ಉಗುಳುನುಂಗಿ ನಗಲೆತ್ನಿಸಿದರು. 

ಈಗ ಆ ಮನೆ ತಮ್ಮದಲ್ಲವಲ್ಲ! ಪರಕೀಯನಾಗಿ ಅದನ್ನು ನೋಡುತ್ತಾ ನಿಜವಾಗಿಯೂ ಕಟ್ಟಡ ಪುಟ್ಟದಾಗಿಯೇ ಇದೆ, ತಮಾಷೆಯಾಗಿಯೇ ಇದೆ-- ಎಂದು ಅವರು ಸ್ವತಃ ನಂಬಿದರು.