ಪುಟ:Ekaan'gini.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨ ಏಕಾಂಗಿನಿ

     "ಆ ದಿನ ಹೇಳಿದ್ದಿರಲ್ಲ. ನಿಮ್ಮ ಸ್ನೇಹಿತರು ಯಾರೋ ವಕೀಲರೂ೦ತ.

ಅಲ್ಲಿಗೇನಾದರೂ ಹೋಗ್ತಿರಾ?"

    “ಹೌದು,” ಎಂದ ವೆಂಕಟರಾಮಯ್ಯ, ಮಾವನ ಮನಸ್ಸಿನಲ್ಲೇನಿತ್ತೆಂದು 

ತಿಳಿಯಲು ಯತ್ನಿಸುತ್ತಾ,

    “ನಾನೂ ಬರಲಾ? ಪರಿಚಯ ಮಾಡ್ಕೊಡಿ. ನಮ್ಮವರೇ ಅಂದ್ಮೇಲೆ-"
    "ಬನ್ನಿ ಬನ್ನಿ .."
     ಬಸವನಗುಡಿಯಲ್ಲಿತ್ತು ವಕೀಲ ಸೋಮಶೇಖರನ ಮನೆ. ತೀಕ್ಷ್ಣ 

ನೋಟದ, ಹಸನ್ಮುಖಿಯಾದ, ಮನುಷ್ಯ. ವೆಂಕಟರಾಮಯ್ಯನ ವಯಸ್ಸೇ. ಅದೇ ತಾನೆ ಕೋರ್ಟಿನಿಂದ ಬಂದು ಉಡುಪು ಬದಲಾಯಿಸಿದ್ದ ಆತ. ಒಳಕ್ಕೆ ಬಂದ ಗೆಳೆಯನನ್ನು ನೋಡಿದ. ಮಲೆನಾಡಿನಿಂದ ಯಾರೋ ಕಕ್ಷಿಗಾರರನ್ನೂ ಕರಕೊಂಡು ಬಂದ ಹಾಗಿತ್ತು.

   “ಬಾರೋ. ಯಾವಾಗ್ಟಂದೆ?”
   ಉತ್ತರದ ನಿರೀಕ್ಷೆ ಮಾಡದೆಯೇ ಒಳ ಬಾಗಿಲ ಕಡೆ ನೋಡಿ ಸೋಮ 

ಶೇಖರನೆಂದ:

    “ಸೀತಾ, ವೆಂಕ್ಟು ಬಂದಿದಾನೆ."
     ವೆಂಕಟರಾಮಯ್ಯನೂ ಕೃಷ್ಣ್ಪನವರೂ ಕುಳಿತುಕೊಳ್ಳುವ ಹೊತ್ತಿಗೆ 

ಬಳೆಗಳ ಸದ್ದಾಯಿತು.

     “ಇದೇನ್ರೀ? ಈ ಸಲವೂ ಒಬ್ಬರೇ ಬಂದಿರಾ? ಹೀಗೇನಾ ನೀವು ಪ್ರಾಮಿಸು 

ನಡೆಸ್ಕೊಡೋದು?” ಎಂದಿತು ಹೆಣ್ಣು ಧ್ವನಿ.

      ವೆಂಕಟರಾಮಯ್ಯ ನಕ್ಕು, “ಇವರೇ ನನ್ನ ಮಾವ,” ಎಂದು ಕೃಷ್ಣಪ್ಪನ

ವರ ಪರಿಚಯ ಮಾಡಿಕೊಟ್ಟ,

      ಸೋಮಶೇಖರ–ಸೀತಾ ಇಬ್ಬರೂ, “ನಮಸ್ತೇ” ಎಂದರು. ಯಾರೋ 

ಕಕ್ಷಿಗಾರರೂಂತ್ತಿದ್ದ --ಎಂದು ಮಾತು ಸೋಮಶೇಖರನ ಬಾಯಿಗೆ ಬಂತಾ ದರೂ ಆಭಾಸವಾಗುವುದೆಂದು ಆತ ಅದನ್ನು ಆಡಲಿಲ್ಲ,

      ಒಳಗಿನಿಂದ ಮುದ್ದಾದ ಪುಟ್ಟ ಹುಡುಗನೊಬ್ಬ ಓಡುತ್ತ ಬಂದು, 

“ಮಾಮ! ಎ೦ದ.

      “ಬಾ," ಎಂದು ವೆಂಕಟರಾಮಯ್ಯ ಹುಡುಗನನ್ನು ಕರೆದ.