ಪುಟ:Ekaan'gini.pdf/೧೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


               ಏಕಾಂಗಿನಿ              ೧೬೩ 

ಪುಟ್ಟಣ್ಣನ ಕಣ್ಣಗಳು ಮಾವನನ್ನು ಕಂಡುವು. ಅನಿವಾರ್ಯವಾಗಿ ಕೃಷ್ಣಪ್ಪನವರು, “ಅಪ್ಪಾ” ಎಂದರು-ಮಮತೆಯ ಎಳೆಯನನ್ನು ಕುರಿತು ಹಿರಿಯರು ಸಂಬೋಧಿಸುವ ಹಾಗೆ. ಪುಟ್ಟಣ್ಣ ಸರಕ್ಕನೆ ತಿರುಗಿ ನುಡಿದ: “ಸುವ್ವರ್! ಇಷ್ಟು ವಯಸ್ಸಾದರೂ ಬೇಡೋಕೆ ನಾಚ್ಗೆ ಅಗಲ್ಲ ನಿಂಗೆ" ಕೃಷ್ಣಪ್ಪನವರು ಗಾಬರಿಯಾದರು. ಅಳಿಯನಿಗೆ ತನ್ನ ಪರಿಚಯ ಆಗಲೇ ಇಲ್ಲವೆಂದುಕೊಂಡರು. “ನಾನು, ಪುಟ್ಟಣ್ಣ!” “ನೀನೊ? ನಿನ್ನಪ್ಪನೋ ಕದಿಯೋಕೆ ನೋಡ್ತೀಯಾ? ಮುಚ್ಚು ಬಾಯಿ. ಹಿಡಿದು ಪೋಲೀಸರಿಗೆ ಕೊಡ್ತೀನಿ!” ಕಾಲು ಹಾದಿಯ ಮೇಲೆ ಅತ್ತಿತ್ತ ನಡೆಯುತಿದ್ದ ಜನ ಅಲ್ಲೆ ನಿಂತರು. ಗುಂಪು ಸೇರಿತು. “ನನ್ನ ಗುರುತು ಸಿಗಲಿಲ್ವೆ ಪುಟ್ಟಣ್ಣ? ನನ್ನ ಮಗಳನ್ನ–” “ನೋಡ್ರಿ ಈ ಮನುಷ್ಯನನ್ನ [ಅಷ್ಟು ಇಂಗ್ಲಿಷಿನಲ್ಲಿ,ಬಳಿಕ ಕನ್ನಡ] ತನ್ನ ಮಗಳನ್ನ ಮಾರ್ತಾನಂತೆ. ತಲೆ ಹಿಡುಕ ಬಡ್ಡಿ ಮಗ!” ಉದ್ದೇಶ ಪೂರ್ವಕವಾಗಿಯೇ ಈತ ತಮ್ಮನ್ನು ಅವಮಾನಿಸುತ್ತಿರುವ ನೆಂದು ಕೃಷ್ಣಪ್ಪನವರಿಗೆ ಹೊಳೆಯಿತು. ಅವರ ಮೈ ಕಂಪನ ಬಲವಾಯಿತು ಬಡಕಲು) ಮುಖವೂ ಕೆಂವೇರಿ ಬೆವರೊ ಡೆಯಿತು. ಉಸಿರು ಕಟ್ಟಿದಂತಾ ಯಿತು ಅವರಿಗೆ ಅ ವರು ಕೂಗಾಡಿದರು: " ಪಾಪಿ, ಚಂಡಾಲ! ಏನಂದೆ?" ಪುಟ್ಟಣ್ಣನನ್ನು ಹೊಡೆಯಲೆಂದು ಮೇಲೆತ್ತಿದ ಅವರ ಕೈಯನ್ನು ಯಾರೊ ಹಿಡಿದರ. ಆದರೆ ಅವರ ಸ್ವರ ನಿಲ್ಲಲಿಲ್ಲ. “ಕೈ ಹಿಡಿದ ಹೆಂಡತೀನ ಭಿಕಾರಿಯಾಗಿ ಮಾಡಿ_” ಯಾರೋ ನಕ್ಕರು. “ಇಷ್ಟು ವಯಸ್ಸಾದ್ಮೇಲೂ ಇಂಧ ನೀಚ ಕೆಲಸಕ್ಕಿಳಿದಿದಾನಲ್ಲಾ!” ಎಂದಿ ತೊಂದು ಮೂದಲಿಕೆಯ ಸ್ವರ. “ಎಲ್ಲಿ ಮಡಗಿದಿಯೋ ನಿನ್ನ ಮಗಳನ್ನ? ಹೆಂಗೆ ರೇಟು?”