ಪುಟ:Ekaan'gini.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ

         ಗೆಳತಿಯ ಮೌನ ಕುಸುಮಗೆ ಅರ್ಥವಾಗದಿರಲಿಲ್ಲ.  ವಿಷಯ ಗಹನ
ವಾಗಿರುವುದರಿಂದಲೇ  ಈ ಅಳುಕು.  ಆ ವಿಷಯವೇ,
      'ಹೇಳಿ'....ಎಂದು ಮತ್ತೊಮ್ಮೆ ಆಕೆ ಸೂಚಿಸಲಿಲ್ಲ. ನೆಲವನ್ನು  ದಿಟ್ಟಿಸು

ತ್ತಿದ್ದ ಸುನಂದೆಯ ಮುಖವನ್ನೆ ನೋಡುತ್ತಾ ಸಹನೆಯಿಂದ ಕುಸುಮಾ ಕಾದುಕುಳಿತಳು.

     ಬಂದುದಾಗಿತ್ತು.  ಈಗ ಮಾತನಾಡದೆಯೆ ಹಿಂತಿರುಗುವುದು  ಸಾಧ್ಯಾ

ವಿರಲಿಲ್ಲ. ಒಳ್ಲೆಯ ಸಂದಿಗ್ಧ ಎಂದುಕೊಂಡು ಸುನಂದಾ ಕಾಲ ಬೆರಳನ್ನು ನೆಲಕ್ಕೆ ತೀಡಿದಳು (ಉಗುರು ಬೆಳೆದಿತ್ತು. ತೆಗೆದೇ ಇರಲಿಲ್ಲ )

  ಇನ್ನೂ ಸುಮ್ಮನಿದ್ದು ನಗೆಗೀಡಾಗುವುದರಲ್ಲಿ ಅರ್ಥವಿಲ್ಲವೆಂದು ಸುನಂದಾ

ಬಾಯಿ ತೆರೆದಳು.

 " ನನಗೆ ಜೀವನ ಬೇಸರವಾಗಿದೆ ಕುಸುಮಾ "

ಅದನ್ನು ಕೇಳಿ ಕುಸುಮಳಿಗೆ ಸಂಕಟವಾಯಿತು. "ಇದೇನು ಸುನಂದಕ್ಕ ನೀವು ಹೇಳ್ತಿರೋದು ? ಯಾಕೆ ಈ ಮಾತು ?"

" ನನ್ನಿಂದಾಗಲ್ಲ ಕುಸುಮಾ. ನಾನು ಇದ್ದು ಯಾರಿಗೂ ಪ್ರಯೋಜನವಿಲ್ಲ. ಎಲ್ಲರಿಗೂ ತೊಂದರೆಯೇ.""ಯಾರು ಹಾಗಂದೋರು ? ಏನಾಗಿದೆ ನಿಮಗೆ ?"

 ಸುನಂದೆಯ ಕಣ್ಣುಗಳು ತೇವೆಗೊಂಡವು.  ಗೆಳತಿ ಇನ್ನು ಅಳುತ್ತಾಳೆ,

ಆಕೆ ಅಳುವುದೇ ಮೇಲು, ಎನಿಸಿತು ಕುಸುಮೆಗೆ.

ಆದರೆ ಆ ತೇವ ಆರಿತು. ಅಳಲಿಲ್ಲ ಸುನಂದಾ.

"ನನಗಿಲ್ಲ್ಲದೆ ಹೋದರೂ ನನ್ನ ತಂದೆಗೆ ಆಸೆ ಇತ್ತು.....ಆತ ಬದಲಾಯಿ ಸ್ತಾನೆ ಅಂತ. ಈಗ ಆ ತಂದೆಗೇ ಎಂಥ ಅನುಭವವಾಯ್ತು ಗೊತ್ತೆ ? ನೀವು ಕನಸಿನಲ್ಲೂ ಊಹಿಸೋಕೆ ಆಗದಂಥ ಕಥೆ....ಹೇಳ್ಲೆ ?"

......ಕುಸುಮಾ ಕೇಳಿದಳು ಕೇಳುತ್ತ ಆಕೆಯ ಮೈ ಮುಳ್ಳಾಯಿತು ಆ ಕತೆ ಮುಗಿದಾಗ ಸುನಂದೆಯ ದೇಹ ಕುಗ್ಗಿತು...ಮಾತನಾಡುವ ಶಕ್ತಿಯೇ ತನಗೆ ಉಡುಗಿ ಹೋದಂತೆ ಅನಿಸಿತು ಕುಸುಮೆಗೆ.

ದೀರ್ಘವಾಗಿ ಉಸಿರೆಳೆದು ಬಿಡುತ್ತಾ, ಸುನಂದಾ ಮೆಲ್ಲನೆ ಚೇತರಿಕೊಂ ಡಳು