ಪುಟ:Ekaan'gini.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಏಕಾಂಗಿನಿ “ಅದಕ್ಕೇನಂತೆ?” ಸೀತಮ್ಮ ಎದ್ದಳು. 'ನೀವೂ ಕೂತ್ಕೊಳ್ಳಿ" ಎ೦ದಳು ಸುನಂದಾ, " ಂದೆ", ಎನ್ನುತ್ತ, ಕಾಫಿಯ ಲೋಟಗಳನ್ನು ಒಳಗಿರಿಸಿ, ಗಿರೀಶನನ್ನು ಪಕ್ಕದ ಮನೆಗೆ ದಾಟಿಸಿ, ಸೀತಮ್ಮ ಬಂದಳು.

   ಸುನಂದಾ ಆರಂಭಿಸಿದಾಗಲೇ ಸೋಮಶೇಖರನೆಂದ:

"ನಿಮ್ಮ ಭಾವ ಈ ವಿಷಯವೆಲ್ಲಾ ಆಗಲೆ ಹೇಳಿದಾರೆ." “ಅವರು ಹೇಳಿದ್ದು ಒಂದು ರೀತೀಲಿ ಒಳ್ಳೇದೇ ಆಯ್ತು, ಆದರೆ ಅದೇ ಪೂರ್ಣ ಕಥೆಯಲ್ಲ,” “ಅದೂ ನಿಜ, ಅನ್ನಿ" ಸುನ೦ದಾ ಮಾತನಾಡುತ್ತಿದ್ದಂತೆ ವಿವಿಧ ಭಾವನೆಗಳು ಸೀತಮ್ಮನನ್ನು ಕಾಡಿದುವು. 'ಇಷ್ಟು ಓದಿ ತಿಳಕೊಂಡಿರೋ ಹೆಣ್ಣು ಇಷ್ಟೊಂದು ಕಷ್ಟ ಅನುಭವಿ ಸ್ಟೇಕಾಯ್ತೆ?” 'ಈಕ ಧೈರ್ಯವಂತೆ' ಅಬ್ಬ! ನನಗೆಲ್ಲಾದರೂ ಪುಟ್ಟಣ್ಣನಂಧ ಗಂಡ ದೊರೆತಿದ್ದರೆ ನಾನು ಸತ್ತೇಹೋಗ್ಲಿದ್ದೆ,' 'ಈಕೆ ಈಗ ಯಾವ ಪರಿಹಾರ ಹೋಚಿಸ್ತಿದಾಳೆ? 'ನನ್ನ ಗ೦ಡನಿ೦ದಾಗೋ ಸಹಾಯ ಎ೦ಥದು?

   ಸೋಮಶೇಖರನಿಗೊ ಉಸಿರು ಕಟ್ಟುವ ಹಾಗಾಯಿತು.
   ಆಕೆ ಬರಿಯ ಸಹಾನುಭೂತಿಯ ಮಾತಿಗಾಗಿ ಬಂದಿರಲಿಲ್ಲ.
  "ನೀವು ನನ್ನ ಒಡಹುಟ್ಟಿದವರೊಂತ್ಲೆ ಇಟ್ಕೊಳ್ಳಿ. ಆಗ ಏನು 

ಸಲಹೆ ಕೊಡ್ತಿದ್ರಿ ?”

 ಕಕ್ಷಿಗಾರರೆದುರು ಮಾತಿನ ಮಹಾ ನಿವ್ರಣನಾಗುವ ವಕೀಲರು ಈ ದಿನ 

ತಡವರಿಸಬೇಕಾಯಿತು. ಆದರೊ ಸೋಮಶೇಖರನೆಂದ:

     "ಅದು ಒಡಹುಟ್ಟಿದವನ ದೃಷ್ಟಿಕೋನದ ಮೇಲೆ ಹೊಂದಿಕೊಂಡಿದೆ." 

“ "ಅಂದರೆ ?” “ಆತ ಸಂಪ್ರದಾಯವಂತನಾದರೆ, ನಿಮ್ಮ ಹಳೇ ಬರಹ–ಎನ್ನಬಗದು. ನಿನ್ನನ್ನು ತುಂಬಾ ಪ್ರೀತಿಸಿದಗೂ ಹೈ ನಾಹಕ್ಕೆ ಎದುರು ಥೋಗೋ ಶಕ್ತಿ ಇಲ್ಲದೆ ಇದ್ದರೆ, ಮೌನವಾಗಿ ದುರುಗ ಬಹುದು.. ಬದಲು, ಬಹಳ ಧೈರ್ಯ ವಂತನಾದರೆ ಆ ಸಂಬಂಧವನ್ನು ಕಡಿದುಕೋ-ಅಂತ ಹೇಳಬಹುದು.”