ಪುಟ:Ekaan'gini.pdf/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಏಕಾಂಗಿನಿ ಸೀತಮ್ಮ ಗಂಡನ ಮುಖ ನೋಡಿದಳು. ಅವರಿಬ್ಬರನ್ನೊ ಸುನಂದಾ ದಿಟ್ಟ ಸಿದಳು.

     "ನಾನು ಯಾವುದೋ ನಿರ್ಧಾರ ಮಾಡೋ ಧೈರ್ಯ ಇದೆಯೇ ಆಂತ

ನನ್ನನ್ನು ನಾನೇ ಪರೀಕ್ಷೆ ಮಾಡ್ಕೋತಾ ಇದೀನಿ.”

    “ನಿಮ್ಮ ಸಂಕಟದ ಎದುರಿಗೆ ಮಾತೇ ಹೊರಡೋದಿಲ್ಲ.”
     "ವಕೀಲರು ತು೦ಬಾ ತಣ್ಣಗಿರಬೇಕಲ್ಲವೆ -ಡಾಕ್ಟರ ಹಾಗೆ? ಇಬ್ಬರಲ್ಲೂ

ಭಾವೋದ್ವೇಗ ಸಲ್ಲದು ಅಂತ ಎಲ್ಲಿಯೋ ಓದಿದ್ದೆ.”

     ಸೋಮಶೇಖರ ನಗಲು ಯತ್ನಿಸಿದ.
     “ಎಷ್ಟಾದರೂ ಮನುಷ್ಯ ಮನುಷ್ಯನೇ”
    “ಧೈರ್ಯವಂತನಾದ ಅಣ್ಣನೇ  ಇದ್ದು ಧೈರ್ಯದ ಸಲಹೆಯನ್ನು ಕೊಟ್ಟ 

ಆಂತಿಟ್ಕೊಳ್ಳೋಣ. ಅಂಧ ಸಂದರ್ಭದಲ್ಲಿ ಕಾನೂನು ಏನು ಹೇಳುತ್ತೆ ತಿಳಿಸ್ತೀರಾ?"

 ಸೋಮಶೇಖರ ಎದ್ದು ಹೋಗಿ ಸರ್ಕಾರಿ ಗೆಜೆಟ್ಟನ್ನು ಎತ್ತಿಕೊಂಡು ಬಂದ. 

ಹಾಳೆಗಳನ್ನು ತೋರಿಸುತ್ತ, “ಇದು ಹೊಸತಾಗಿ ಜಾರಿಗೆ ಬಂದಿರೋ ಹಿಂದೂ ವಿವಾಹ ಶಾಸನ', ಎಂದ.

   ಸುನಂದಾ ಶಿಲಾಪ್ರತಿಮೆಯಂತೆ ಕುಳಿತಳು ಸೀತಮ್ಮ ಗೋಡೆಗೊರಗಿದಳು.

ಸೋಮಶೇಖರ ಆರಂಭಿಸಿದ.

  "ಗ೦ಡ ಹೆ೦ಡಿರ ನಡುವೆ ವಿರಸ ಏರ್ಪಟ್ಟು ಅದನ್ನು ಪರಿಹರಿಸೋಕೆ

ಸಾಮಾನ್ಯ ಪ್ರಯತ್ನಗಳೆಲ್ಲ ವಿಫಲವಾದಾಗ ಕಾನೂನು ಮೂರುಮಾಗ್ಗ ತೋರಿ ಸುತ್ತೆ ಗಂಡನೋ, ಹೆಂಡತಿಯೋ ಜತೆಯಾಗಿ ವಾಸಮಾದೋ ಕೆ ಇಷ್ಟವಿಲ್ಲದೆ ಬೇರೆಯಾಗಿದ್ದರೆ, ವ್ಯಧೆಗೆ ಗುರಿಯಾಗುವ ವ್ಯಕ್ತಿ, ದಾಂಪತ್ಯ ಹಕ್ಕುಗಳನ್ನು ದೊರಕಿಸಿಕೊಡ್ಬೇಕೂಂತ ನಾಯಾಧೀಶರಿಗೆ ಅರ್ಜಿ ಹಾಕ್ಬಹುದು. ಅರ್ಜೀನ ಎತ್ತಿ ಹಿಡಿದು ನ್ಯಾಯಾಸ್ಥಾನ ತೀರ್ಪು ಕೊಡುತ್ತೆ ಅಂತಿಟ್ಕೊಳ್ಳೋಣ. ಆಮೇಲೂ ವಿರಸ ಸರಿಹೋಗದಿದ್ದರೆ, ವಿಚ್ಛೇದನಕ್ಕೆ ಅದು ಕಾರಣವಾಗುತ್ತೆ. ಈ ಹೆಜ್ಜೆಯೇ Restitution of Conjugal Rights. ಇನ್ನೊಂದು Judicial Separation ಅಂತ. ಗಂಡನೋ ಹೆಂಡತಿನೋ ಒಬ್ಬರನ್ನೊ ಬ್ಬರು ಬಿಟ್ಟು ಬಿಟ್ಟಿದ್ದರೆ, ಕ್ರೂರವಾಗಿ ವರ್ತಿಸಿದರೆ, ಅವಿಧೇಯತೆಯಿಂದಿದ್ದರೆ,