ಪುಟ:Ekaan'gini.pdf/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಏಕಾಂಗಿನಿ ೧೭೭

  “ಇಲ್ಲ. ಏನೂ  ಇಲ್ಲ. ನಾನು ಸರಿಯಾಗಿದೀನಿ. ಸುಮ್ಮನೆ  ನಿಮ್ಮನ್ನ 

ಗಾಬರಿ ಪಡಿಸಿದೆ. ನನ್ನಿಂದಾಗಿ ಎಲ್ಲರಿಗೂ ತೊಂದರೆ!"

  “ಹಾಗೆಲ್ಲಾ ಮಾತಾಡ್ಬೇಡಿ. ಅನ್ಯಾಯ ಮಾಡೋರ್ದೇ  ರಾಜ್ಯ  ಯಾವಾ 

ಗಲೂ ಇರೋದು ಸಾಧ್ಯವಾ?”

  ಅದು ಸೀತಮ್ಮನ ಧ್ವನಿ.
  ಸುನಂದೆಗೆ ನಾಚಿಕೆ ಎನಿಸಿತು.
  ಸುಂಟರಗಾಳಿ ಎದ್ದ ಹಾಗೆ ಮಧ್ಯಾಹ್ನ  ಮನೆಯಿಂದ ಹೊರಟು ಈ ಸ್ಥಿತಿಗೆ 

ಬಂದೆ- ಎಂದು ಮನಸ್ಸಿನಲ್ಲೆ ಅಂದುಕೊಂಡಳು. ಸರಸ್ವತಿಯ ನೆನಪಾಯಿತು.

  “ನಾನಿನ್ನು ಹೊರಡ್ತೀನಿ. ಸುಮ್ಮನೆ ನಿಮ್ಮ ಸಮಯ ಹಾಳು ಮಾಡ್ಡೆ.”
  ಸಮ್ಮತಿಯನ್ನು ಇದಿರು ನೋಡದೆಯೇ ಆಕೆ ಎದ್ದಳು.
  “ಬಸ್  ಹತ್ತಿಸಿ  ಬರೋಣ?” ಎಂದು ಸೋಮಶೇಖರ  ಹೆಂಡತಿಯನ್ನು

ಕೇಳಿದ.

  "ಬೇಡಿ. ನಾನೊಬ್ಬಳೇ ಹೋಗ್ತೀನಿ.  ದಯವಿಟ್ಟು ಬರಬೇಡಿ," ಎಂದಳು 

ಸುನ೦ದಾ.

  ತನ್ನ ವಿಷಯದಲ್ಲಿ ಸೀತಮ್ಮನಿಗೆ  ಬೇಸರವಾಗಿರಬಹುದೆಂಬುದು  ಆಕೆಯ 

ಅಭಿಪ್ರಾಯವಾಗಿತ್ತು.

  “ಬೇಸರವಾದಾಗಲೆಲ್ಲಾ ಬರ್ತಾ  ಇರಿ.  ಮಗುವನ್ನೂ  ಎತ್ಕೊಂಡ್ಬನ್ನಿ," 

ಎಂದು ಸೀತಮ್ಮ ಹೇಳಿದಾಗ ಸುನಂದೆಗೆ ತುಸು ಆಶ್ಚರ್ಯವಾಗದಿರಲಿಲ್ಲ.

  ಆಕೆ ಹೊರಟು ಹೋದ ಮೇಲೆ ಸೀತಮ್ಮ ಅಂದಳು:
  “ಪಾಪ ನೆನಸ್ಕೊಂಡರೆ ಹಿಂಸೆಯಾಗುತ್ತೆ.  ಹೆಣ್ಣು ಜನ್ಮಕ್ಕೆ ಇಂಥ ಕೆಷ್ಟ 

ಬರಬಾರದು.”

  "ಬಸ್  ಹತ್ತಿಸ್ಬೇಕಾಗಿತ್ತು,"  ಎಂದು  ವಿಷಾದದ ಧ್ವನಿಯಲ್ಲಿ ಸೋಮ 

ಶೇಖರನೆಂದು."

                    ೨೪
  ವಕೀಲರ ಮನೆಯಿಂದ  ಶೇಷಾದ್ರಿಪುರದವರೆಗಿನ ಪ್ರಯಾಣ ದುಸ್ಸಹವಾ 

ಗಿತ್ತು. ಬಸ್ಸಿನೊಳೆಗೇನೋ ನೂಕುನುಗ್ಗಲು ಇರಲಿಲ್ಲ. ಆದರೆ ಹೃದಯ

  12