ಪುಟ:Ekaan'gini.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಏಕಾಂಗಿನಿ ೧೮೫

      ಸುನಂದಾ ಬರಹೇಳಿದ್ದ ವಿಷಯ ಮಾವನಿಗೆ ತಿಳಿಯದೆಂದು ವೆಂಕಟ
 ರಾಮಯ್ಯ ಮಾಡಿದ್ದ ಊಹೆ ತಪ್ಪಾಗಿರಲಿಲ್ಲ. ಹೌದು_ಎನ್ನೋಣ ಎಂದು
 ಯೋಚಿಸುತ್ತಿದ್ದಂತೆಯೇ ಸುನಂದಾ ಹೇಳಿದಳು:
      “ಬನ್ನೀಂತ ನಾನೇ ಬರೆದಿದ್ದೆ ಅಪ್ಪಾ. ವಿಜಯಾ ನಮ್ಮ ಬೆಂಗಳೂರು 
  ಮನೆ ನೋಡೇ ಇಲ್ಲವಲ್ಲ. ಅದಕ್ಕೆ.”
      ತಮ್ಮ ಪ್ರಶ್ನೆಯಿಂದ ಅಳಿಯನ ಆಗಮನ ತಮಗೆ ಇಷ್ಟವಾಗಲಿಲ್ಲ ಎಂಬ
  ಭಾವನೆಯೇನಾದರೂ ಉಂಟಾಗಬಹುದೆಂದು ಹೆದರಿ, ಕೃಷ್ಣಪ್ಪನವರು ಅವಸರ
   ವಾಗಿ ಮಾತು ಸೇರಿಸಿದರು:
      “ಅದು ನಿಜ ಬಂದದ್ದು ಒಳ್ಳೇದೇ ಆಯ್ತು. ಗೌರಿ ಹಬ್ಬಕ್ಕೆ ಬರೋಕಾ
  ಗುತ್ತೇನೋಂತ ಲೆಕ್ಕಹಾಕಿದ್ದೆ. ಮೊದಲೇ ಬಂದಿರಿ, ಅಷ್ಟೆ.”
      “ಅದಕ್ಕೇನು? ಗೌರಿ ಹಬ್ಬಕ್ಕೇಂತಲೇ ಇನ್ನೊಮ್ಮೆ ಬಂದರಾಯ್ತು," 
  ಎಂದಳುಸುನಂದಾ.
      "ಇಲ್ಲವಪ್ಪ. ರಜಾ ಇಲ್ಲ, ಇನ್ನು ಬರೋದು ಯಾವತ್ತು ಸಾಧ್ಯವಾ
  ಗುತ್ತೋ?”
      “ದೀಪಾವಳಿಗೆ ಬರಬಹುದಲ್ಲಾ,” ಎಂದರು ಕೃಷ್ಣಪ್ಪನವರು.
      "ನೋಡೋಣ.”
      “ಅಂದಹಾಗೆ, ಕೆಲಸ ಸಿಕ್ಕಿದ ವಿಷಯ ಸುನಂದಾ ಕಾಗದ ಬರೆದಿದ್ಲು, 
  ಅಲ್ವೆ?"
      “ಯಾರಿಗೆ? ಎಲ್ಲಿ?” ಎಂದು ಉತ್ಸುಕತೆಯಿಂದ ವಿಜಯಾ ಕೇಳಿದಳು.
      ಕೃಷ್ಣಪ್ಪನವರಿಗೆ ಆಶ್ಚರ್ಯವಾಯಿತು.
      “ಬರೀಲೇ ಇಲ್ವೇನೇ ಸುಂದಾ? [ವಿಜಯಳ ಕಡೆ ತಿರುಗಿ] ನಿಮ್ಮಕ್ಕನಿಗೆ
  ಕಣೇ."
      ಅಭಿಮಾನದಿಂದ ವಿಜಯ ಅಕ್ಕನನ್ನು ನೋಡಿದಳು:
      “ ಹೌದಾ ಅಕ್ಕಾ? ಎಷ್ಟೊಳ್ಳೇದಾಯ್ತು! ಎಲ್ಲಕ್ಕ ಕೆಲಸ?”
      ವೆಂಕಟರಾಮಯ್ಯ ಮುಗುಳು ನಗುತ್ತ ನಿಂತ. ಇದನ್ನು ತಿಳಿಸುವುದಕ್ಕೋ
  ಸ್ಕರವೆ ನಾದಿನಿ ಕರೆಸಿರಬಹುದೆ? ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿತು. ಇರ
  ಲಾರದು_ಎಂಬ ಉತ್ತರವೂ ದೊರೆಯಿತು.