ಪುಟ:Ekaan'gini.pdf/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೦ ಏಕಾಂಗಿನಿ

“ಸಾಕು ಮಾವಯ್ಯ, ಮೊದಮೊದಲು, ಆ ವಿಚಿತ್ರ ಮನುಷ್ಯನನ್ನ ನೋಡ ಬೇಕು ಅನ್ನೋ ಕುತೂಹಲ ನನಗಿತ್ತು, ನಿಮ್ಮ ಜತೆಯಲ್ಲೇ ಯಾವತ್ತಾದರೂ

ಹೋಗಿ ಆತನನ್ನ ನೋಡೋಣಾಂತಲೂ ಇದ್ದೆ. ಆದರೆ, ನಾವು ಹೋಗಿ
ನೋಡೋದಕ್ಕೂ ಒಬ್ಬ ಮನುಷ್ಯನಿಗೆ ಯೋಗ್ಯತೆ ಇರಬೇಕು.”

ಆ ಮಾತು ಸರಿ ಎ೦ಬ೦ತೆ ಕೃಷ್ಣಪ್ಪನವರು ತಲೆಯಾಡಿಸಿದರು. ವೆಂಕಟರಾಮಯ್ಯ ಹೇಳಿದ: “ಇದನ್ನು ಹೀಗೇ ಬಿಡೋದು ಸರಿಯಲ್ಲ ಮಾವ. ನಾಳೆ ಆತ ಅತ್ತಿಗೆಗೆ

ತೊಂದರೆ ಕೊಡಬಹುದು. ಮಗೂಗೆ ಅಪಾಯ ಉ೦ಟಗ್ಬಹುದು ಮತಿ
ಕೆಟ್ಟ ಮನುಷ್ಯ ಏನು ತಾನೇ ಮಾಡಲಾರ?"

ಕೃಷ್ಣಪ್ಪನವರಿಗೆ ದಿಗಿಲಾಯಿತು. "ಹಾಗ೦ತಿರಾ?" "ಹೌದು. ಆತ ಸುಮ್ನಿರ್ತಾನೆ ಅನ್ನೊದು ಯಾವ ನ೦ಬಿಕೆ? ನಿಮ್ಮ

ತ೦ಟಿಗೆ ಒ೦ದು ಸಮಯ ಬರಲಿಲ್ಲಾ೦ತ ಇಟ್ಕೊಳ್ಳೋಣ. ಅದರೆ ತಾನೇ 

ಏನಾದರೂ ಮಾದಿದ್ರೂ ಅದರ ಪರಿಣಾನು ನೀವೆಲ್ಲಾ ಅನುಭವಿಸದೆ ಇರೋ ಕಾಗುತೆ?" ರಾಮಕೃಷ್ಣಯ್ಯ ಅಸ್ಪಷ್ಟವಾಗಿ ಈ ವಿಷಯವೆತ್ತಿದ್ದರಾದರೂ ಈಗಿನಷ್ಟು

ಕಾತರ ಹಿಂದೆ ಕೃಷ್ಣಪ್ಪವನವರಿಗೆ ಆಗಿರಲಿಲ್ಲ.

“ಇದಕ್ಕೇನು ಪರಿಹಾರ?" “ಆತನಿಗೂ ನಿಮಗೂ ಸಂಬಂಧವಿಲ್ಲಾಂತ ನೋಟೀಸು ಕೊಟ್ಟಿಡ್ಬೇಕು?” “ಆಂದರೆ? ಏನು ನೀನು ಹೇಳೊದು? ಕೋರ್ಟಿನಲ್ಲೆ?” “ಹೌದು.” “ಛೆ! ಛೆ! ಉಂಟೆ ಎಲ್ಲಾದರೂ?” “ಯಾಕೆ ಮಾವ?" ಕೃಷ್ಣಪ್ಪನವರು ಅಪನ೦ಬಿಕೆಯ ದೃಷ್ಟಿಯಿ೦ದ ವೆ೦ಕಟರಾಮಯ್ಯನನ್ನೆ

ನೋಡಿದರು. ಈತ ಲೋಕಾನುಭವವಿಲ್ಲದ ಹಸುಳೆ-ಎನಿಸಿತು ಅವರಿಗೆ.

"ಲೋಕ ಏನು ಹೇಳುತ್ತೆ ಗೊತ್ತೆ?” “ಸಾವಿರ ಹೇಳೀತು ಮಾವ, ಈಗ ಅದು ಹೇಳ್ತೀರೋದು ಏನು ಕಡಮೆಯೆ?