ಪುಟ:Ekaan'gini.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೧೯೩

“ಅಪ್ಪಾ! ಅಪ್ಪಾ!” ಮಗಳ ಕ೦ಬನಿಯಿ೦ದ ತ೦ದೆಯ ಪಾದಗಳು ತೋಯ್ದುವು. “ಅಪ್ಪಾ! ಯಾಕಪ್ಪ ಹಾಗಾಡ್ತೀಯಾ? ನನ್ನ ಸಂಕಟ ನಿ೦ಗೆ ಅರ್ಧವಾ ಗಲ್ವ ಅಪ್ಪಾ?” ಕೃಷ್ಣಪ್ಪನವರು ಕದಲದೆ ಕುಳಿತರು. ಎರಡು ನಿಮಿಷ, ಬಳಿಕ ಒಮ್ಮೆಲೆ

ಅಣೆಕಟ್ಟು ಕಡಿಯಿತು.

“ಸುಂದಾ! ಅಳಬೇಡವಮ್ಮ! ಸುಂದಾ-ಅಳಬೇಡ!“ ಎನ್ನುತ್ತ, ಮಗಳ

ನ್ನೆತ್ತಲು ಯತ್ನಿಸುತ್ತ, ಅವರು ಗಟ್ಟಿಯಾಗಿ ಅತ್ತರು.
                     ೨೬

ಮಧಾಹ್ನವಾದೊಡನೆಯೆ ಆಕಾಶವನ್ನು ಮೋಡ ಕವಿಯಿತು. ಅದರೆ,

ಬರಬಹುದಾದ ಮಳೆಗೆ ಹೆದರಿ ಸುಮ್ಮನಿರುವುದು ಸಾಧ್ಯವಿರಲಿಲ್ಲ.

ವೆಂಕಟರಾಮಯ್ಯ ಸ್ನೇಹಿತನ ಮನೆ ತಲಪಿದಾಗ, ಸೋಮಶೇಖರ ಭಾನು ವಾರದ ಹಗಲುಸಿದ್ದೆಯ ಸುಖ ಅನುಭವಿಸುತ್ತಿದ್ದ, ಗಿರೀಶ ತನ್ನ ತಂದೆಯ ನ್ನೆಬ್ಬಿಸಿ ಮಾಮ ಬ೦ದ ಸುದ್ದಿ ತಿಳಿಸಿದ. "ಯಾವ ಮಾಮನೊ?” ಎಂದ ಸೋಮಶೇಖರ ಅರೆನಿದ್ದೆಯಲ್ಲೆ. "ಏಳಿ,ಮಲೆನಾಡಿನೋರು ಬ೦ದಿದಾರೆ" ಎಂದಳು ಸೀತಮ್ಮ. ಸೋಮಶೇಖರ ಧಟ್ಟನೆದ್ದ. ನೇರವಾಗಿ ಒಳಗೆ ಬಂದ ಮಿತ್ರನ ಆಗಮನ ಹಿತಕರವಾಗಿತ್ತು. “ಯಾವಾಗ್ಲೋ ಬ೦ದೆ?" “ನೆನ್ನೆ ಕಣೋ.” “ಒಬ್ನೇನಾ" ಬಾಗಿಲಲ್ಲೆ ನಿ೦ತಿದ್ದ ಸೀತಮ್ಮನನ್ನು ಕುರಿತು ವೆಂಕಟರಾಮಯ್ಯ ಹೇಳಿದ: “ವಿಜಯಾನೂ ನಾನೂ ನಾಳೆ ಊಟಕ್ಕೆ ಬರ್ತೀವಿ ಕಣ್ರೀ”. “ಧ್ಯಾ೦ಕ್ಸ್!ಬಾಯಿ೦ದ ಅಷ್ಟಾದರೂ ಬ೦ತಲ್ಲ!" ಎಂದು ಸೀತಮ್ಮ ಒಳ