ಪುಟ:Ekaan'gini.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೪ ಏಕಾಂಗಿನಿ ಹೋದಳು. ಸೋಮಶೇಖರ ಆಕಳಿಸುತ್ತ ನುಡಿದ: "ನಿನಗೆ ಬರೀಬೇಕೂಂತೆ ಯೋಚಿಸುತ್ಲೇ ಇದ್ದೆ." "ಒಳ್ಳೇ ಕೆಲಸ ಮಾಡ್ಡೆ. ಯೋಚಿಸೋದು ಯಾವಾಗ್ಲೂ ಆರೋಗ್ಯಕ್ಕೆ ಒಳ್ಳೇದು." “ನಿನ್ನ ಅತ್ತಿಗೆ ಬ೦ದಿದ್ರಪ್ಪ." “ಊಟಕ್ಕೆ ಬಂದಿದ್ರ೦ತೆ." “ಆಲ್ಲ, ಆಮೇಲೆ, ನನ್ನಿ೦ದ ಹಿ೦ದೂ ವಿವಾಹ ಶಾಸನ ಪಾಠ ಒಪ್ಪಿಸ್ಕೋ೦ಡು

ಹೊರಟೋದ್ರು.”

"ಹೌದೆ? ಏನಾದರು ಹೇಳಿದ್ಲೇನು?" ಸುನಂದಾ ಆ ವಿಷಯ ತಿಳಿಸಿರಲಿಲ್ಲ. ಅತ್ತಿಗೆಯ ಧೈರ್ಯ ಸ್ಥೈರ್ಯ ಕ೦ಡು ಮೂಗಿನ ಮೇಲೆ ಬೆರಳಿಡುವ ಹಾಗಾಯಿತು ವೆ೦ಕಟರಾಮಯ್ಯನಿಗೆ. "ಏನೂ ಇಲ್ಲ, ಪಾಪ! ನನ್ನ ವಿವರಣೆ ಮುಗಿಯೋ ಹೊತ್ತಿಗೆ ಅವರು

ಪ್ರಜ್ಞೆ ತಪ್ಪೊ ಸ್ಥಿತಿಗೆ ಬ೦ದಿದ್ರು."

ವೆಂಕಟರಾಮಯ್ಯ ನಿಟ್ಟುಸಿರು ಬಿಟ್ಟು ಹೇಳಿದ . “ಈಗ ಅದೇ ಸ೦ಬಂಧದಲ್ಲಿ ಶಿವಮೊಗ್ಗಾದಿ೦ದ ಬಂದಿದೀನಪ್ಪಾ ನಾನು" "ನಿಜವಾಗ್ಲೂ?" “ವಿಚ್ಛೇದನವೇ ಸರಿ ಅ೦ತ ಅತ್ತಿಗೆ ತೀರ್ಮಾನ ಮಾಡಿದಾಳೆ.ನನಗೂ

ಅದು ಸರಿ ಅನ್ನಿಸುತ್ತೆ, ಮೊದಲು ಒಂದು ನೋಟೀಸು ಕಳಿಸ್ಬೇಕು, ಅಲ್ವೆ?"

“ಹೊ೦." “ಅದನ್ನಿಷ್ಟು ಬರಕೊಡು.ನೀನೇ ನಮ್ಮ ಕಡೆ ವಕೀಲ." “ನಿನ್ನ ಮಾವನಿಗಂತೂ ಆಗಲೇ ವಕೀಲನಾಗಿದೀನಿ!” “ಏನಾಗಿತ್ತು ಅವರಿಗೆ?” “ಅಹ್ಹಾ! ಅವರು ಉಯಿಲು ಬರೆಸಿದಾರೆ ಕಣೋ. ನಿನ್ನ ಧರ್ಮವತ್ನಿಗೂ

ಒಂದು ಸಮನಾದ ಪಾಲು. ಸಾವಿರ ರೂಪಾಯಿ ಮತ್ತು ಅದರ ಬಡ್ಡಿ!”

“ಅಯ್ಯೋ. ಅವರೊಬ್ಬರು-ನಾನು ಬೇಡ ಅಂದಿದ್ದೆ." "ತಿಳೀತು.ಅವರೇ ಹೇಳಿದ್ರು ಅದನ್ನ..."