ಪುಟ:Ekaan'gini.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೧೯೮ ಏಕಾಂಗಿನಿ

     "ನೋಟೀಸಿನಲ್ಲಿ ಖರ್ಚು ವೆಚ್ಚದ ವಿಷಯ ಇದೆಯಲ್ಲ. ಅದು ಹಾಗಿರಲೇ 
   ಬೇಕೆ?"
      ನೋಮಶೇಖರ ಸಣ್ಣನೆ ನಕ್ಕ.
     "ಪದ್ಧತಿ ಪ್ರಕಾರ ಬರೆದೆ ಅಷ್ಟೆ.ನಿನ್ನ ಅತ್ತಿಗೆ ಬೇಡ ಎಂದರೆ ತೆಗೆದು 
   ಹಾಕೋಣ."
 "ಇದೆಲ್ಲಾ ನಿನಗೆ ತಮಾಷೆಯಾಗಿ ತೋರುತ್ತೆ ಅಲ್ವಾ?"
 ಸೋಮಶೇಖರನ ಮುಖಭಾವ ಬದಲಾಯಿತು.
 "ಯಾಕೆ ವೆಂಕ್ಟು? ಸೀತಾನ ಕೇಳು___ಆಕೆ ವಿಷಯ ನಾವು ಏನೇನು 

ಮಾತಾಡ್ಕೊಂಡಿದೀವೀಂತ" "ಅತ್ತಿಗೆ ಈಗ ಮಲ್ಲೇಶ್ವರದಲ್ಲಿ ಯಾವುದೋ ಶಿಶುವಿಹಾರದಲ್ಲಿ ಕಾರ್ಯ

ದರ್ಶಿನಿಯಾಗಿದಾಳೆ."

"ಹಾಗೇನು? ಒಳ್ಳೇದಾಯ್ತು."

..ಮಳ ನಿಲ್ಲುನ ಲಕ್ಷಣ ತೋರಲಿಲ್ಲ."

ಸೀತಮ್ಮ ಬಾಗಿಲಿನತ್ತ ಸುಳಿದು ಹೇಳಿದಳು "ಊಟ__" “ನಾಳೆ ಮಧ್ಯಾಹ್ನ ಬರ್ತೀವಿ ಎಂದ ವೆಂಕಟರಾಮಯ್ಯ. "ನಿಮ್ಮ ಆತ್ತಿಗೆಯನ್ನೂ ಕರಕೋಂಡ್ಬನ್ನಿ. ಗಿರೀಶ ಆಗ್ಲೇ ಅವರ ಸರ

 ಸ್ವತೀನ ಮೆಚ್ಕೊಂಡಿದಾನೆ"

"ನಾಳೆ ಬೇಡಿ," ಎಂದ ವೆಂಕಟರಾಮಯ್ಯ, ಆತ್ತಿಗೆ ಒಪ್ಪಲಾರಳೆಂದು ಎಣಿಕೆ ಹಾಕುತ್ತ. .... ಸೋಮಶೇಖರನ ರೇಯಿನ್ ಕೋಟು ಮತ್ತು ಕೊಡೆ ವೆಂಕಟರಾ ಮಯ್ಯನ

 ನೆರವಿಗೆ ಬಂದುವು.
   ಮನೆ ಸೇರಿದ ಆತನ ಕೈಯಿಂದ ನೋಟೀಸಿನ ಕರಡು ಪತ್ರವನ್ನು ತೆಗೆದು ಕೊಂಡು ಕೃಷ್ಣಪ್ಪನನು ದೀಪದ ಬಳಿಗೊಯ್ದು ಹಿಡಿದು ಓದಿದರು...ఓది ಮುಗಿದು ಆವರು ಕನ್ನಡಕವನ್ನು ಮಡಚಿದಾಗ ಅಳಿಯ ಕೇಳಿದ.

"ಸರಿಯಾಗಿದೆಯಾ ಮಾವ?" “ಹೂಂ,” ಎಂದಷ್ಟೆ ಕ್ಷೀಣವಾಗಿ ಹೇಳಿ ಅವರು ಸುಮ್ಮನಾದರು.