ಪುಟ:Ekaan'gini.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.




                  ೨೦೨                                 ಏಕಂಗಿನಿ
                      ಸೋಮಶೇಖರನೂ ಸುನಂದಾ-ಸರಸ್ವತಿಯರೂ ಕೃಷ್ಣಪ್ಪನವರೂ ಜಟಕ
                 ಗಾಡಿಯಲ್ಲಿ ಬಂದಿಳಿದರು. ಸೋಮಶೇಖರನದು ಎಲ್ಲಾ ವಕೀಲರ ಕಕ್ಷಿಗಾರರ 
                ಗಮನವನ್ನೂ ತನ್ನೆಡೆಗೆ ಸೆಳೆಯುವ ರೀವಿ. ಚಲಚ್ಚಿತ್ರದಲಲಿನ ಪಾತ್ರದ ಹಾಗೆ...
               ಸುನಂದಾ ಬಿಳಿಯ ಹತ್ತಿ ಸೀರೆಯುಟ್ಟಿದ್ದಳು.ಬಿಳಿಯದ್ದೇರವಕೆ.ಹಿಂದಕ್ಕೆ                                   
               ಏರಿಸಿ ಹೆರಳು ಬಿಗಿದಿದ್ದಳು. ಪೌಡರಿನ ಅಗತ್ಯವೇ ಇರದಿದ್ದ ಗೌರಾಂಗ
                ರೂಪಸಿಯಲ್ಲದಿದ್ದರೂ ಆಕರ್ಷಕ ಮುಖಮುದ್ರೆ. ಕಾಲಲ್ಲಿ ಚಪ್ಪಲಿ ಇತ್ತು.
               ಗುಲಾಬಿ ಬಣ್ಣದ ಅಂಗಿ ತೊಟ್ಟಿದ್ದ ಗು೦ಗುರು ಕಣದಲಿನ ಪುಟ್ಟ ಸರಸ್ವತಿ
                   ತಾಯಿಯ ಪಡಿಯಚ್ಚಿನಂತಿದ್ದಳು ಅದೇ ರೀತಿಯ ಮುಖಮುದ್ರೆ, ತುಟ
                    ಗಳು, ಮೂಗು- ಎಲ್ಲವು. ಕೃಷ್ಣಪ್ಪನವರದು, ಜೀರ್ಣವಾಗಿದ್ದ ಉಡುಪು
                   ತೊಟ್ಟಿದ್ದ ಜೀರ್ಣವಾಗಿದ್ದ ಶರೀರ ಯುವಕ ವಕೀಲರ ಗುಮಾಸ್ತ ರೇನೋ 
                    ಎಂದು ಯಾರಾದರೂ ಭಾವಿಸುವಂತಿತ್ತು, ಸುನಂದೆಗೂ ಅವರಿಗೂ ಕೆಲ ವಿಷ
                    ಯಗಳಲ್ಲಿ ಸಮ್ಯ ವಿರಲಿಲ್ಲವೆಂದಲ್ಲ ಆದರೆ ಅವರೊಳಗಿನ ಸಂಬಂಧ ತಿಳಿಯ
                     ದವನ ಕಣ್ಣಿಗೆ ಅದು ಕಾಣುತ್ತಿರಲಿಲ್ಲ.
                           ಮಧ್ಯವಯಸ್ಸಿನ ನ್ಯಯಾಧೀಶರು ಒಳಗೆ ಬಂದೊಡನೆ, ಅಲ್ಲಿದ್ದ ವಕೀಲ
                     ರೆಲ್ಲ  ಎದ್ದು ನಿಂತರು.
                            ವಿವಾಹ ವಿಚ್ಛೇದನದ ಅರ್ಜಿಯೊಂದನ್ನು ಮೊದಲು ತೆಗೆದುಕೊಳ್ಳುವು 
                    ದಾಗಿ ನಾಯಾಧೀಶರೆಂದರು ಸಿಮಶೆಖರನ ಸೂಚನೆ ಯಂತೆ ,"ಖಾಸಗಿ
                    ಯಾಗಿ ವಿಚಾರಣೆಯಾಗುತ್ತ" ಎಂದು ತಿಳಿಸಲಾಯಿತು. ನ್ಯಾಯಾಸ್ಥಾನದ
                    ಒಳಗಿದ್ದವರೆಲ್ಲ ಹೊರಡುತ್ತಿದ್ದಂತೆ ದಫೇದಾರಮೂರು ಸಾರೆ ಕೂಗಿದ:
                    “ಅರ್ಜಿದಾರಳು ಸುನಂದಮ್ಮ, ಆರ್ಜಿದಾರಳು ಸುನಂದಮ್ಮ, ಅರ್ಜಿದಾರಳು,”
                     ಹಾಗೆಯೇ "ಎದುರು ಅರ್ಜೀದಾರ ಪುಟ್ಟಣ್ಣ. .”
                    ಸರಸ್ವತಿಯನ್ನು ಜಗಲಿಯಲ್ಲೆ ನಿ೦ತಿದ್ದ  ತಂದೆಯ ಕೈಗೆ ಕೊಟ್ಟು ಸುನಂದ 
                   ಒಳಬಂದು ನ್ಯಾಯಾದೀಶರಿಗೆ   ಕೈಮುಗಿದಳು. ಸಾಮಾನ್ಯವಾಗಿ ಅಂತಹ
                   ವಂದನೆಗಳಿಗೆ ವಿಶೇಷ ಗಮನವೀಯಲು ಬಿಡುವಿರದ ನಾಯಾಧೀಶರು ಅರ್ಜಿ 
                   ದಾರಳು ಹೆಣ್ಣೆಂದು ಆಕೆಯತ್ತ ನೋಡುತ್ತ ತಲೆ ಸ್ವಲ್ಪಬಾಗಿಸಿ ವಂದನೆ. 
                  ಸ್ವೀಕರಿಸಿದರು.
                ಪುಟ್ಟಣ್ಣ ಅಲ್ಲಿರಲಿಲ್ಲ, ಸೋಮಶೇಖರ ಅತ್ತಿತ್ತ ದ್ರುಷ್ಟಿ ಹೊರಳಿಸಿದ.