ಪುಟ:Ekaan'gini.pdf/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೨೧೦ ಸೀತಮ್ಮ ಹೇಳಿದಳು:

"ನಿಮ್ಮ ಶಿಶು ವಿಹಾರ ಸಮೀಪದಲ್ಲೇ ಇದ್ದಿದ್ರೆ ಗಿರೀಶನನ್ನ ಅಲ್ಲಿಗೇ                                                 ಕಳಿಸ್ಬಹುದಾಗಿತ್ತು ಕಣ್ರೀ. ಎಷ್ಟು ದೂರ! ಬಸವನ ಗುಡಿ ಒಂದು ಧ್ರುವವಾ                                                  ದರೆ ಮಲ್ಲೇಶ್ವರ ಇನ್ನೊಂದು ಧ್ರುವ."
ಆ ದಂಪತಿಗಳೂ ಆಗಾಗ್ಗೆ ಬಂದು ಹೋಗುವ ಗೆಳೆಯರಾದರು.
    *        *        *         *
ನವರಾತ್ರಿಗೆ ಒಂದು ವಾರವಿದ್ದಾಗ ಸುನಂದಾ ತಂದೆಗೆ ಹೇಳಿದಳು:
 "ಶಿಶು ವಿಹಾರದ ಸಮೀಪವೇ ಒಂದು ಮನೆ ಖಾಲಿಯಾಗುತ್ತೆ ಅಚ್ಚು                                      ಕಟ್ಟಾಗಿದೆ..."
"ಎಷ್ಟು ಬಾಡಿಗೆ?"
"ಇಪ್ಪತ್ತೈದು."
"ಜಾಸ್ತಿ ಅಲ್ವೆ?"

ಆ ಮನೆಗೆ ಜಾಸ್ತಿ ಎಂದಲ್ಲ, ತಮ್ಮ ಅಂತಸ್ತಿಗೆ ಜಾಸ್ತಿ ಎಂದು. "ಬಸ್ಸಿಗೆ ದಿನಾ ದುಡ್ಡು ಕೊಡೋದು ತಪ್ಪುತ್ತೆ. ಅಲ್ಲದೆ ತುಂಬಾ ಅನು ಕೂಲವಾಗಿದೆ ಅಪ್ಪ."

ಮನೆ ಬದಲಾಯಿಸುವುದು ಮಗಳಿಗೆ ಇಷ್ಟವೆಂಬುದು ಸ್ಪಷ್ಟವಾಗಿತ್ತು.
ಆದರೆ ಶೇಷಾದ್ರಿಪುರವನ್ನು ಬಿಟ್ಟು ದೂರ ಹೋಗಬೇಕಲ್ಲಾ ಎಂದು                                                  ಕೃಷ್ಣಪ್ಪನವರಿಗೆ ತಳಮಳವೆನಿಸಿತು.

ಅವರ ಮನಸ್ಸಿನಲ್ಲಿದ್ದುದನ್ನು ಊಹಿಸುವುದು ಸುನಂದೆಗೆ ಕಷ್ಟವಾಗಿರಲಿಲ್ಲ. "ಇಲ್ಲಾದರೆ ರಾಮಕೃಶ್ಣಯ್ಯನವರ ಮನೆಗೆ ಸಮೀಪ. ಮಲ್ಲೇಶ್ವರಕ್ಕೆ ಹೋದ ಮೇಲೆ ಸ್ವಲ್ಪ ದೂರವಾಗುತ್ತೆ.."

ಸ್ವಾರ್ಥಿ ಎನ್ನಿಸಿಕೊಳ್ಳುವುದುಂಟೇ? ಆ ಯೋಚನೆಯಾದರೂ ಸರಿಯೆ?                                      ಮಗಳ ಅನುಕೂಲ ಮುಖ್ಯ.."
ಅವಸರವಾಗಿ ಆನಂದಿಸಿದರು
"ನನಗೇನೂ ಕಷ್ಟವಾಗೋಲ್ಲ. ಒಂದಷ್ಟು ದಿನ ನಡೆದರೆ ಆರೋಗ್ಯಕ್ಕೆ                                               ಒಳ್ಳೇದು ಖಂಡಿತ ನನಗೆ ತೊಂದರೆಯಾಗೋದಿಲ್ಲ ಸುನಂದಾ."
    *         *           *          *

ಸರಸ್ವತಿಯನ್ನು ಮಲಗಿಸಿದ ಬಳಿಕ ಸುನಂದಾ, 'ಸಾಕ್ರಟೀಸನ ಮರಣ'