ಪುಟ:Ekaan'gini.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ 22

ಹೊರೆತು ಬೇರೆ ಯಾರಿದ್ದಾರೆ ಈ ಮಗುವಿಗೆ? ತಂದೆಯನ್ನು ಇನ್ನು ಕಂಡಾಗ, ಆತನ ಪರಿಚಯವಾದರೂ ಅದಕ್ಕೆ ಇರುವುದೋ ಇಲ್ಲವೋ ಮಗು ಬಸಿರಲ್ಲಿರುವಾಗಲೇ ಹೆಣ್ಣು ವಿಧವೆಯಾಗುವುದುಂಟು ಅಥವಾ ಕೈಗೂಸನ್ನೂ ಅದರ ತಾಯಿಯನ್ನೂ ಬಿಟ್ಟು ಗಂಡ ಕಣ್ಣು ಮುಚ್ಚುವುದುಂಟು ಅಂಥಹ ಸಂದರ್ಭಗಳಲ್ಲಿ ಹೆತ್ತಾಕೆಯೇ ಮಗುವಿನ ಪಾಲಿಗೆ ತಂದೆ ತಾಯಿ ಎಲ್ಲವೂ,ಆದರೆ ಅದರ ಸ್ಥಿತಿಗತಿ ಅಂತಹುದಲ್ಲವಲ್ಲ. ತಾನು, ಗಂಡ ಕೈಬಿಟ್ಟ ಹೆಂಗಸು.ಕೂಸಿನ ಪಾಲಿಗೆ, ತಂದೆ ಇದ್ದೂ ಇಲ್ಲದಂತೆ ಅದರ ಬಾಯಲ್ಲಿ ಉಚ್ಚಾರವಾಗುವ ಪದ---'ಅಮ್ಮಾ','ಅಜ್ಜೀ' ಇಲ್ಲವೆ 'ತಾತ'. 'ಅಪ್ಪಾ' ಎನ್ನುವ ಅಗತ್ಯವೇ ಇಲ್ಲ ಅದಕ್ಕೆ.

ಅಬ್ಬ!ಬದುಕೇ ಸುದೀರ್ಘವಾದೊಂದು ಇರುಳಾಗಿದೆ, ದುಃಸ್ವಪ್ನವೊಂದು ಕೊನೆಯೇ ಇಲ್ಲದಂತೆ ಬಲೆ ಹೆಣೆಯುತ್ತಿದೆ.

ಬೆಕ್ಕು 'ಮಿಯಾಂವ್' ಎನ್ನುತ್ತ, ಅಡುಗೆ ಸಿದ್ಧವಾಯ್ತೆ ಎಂದು, ಹಿತ್ತಲ ಗೋಡೆಯಾಚೆಗೆ ಕೆಳಕ್ಕೆ ಧುಮುಕಿತು.

"ಅಮ್ಮಾ, ಬೆಕ್ಕು ಇಲ್ಲಾ," ಎಂದು ಸರಸ್ವತಿ ತಾಯಿಗೆ ವರದಿಕೊಟ್ಟಳು

"ಬೆಕ್ಕು ಇಲ್ಲ", ಎಂದು ತಾನೂ ಅದೇ ಮಾತನ್ನು ಅಂದಳು ಸುನಂದಾ, ಯಾಂತ್ರಿಕವಾಗಿ.

ಬೀದಿಯ ಕಡೆಗೆ ಹರಿಯಿತು ಮಗುವಿನ ಮನಸ್ಸು ಯಾವುದೋ ಹೈ ಹೈ ಗಾಡಿ, 'ದಂಟಿನ ಸೊಪ್ಪು, ಅರಿವೇ ಸೊಪ್ಪು, ಕೊತಮಿರಿ ಸೊಪ್ಪು,ಊವಾ ಬೇಕೇನ್ರಪ್ಪಾ ಊವಾ.'

ಸರಸ್ವತಿಯ ತಾಯಿಯ ಕಿವಿ ದಂಡೆಗೂ ಈ ಸ್ವರಗಳು ಅಪ್ಪಳಿಸಿ ಹಾಗೆಯೇ ಹಿಂತಿರುಗುತ್ತಿದ್ದುವು. ಕಿವಿ, ಕೇಳುವ ಕೆಲಸವನ್ನಷ್ಟೆ ಮಾಡುತ್ತಿತ್ತೇ ಹೊರತು, ಯಾವ ಸಂದೇಶವನ್ನೂ ಮೆದುಳಿಗೆ ಮುಟ್ಟಿಸುತ್ತಿರಲಿಲ್ಲ, ಬಿಡುವೇ ಇರಲಿಲ್ಲ ಮೆದುಳಿಗೆ ನೆನಪುಗಳ ಸೇನೆಯನ್ನು ಇದಿರ್ಗೊಳ್ಳುವುದರಲ್ಲೇ ಅದು ಮಗ್ನವಾಗಿತ್ತು.

ಅದೇ ಕೊಠಡಿ. ನಾಲ್ಕು ವರ್ಷಗಳ ಹಿಂದೆ. ಅನಂತರವೂ ಒಂದೆರಡು ಸಾರೆ. ಮೊದಲು ಸಂಕೋಚದಿಂದ ತಾನು ಗಂಡನ ಬಳಿ ಸೇರಿದ್ದಳು. ಪ್ರತಿಯೊಂದಕ್ಕೂ ತಾಯಿಯ ಮುಖವನ್ನೇ ನೋಡುತ್ತಿದ್ದ ಆತನೂ ಅಳುಕುತ್ತ