ಪುಟ:Ekaan'gini.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಏಕಾಂಗಿನಿ ೩೯ ಕೆಯೂ ಸುನಂದೆಗಿರಲಿಲ್ಲ. ತಂದೆಯನ್ನೂ ಅವರ ಯೋಚನೆಗಳನ್ನೂ ಒತ್ತಟ್ಟಿಗೆ ಬಿಟ್ಟು ಸುನಂದಾ ಮಗುವನ್ನೆತ್ತಿಕೊಂಡು ಹಿತ್ತಲ ಕಡೆಗೆ ಹೋದಳು, ಹಿಂದಿರುಗಿ ಬಂದಾಗ ತಂದೆ ಓದುವುದು ಮುಗಿದಿತ್ತು .ಆಕೆ ಕಂಡುದು.ಚಿಂತಾಕ್ರಾಂತವಾದ ಮುಖಮುದ್ರೆ. ಕೃಷ್ಣಪ್ಪನವರು ಮಗಳನ್ನು ಅಸಹಾಯತೆಯ ದೃಷ್ಟಿಯಿಂದ ನೋಡಿದರು ವೃದ್ಧಾಪ್ಯದೊಡನೆ ಹೆಚ್ಚು ಸ್ಫುಟವಾಗಿದ್ದ ಮುಖದ ಮೇಲಿನ ಗೆರೆಗೆಳು ವ್ಯಧೆಯಿಂದ ಮತ್ತಷ್ಟು ಆಳವಾಗಿದ್ದುವು . ಆರಾಮ ಕುರ್ಚಿಯೊಳಗೆ ಆ ದೇಹ ಕುಗ್ಗಿದಂತೆ ತೋರಿತು.ಸ್ವಲ್ಪ ಹೊತ್ತು ಸುಮ್ಮನಿದ್ದ ಬಳಿಕ, ತಮ್ಮ ಹೆಂಡತಿಗೆ ಕೇಳಿಸುತ್ತಿಲ್ಲವೆಂದು ಖಚಿತಪಡಿಸಿಕೊಂಡು,ಕೃಷ್ಣಪ್ಪ ಪಿಸುಧ್ವನಿಯಲ್ಲಿ ಅಂದರು. "ನಾನೊಮ್ಮೆ ಬೆಂಗಳೂರಿಗೆ ಹೋಗ್ಬರ್ತೀನಿ,ಆಗದಾ?" "ಹೂಂ...." "ಮನೆ ಖಾಲಿ ಮಾಡಿದ ಅಂದರೆ ಏನರ್ಥ?" ".........." "ಹೋಟೆಲ್ನಲ್ಲೋ ಸ್ನೇಹಿತರ ಮನೇಲೊ ವಾಸವಾಗಿದಾನೇಂತ ತೋರುತ್ತೆ” “ಇನ್ನೆಲ್ಲಿರಾರೆ?” “ಅವನ ಆಫೀಸಿಗೆ ಶಾಖೆಗಳಂತೂ ಇಲ್ಲ ತಾನೆ?' ‘‘ಇಲ್ಲ." “ಹಾಗಾದರೆ ವರ್ಗದ ಮಾತೇ ಇಲ್ಲ.” “ಬೆಂಗಳೂರಲ್ಲಿ ಎಲ್ಲಿ ಹುಡುಕ್ತಿಯಾ ಅವರನ್ನು ?” " ಆತನ ಆಫೀಸಿಗೇ ಹೋಗ್ತೀನಿ. ಆಗದಾ?” ' ಹೂಂ. .' ಹೆಚ್ಚೇನನ್ನೂ ಹೇಳಲು ಸುನಂದಾ ಸಮರ್ಧಳಾಗಲಿಲ್ಲ, ಈ ಮೊದಲೇ ಹೋಗಬೇಕಾಗಿತ್ತು ಎನ್ನುವ ಸಂಕಟವೇನೂ ಆಕೆಯನ್ನು ಕೊರೆಯುತ್ತಿರ ಲಿಲ್ಲ, ದೀರ್ಘಕಾಲ ಸುಮ್ಮನಿರುವುದರಿಂದ ಗಂಡನ ಮನಸ್ಸಿನ ಮೇಲೆ ತನಗ ನುಕೂಲವಾಗಿ ಏನಾದರೂ ವರಿಣಾವುವಾಗಬಹುದೆ೦ಬ ಆಸೆಯೊಂದು ಮಸಕು ಮಸಕಾಗಿ ಅವಳಿಗಿತ್ತು, ಅದು ಅಳಿಸಿಯೇ ಹೋಗಿತ್ತು ಈಗ ನಿರ್ದಿಷ್ಟವಾದೊಂದು ಇಳಿಜಾರು ಹಾದಿಯಲ್ಲಿ ತನ್ನ ಬದುಕಿನ ರಥ ಉರು