ಪುಟ:Ekaan'gini.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಏಕಾಂಗಿನಿ ಸುನಂದೆಗೆ ರಾಧಮ್ಮ ಕಾಗದ ಬರೆದ ವಿಷಯವನ್ನು ಬಂದ ಕಾಗದದಲ್ಲಿ ಅಳಿಯನನ್ನು ಕುರಿತು ಇದ್ದ ಮಾಹಿತಿಯನ್ನು, ಹೆಡತಿಗೆ ಕೃಷ್ಣಪ್ಪನವರು ತಿಳಿಸಲಿಲ್ಲ. “ಆತ ಹೆಂಡತಿ ಮಗುವಿನ ಯೋಚನೇನೇ ಮಾಡ್ತಾ ಇಲ್ಲ ಅನಿಸುತ್ತೆ.ವಿಚಿತ್ರ ಮನುಷ್ಯ!” ಎಂದಷ್ಟೆ ಅ೦ದರು. “ಯಾಕಾದರೂ ಹೀಗೆ ನಮ್ಮ ಹೊಟ್ಟಿ ಉರಿಸ್ತಾನೋ,"ಎಂದು,ಸುನಂದೆಯ ತಾಯಿ ನಿಟ್ಟುಸಿರು ಬಿಟ್ಟರು. " ವಿಜೀ ಮದುವೆ ಆದ್ಮೇಲೆ ಒಂದೆರಡ್ಸಲ ನಾನು ಬರೆದಾಗ್ಲೂ ಆತ ಉತ್ತರ ಕೊಡ್ಲಿಲ್ಲ.” "ಹೌದು." “ಈಗ ಅವನನ್ನು ಕಂಡು ಏನು ಹೇಳ್ತೀ?” ಆ ಪ್ರಶ್ನೆಗೆ ಉತ್ತರ ಕಠಿನವೆಂದು ಸುನಂದೆಯ ತಾಯಿಗೆ ತೋರಿತು. ತಮ ಗೇನೂ ಹೊಳೆಯದೆ ಅವರೆಂದರು: “ಏನ್ಹೇಳ್ತೀರಾ?” ಒಲೆಯೊಳಗೆ ಉರಿಯುತ್ತಿದ್ದ ಸೌದೆಯನ್ನೆ ದಿಟ್ಟಿಸುತ್ತ ಕೃಷ್ಣಪ್ಪನವರು ಉತ್ತರ ಕೊಟ್ಟರು : "ನಾವು ಹೆಣ್ಣು ಹೆತ್ತೋರು. ನಿಷ್ಠುರವಾಗಿ ಮಾತಾಡೋಕೆ ಆಗುತ್ತು ಹೇಳು ? ಸಂಕಟ ಅನುಭವಿಸ್ಟೇಕಾದೋರು ನಾವು ತಾನೆ? ಆತನನ್ನ ಅಂಗಲಾಚಿ ಕೇಳ್ಕೊತೀನಿ-ಹೀಗೆ ಮಾಡ್ಬೇತ ಮಾರಾಯ, ಶತಾಪರಾಧವಾಗಿದ್ದರೂ ಕ್ಷಮಿಸು ಅಂತ ," ಮನಸ್ಸಾಕ್ಷಿ ಎಂದು ಒಪ್ಪದ, ಆದರೆ ಅಸಹಾಯತೆಯ ಫಲವಾಗಿ ಅಡಲೇ ಬೇಕಾದ ಮಾತು! ಅದನ್ನು ಉಚ್ಛರಿಸುತ್ತಿದ್ದಂತೆಯೇ ಕೃಷ್ಣಪ್ಪನವರ ಕಂಠ ಗದ್ಗದಿತವಾಯಿತು. ಮೂವತ್ತು ವರ್ಷಗಳಿಗೂ ಮಿಕ್ಕಿ ಬದುಕಿನ ಜತೆಗಾರ ನಾಗಿದ್ದ ಆ ಜೀವದ ಬೇಗುದಿಯ ನಿಜರೂಪವನ್ನು ತಿಳಿಯುವುದು ಇನ್ನೊಂದು ಜೀವನಕ್ಕೆ ಕಷ್ಟವಾಗಿರಲಿಲ್ಲ, ತಮ್ಮದೂ ಅದೇ ಬೇಗುದಿ ಎನ್ನುವಂತೆ ಶೋಕದ ಏದುಸಿರು ಬಿಡುತ್ತಾ ಸುನಂದೆಯ ತಾಯಿ ಅಂದರು : “ನಿನ್ನ ವರ್ತನೇನ ದೇವರು ಮೆಚ್ಚಲಾರ-ಅಂತ,ಆ ಪಾಪಿಗೆ ಹೇಳಿ"