ಪುಟ:Ekaan'gini.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಏಕಾಂಗಿನಿ ೬ ಕೃಷ್ಣಪ್ಪನವರು ಬೆಂಗಳೂರು ಸೇರಿದಾಗ ಸೂರ್ಯ ನಡುನೆತ್ತಿಯನ್ನು ದಾಟಿ ಪಕ್ಕಕ್ಕೆ ಸರಿದಿದ್ದ ತಾಲ್ಲೋಕು ಕಚೇರಿಯ ಗುಮಾಸ್ತೆಯಾಗಿ ಹತ್ತೆಂಟು ಊರು ತಿರುಗಿದ್ದ ಅವರಿಗೆ, ಸಂಸ್ಥಾನದ ಆಡಳಿತ ಕೇಂದ್ರವಾದ ಬೆಂಗಳೂರು ಹಳೆಯ ಪರಿಚಯದ ಜಾಗ. ಅದು ಬೇಸರ ಬರಿಸುವಷ್ಟು ಹಳೆಯ ಪರಿಚಯ ಆದರೆ ಈ ಸಾರೆಯಷ್ಟು ಅಸ್ತವ್ಯಸ್ತ ಮನಸ್ಸಿನಿಂದ ಹಿಂದೆಂದು ಅವರು ಬೆಂಗಳೂರಿಗೆ ಬಂದಿರಲಿಲ್ಲ ಮೊದಲ ನೋಟಕ್ಕೆ ಗೊಂದಲವುರನಾಗಿ ಕಾಣುತ್ತಿದ್ದ ಬೆಂಗಳೂರಿನ ಹಿನ್ನೆಲೆಯಲ್ಲಿ, ಈಗ ಅವರ ತಲೆಯೊಳಗಿನ ಗೊಂದಲವೂ ಹೆಚ್ಚಿತು. ಕಳೆದ ನಾಲ್ಕು ವರ್ಷಗಳಲ್ಲಿ ಅವರಿಗೆ ಬೆಂಗಳೂರು, ಒಂದು ರೀತಿಯಲ್ಲಿ ಆಪ್ತವಾಗಿತ್ತು. ಅವರ ಪಾಲಿಗೆ ಆ ಮಹಾ ನಗರ ಬರಿಯ ಗೆಳೆಯರಿದ್ದ ಊರು ಮಾತ್ರನಾಗಿರಲಿಲ್ಲ. ಅಲ್ಲಿತ್ತು ಅಳಿಯನ ಮನೆ ತನ್ನ ಮಗಳ ಗಂಡನ ಮನೆ. ಆದರೆ ಈಗ ಆ ಊರಲ್ಲಿ ಯಾರು ಇಲ್ಲ. ಅಳಿಯ ಇನ್ನೂ ಅಲ್ಲೇ ಇದ್ದರು ಆ ನಗರವನ್ನು ಕುರಿತಾದ ಆತ್ಮೀಯತೆಗೆ ಕೃಷ್ಣಪ್ಪನವರಹೃದಯದಲ್ಲಿ ಎದೆಯೇ ಇರಲಿಲ್ಲ. ಅಭ್ಯಾಸ ಬಲದಿಂದಲೆ ಕೃಷ್ಣಪ್ಪನವರು ಬೀದಿಯುದ್ದಕ್ಕೂ ನಡೆದು. ನೀರಿಲ್ಲದ ಧರ್ಮಾಂಬುಧಿ ಕೆರೆಗಿಳಿದು, ಅದನ್ನು ಹಾದು, ಮೆಜೆಸ್ಟಿಕ್ ವೃತ್ತವನ್ನು ತಲುಪಿದರು. ಅಲ್ಲಿ ನಿಂತು,'ಇಲ್ಲಿ ತನಕ ಬಂದುದಾಯ್ತು, ಇನ್ನೆಲಿಗೆ', ಎಂದು ತಮ್ಮನ್ನೆ ಕೇಳಿದರು. ಈಗಲೇ ನೇರವಾಗಿ ಪಟ್ಟಣ್ಣನ ಆಫೀಸಿಗೆ ಹೋಗುವುದೇ ಸರಿ ಎಂದು ಒಮ್ಮೆ ಯೋಚಿಸಿದರು. ಬಳಿಕ, ಆತುರಪಡುವುದು ಸರಿಯಲ್ಲ, ಈ ಹೊತ್ತು ಸಮ್ಮನಿದ್ದು ನಾಳೆಯ ದಿನ ಆತನ ಭೇಟಿ ಮಾಡಿದರಾಯಿತು, ಎಂದು ಹಿಂದಿನ ಯೋಚನೆಯನ್ನು ಬದಿಗೆ ಸರಿಸಿದರು. ಒಂದಲ್ಲ ಒಂದು ಕಾಲದಲ್ಲಿ ಸಹೋದ್ಯೋಗಿಗಳಾಗಿದ್ದ ಒಬ್ಬೋಬ್ಬರು ಗೆಳೆ