ಪುಟ:Ekaan'gini.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ ಏಕಾಂಗಿನಿ ತಿದ್ದರು...

“ಸುನಂದಾನ ಕರಕೊಂಡು ಬರ್ಲಿಲ್ಲಾ?” ಎಂದು ಕೇಳಿದರು ರಾಧಮ್ಮ. “ಇಲ್ಲ. ಮೊದಲು ನಾನೊಬ್ನೇ ನೋಡ್ಕೋಂಡು ಹೋಗೋಣಾಂತ ಬಂದೆ.”
“ನನ್ನ ಕಾಗದ ತಲಪ್ತೆ?” 
“ಹೂಂ. ಅದು ಬಂದ ಮೇಲೆಯೇ ಹೊರಡೋ ತೀರ್ಮಾನ ಮಾಡ್ದೆ.”
ರಾಮಯ್ಯನವರನ್ನು ರಾಧಮ್ಮ ಒಳಕ್ಕೆ ಕರೆದರು. 

ಅಲ್ಲಿಂದ ಹೊರ ಬರುತ್ತ ರಾಮಯ್ಯ ಹೇಳಿದರು:

“ತಾವು ನಮ್ಮನೇಲೇ ಉಳಕೋಬೇಕು ಬಡವರ ಮನೆ ಆತಿಧ್ಯ... " ಈ ಪ್ರೇಮಾದರವೆಲ್ಲ ಮುಳ್ಳು ಮೊನೆಯಾಗಿತ್ತು ಕೃಷ್ಣಪ್ಪನವರ ಪಾಲಿಗೆ ತಮ್ಮನ್ನು ಕುಗ್ಗಿಸುತ್ತಿದ್ದ ಹೃದಯದ ಭಾರವೊಂದಿಲ್ಲದೆ ಇದ್ದಿದ್ದರೆ, ಆತ್ಮೀಯ. ತೆಯ ನುಡಿಗಳನ್ನು ಕೇಳಿದಾಗ ಅವರಿಗೆ ಹಾಗೆ ಸಂಕಟವಾಗುತ್ತಿರಲಿಲ್ಲ.
ರಾಧಮ್ಮನ ಅಪೇಕ್ಷೆಯನ್ನು ಮಾತಿನ ರೂಪದಲ್ಲಿ ವ್ಯಕ್ತಿಪಡಿಸಿದ ರಾಮಯ್ಯನವರ ಆಹ್ವಾನ ಕೇಳುತ್ತ, ಕೃಷ್ಣಪ್ಪನವರ ಕಣ್ಣು ಮಂಜಾಯಿತು.

“ದಯವಿಟ್ಟು ಕ್ಷಮಿಸ್ಬೇಕು. ನನ್ನ ಸ್ನೇಹಿತನೊಬ್ಬನ ಮನೇಲಿ ಆಗಲೆ ಚೀಲ ಇಟ್ಟು ಬಂದಿದೀನಿ. ಅಲ್ಲಿಯೇ ಇರ್ತೀನಿ. ನೀವೇನೂ ತಿಳ್ಕೋಬಾರದು."

ಬಾಗಿಲ ಬಳಿ ನಿಂತು ರಾಧಮ್ಮನೆಂದರು: 

"ಹಾಗಾದರೆ ಉಟಾನಾದರು ಇಲ್ಲೆ ಮಾಡಿ."

“ಇಲ್ಲ ತಾಯಿಾ ಆ ಮನೇಲಿ ಆಗ್ಲೆ ಅಡುಗೆ ಮಾಡ್ಬಿಟ್ಟಿದಾರೆ. ನಾನು ಇನ್ನೂ ಎರಡು ಮೂರು ದಿವಸ ಇರ್ತೀನಿ. ಊಟಕ್ಕೆ ಇನ್ನೊಮ್ಮೆ ಬರ್ತೀನಿ".

ಆ ಮಾತಿನಿಂದ ದಂಸತಿಗಳಿಗೆ ಸ್ವಲ್ಪ ಸಮಾಧಾನವಾದಂತಾಯಿತು. ....ಕೇಳಿ ತಿಳಿದುಕೊಂಡುದು, ರಾಧಮ್ಮ ಕಾಗದದಲ್ಲಿ ಬರೆದಿದ್ದ ವಿಷಯಗಳನ್ನೇ. ಮಾತನಾಡಿದವರು ರಾಧಮ್ಮನೇ. ರಾಮಯ್ಯ ನಡು ನಡುವೆ ತಲೆ ಯಾಡಿಸುತ್ತ ರಾಧಮ್ಮ “ಅಲ್ವೇನ್ರಿ?” ಎಂದು ತಮ್ಮೆಡೆಗೆ ತಿರುಗಿದಾಗ “ಹೌದೆ”ನ್ನುತ್ತಾ ಮಾತುಕತೆಯಲ್ಲಿ ಭಾಗಿಯಾದರು. “ರೂಮಿಗೆ ಹೋಗಿ ಓದ್ಕೊಳ್ರೊ” ಎಂದು ತಾಯಿ ಸೂಚಿಸಿದುದರಿಂದ ಹುಡುಗರು ಮೊದಲೆ ಎದ್ದು ಬಿಟ್ಟಿದ್ದರು.

ದ್ದೆ