ಪುಟ:Ekaan'gini.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩ ಎಕಾಂಗಿನಿ

   “ಈಗ ನಾನೇನು ಮಾಡ್ಬೇಕು ಅಂತೀಯಾ?”
  ಅದು, ಉತ್ತರದ ಹಾದಿ ನೋಡುತ್ತ ಅಲೆಯುತ್ತಲಿದ್ದ ಪ್ರಶ್ನೆ.
  “ಸರಿಯಾಗಿ ನಾಲ್ಮೇಟು ಬಿಗೀಬೇಕು ಆ ಮು೦ಡೇ ಗಂಡನಿಗೆ.”
  ರಾಮಕೃಷ್ಣಯ್ಯ ಕೊಟ್ಟ ಉತ್ತರ ಅಂಧದು. ಆದರೆ ಅದರ ಜತೆಯಲ್ಲೆ 
“ಹೂಂ” ಎಂಬ ನಿಟ್ಟುಸಿರೂ ಅವರಿಂದ ಹೊರಬಿತ್ತ.
 ಇದೀಗ ಆ ಮೃದು ಹೃದಯ ಸಹಾನುಭೂತಿ ತೋರಿಸುತ್ತಿದ್ದ ರೀತಿ

ಮತ್ತೆ ಅವರ ಬಾಯಿಂದ ಮಾತುಗಳು ಹೊರಟುವು.

 "ನೀನು ನಾಳೆ ದಿವಸ ಹೋಗಿ ಮಾತಾಡ್ಕೋಂಡು ಬಾ, ಅವನ ಮನಸ್ನಲ್ಲೇ 

ನಿದೆಯೋ ಗೊತ್ತಾಗುತ್ತಲ್ಲ! ಆಮೇಲೆ ನಾನೂ ಒಂದ್ನಲ ನಿಗ್ಧತೇಲಿ ಬರ್ತಿನಿ.”

 ಕೃಷ್ಣಪ್ಪನವರು ಒಪ್ಪಿದರು ಆ ದಿನ ವೆಲ್ಲ ಒಳಗಿನ ಕೊರಗನ್ನು ಹಾಗೆ 

ನಾಲ್ಕು ಜನರಿಗೆ ಹಂಚಿದ ಬಳಿಕ, ಅವರಿಗೆ ಈಗ ಸಮಾಧಾನವೆನಿಸಿತ್ತು, ಈ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆ ಹರಿಸಬಹುದೆಂಬ ಭರವಸೆಯನ್ನೇನೂ ರಾಮಕೃಷ್ಣಯ್ಯ ಕೊಟ್ಟಿರಲಿಲ್ಲ. ಆದರೂ ಅಸಹಾಯತೆಯಿಂದ ಸಳುವುದ ರಲ್ಲಿ ಆರ್ಥವಿರಲಿಲ್ಲ,

 ಕಿರಿಯ ಸೂಸೆಯ ಕೈಲಿ ಕುಡಿಯುವ ನೀರಿನ ಬಿಂದಿಗೆಯನ್ನೊ ಲೋಟ

ವನ್ನೂ ಕೃಷ್ಣಪ್ಪನವರಿಗೆ ಕೊಡಿಸಿದ ಒಳಿಕ ರಾಮಕೃಷ್ಣಯ್ಯ ಮಲಗುವ ಕೊಠ ಡಿಗೆ ನಡೆದರು. ಹೊರಗಿದ್ದ ಬರಿಯ ಮಂಚ ಕೃಷ್ಣಪ್ಪನವರ ಸೇವೆಯನ್ನು ಸ್ವೀಕರಿಸಿತು. “ತಗೋ ಅಜ್ಞಾ,” ಎನ್ನುತ್ತ ರಾಮಕೃಷ್ಣಯನ ಮೊಮ್ಮಗು ವೊಂದ ತಂದು ಕೊಟ್ಟು ದಿಂಬಿನ ಮೇಲೆ ಕೃಷ್ಣಪ್ಪ ತಲೆ ಇರಿಸಿದರು ಬರುತ್ತ ತಂದಿದ್ದ ಜೀರ್ಣವಾಗಿದ್ದ ಕಾಶಿರಿ ಶಾಲನ್ನು ಹೊಡೆದುಕೊ೦ಡರು, ದೀಪ ವಾರಿದ ಬಳಿಕ “ರಾಮಚಂದ್ರಾ” ಎಂದರು ಹಗಲು ಸ್ವಲ್ಪ ಹೊತ್ತು ನಿದ್ದೆ ಮಾಡಿದುದರಿಂದ ರಾತ್ರೆ ಸ್ವಲ್ಪ ಹೊತ್ತು ಎಚ್ಚರವಿರಲೇಬೇಕಾಯಿತು. ಬೆಳ ಗಾದ ಮೇಲಿನ ಕಾರ್ಯಕ್ರಮವನ್ನು ಯೋಚಿಸುತ್ತಾ ಆವರು ಮಲಗಿದ್ದರು. ಅಳಿಯನೊಡನೆ ತಾವು ಆಡಬೇಕಾದ ಮಾತುಗಳೂ ರೂಪುಗೊಂಡುವು ಹಾಗೆ ಸಿದ್ದತೆ ನಡೆಯುತಿದ್ದಾಗಲೇ ಅವರಿಗೆ ನಿದ್ದೆ ಬಂತು. ವೊ೦ದು ತಲದು ಕೊಟ್ಟು ১ে০২১ সং5 ಕೃಷ್ಣಷ್ಣ お