ಪುಟ:Ekaan'gini.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರೂಪಿಸಿಕೊಂಡು ಆತ ಸಾಧಿಸಿದ್ದೇನು? ಆ ಪ್ರಶ್ನೆಯ ಉತ್ತರ ಸ್ವತಃ ಆತನಿಗೇ ತಿಳಿದಿರಲಿಲ್ಲ, ಆದರೂ, ತಾನು ಮಾಡುತ್ತಿರುವುದು ಸರಿ, ತಾನು ನಡೆಯುತ್ತಿರುವುದೇ ಸರಿಯಾದಹಾದಿ---ಎಂಬುದು ಆತನ ದೃಢನಂಬುಗೆಯಾಗಿತ್ತು.

  ತಾಯಿ ಇದಾಗಲೆಲ್ಲ ಆಕೆಗೆ ಅಂಟಕೊಂಡೇ ನೀನಿರುತ್ತಿದ್ದೆ: ಪ್ರತಿಯೊಂದಕ್ಕೂ “ಅಮಾ” , ದಾಂಪತ್ಯ ಜೀವನದ ಕಲ್ಪನೆಯೇ ನಿನಗಿರಲಿಲ್ಲ , ತಾಯಿ ಸತ್ತ ಮೇಲೆ  ಮಾತ್ರ ನೀನು ನಿನ್ನ ಮನೆಗೂ ನಿನ್ನ ಮನಸ್ಸಿಗೂ ಯಜಮಾನ ಸಾದೆ; ಆ ಸಾತಂತ್ರದ ವಿಕೃತ ರಾವನ್ನು ಕಲ್ಪಿಸುತ್ತ ಹುಚ್ಚೆದು ಕುಣಿದೆ-- ಎ೦ದು ಯಾರಾದರೂ ಹೇಳಿದ್ದರೆ ಪುಟ್ಟಣ್ಣನೆಂದೂ ಒಪ್ಪುತ್ತಿರಲಿಲ್ಲ. ಆತ  ತನ್ನ ಈಗಿನ ನಡತೆಗೆ ಕಾರಣವಾಗಿ ತೋರಬಯಸುತ್ತಿದ್ದುದು ಸುನಂದೆಯನ್ನು, ಆ ಮದುವೆಯೇ ತನಗಿಷ್ಟವಿರಲಿಲ್ಲ. ತಾನು ಆಕೆಯ ಕೃಹಿಡಿದುದು ತಾಯಿಯ ಮನಸ್ಸಮಾಧಾನಕ್ಕಾಗಿ. ತನಗೂ ಆಕೆಗಣ ಎಂದೂ ಯಾವುದರಲ್ಲೂ ಒಮ್ಮತ ಏರಲಿಲ್ಲ.ಒದುವುದು ಅಲ್ಪವಾದರೂ ಎಂದಿದ್ದಳೇನೋ! ಸಲಿಗೆ ಕೊಟ್ಟದ್ದರೆ ಮೂಗು ದಾರ ಹಾಕಿ ನನ್ನನ್ನು ಕುಣಿಸಿಯೂ ಕುಣಿಸುತ್ತಿದ್ದಳು! ಆದರೇ ತಾನು ಮೋಸ ಹೋಗಲಿಲ್ಲ!
   ಮಗುವಿನ ನೆನವಾಗುತ್ತಿತ್ತು ಒಮ್ಮೊಮ್ಮೆ. ಆ ಮಗು ಯಾವುದರ ಪ್ರತಿಘಲ? ಪುಟ್ಟಣ್ಣನ ದ್ರುಷ್ಠಿಯಲ್ಲಿ ಮಗು ಹುಟ್ಟುವಂತಾದುದು ಮೂರ್ಖತನದ ವರೆಮಾವಧಿ. ಒಂದು ವೇಳೆ ಗಂಡು ಹುಟ್ಟಿದರೆ, ತನ್ನ ಸ್ವಾತಂತ್ರ್ಯ ಘೋಷಣೆಹೆ ಸ್ವಲ್ಪ ತಡೆಯಾಗುತ್ತಿತ್ತೋ ಏನೋ. ಹುಟ್ಟದುದು ಹೆಣ್ಣು. ಗಂಡಸಿನ ಮೇಲೆ ಸವಾರಿ ಮಾಡಲು ಬಯಸುವ ಜಾತಿಗೆ ಸೇರಿದು. ಒಂದು ದಿನ ಇನ್ನೊಬ್ಬರ ಮನೆಗೆ ಹೋಗಬೇಕಾದುದು,ತಾಯಿಯ ಜತೆಯಲ್ಲಿ ಆ ಮಗುವೂ ತನ್ನಿಂದ ಬೇರೆಯಾಗಬೇಕಾದುದು,ಅನಿವಾರ್ಯ....
  ಸರ್ವತಂತ್ರ ಸ್ವತಂತ್ರನಾಗಬಯಸಿದವನಿಗೆ ಕುಡಿತ ಬೆಲೆವೆಣ್ಣುಗಳ ಸಹ ವಾಸಯಾಕೆ?-ಅದರಲ್ಲಿ ತಪ್ಪಿಲ್ಲ, ತಾನು ಸ್ವತಂತ್ರ ಎಂದು ತೋರಿಸುವುದಕ್ಕೋಸ್ಕರ ಗಂಡಸು ಅಷ್ಟನ್ನು ಮಾಡಬಹುದು. ಅಲ್ಲದೆ, ಅದು ತನ್ನಿಷ್ಟ..... 
  ಇದು ಧರ್ಮವೇನು? ಹೀಗೆ ಮಾಡುವುದು ನ್ಯಾಯವೇನು?-ಧರ್ಮ ! ನ್ಯಾಯ !' ಎಲ್ಲಾ, ಬೋಡಮ್ಮಂದಿರಿಗೆ ಉಪದೇಶಿಸಬೇಕಾದ ವೇದಾಂತ,