ಪುಟ:Ekaan'gini.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ಎಕಾಂಗಿನಿ

   “ಏನಪ್ಪ ಹಾಗಂದ್ರೆ? ಅದೇನು ನಿನ್ಮೊಬ್ಬರಿಗೆ ಸಂಬಂಧಿಸಿದ ವಿಷ‍ಯನೆ?
ನಿಮ್ಮನ್ನೇ ನಂಬಿರೋ ಆ ಹುಡುಗಿ ಗತಿ ಏನು? ಮಗುವಿನ ಗತಿ ಏನು?
   “ಆ ವಿಷಯ ನನ್ನನ್ನು ಕೇಳ್ಬೇಡಿ. ನೀವು ಬೇಕಾದ್ದು ಮಾಡಬಹುದು."
   "ತಾಯಿ ಮಗೊನ ಪುನಃ ಕರಿಸ್ಕೊಳೋದಿಲ್ವೆ ಹಾಗಾದರೆ?"
   “ಯಾಕ ಕೇಳಿದ್ದನ್ನೇ ಕೇಳ್ತೀರಾ? ಒಂದು ಸಾರೆ ಹೇಳಿದರೆ ಅರ್ಧ 

ಆಗಲ್ವೇನು?”

   “ನೀವು ಈ ರೀತಿ ಶಿಕ್ಷ ಕೂಡೋದಕ್ಕೆ ನನ್ನ ಮಗಳು ಮಾಡಿದ ತಪಾದರೂ
ಯಾವುದು?”
  ಮುದುಕನ ಸ್ವರವೇರಿತ್ತು. ವುಟ್ಟಣ್ಣ ತಿರನ್ಕಾರದಿಂದ ತುಟ ಕೊಂಕಿಸಿ
ಮುಗುಳು ನಕ್ಕ.
   “ಆ ಪ್ರಶ್ನೆಗೆ ಉತ್ತಿರ ಕೂಡ ಲೇಬೇಕಾದ ಸಮಯ ಒಂದಾಗ ಕೊಡ್ರೀನಿ.
ಈಗ ನಿಮಗೆ ಹೇಳೋದಿಷ್ಟೆ. ಇನ್ನು ಮುಂದೆ ಭೇಟಗೆ ಬರಬೇಡಿ. ಅದರಿಂದ
 ಬಿಡಿಕಿಾಸಿನ ಪ್ರಯೋಜನವೂ ಆಗೋದಿಲ್ಲ '
   ಆಟದ ಬಯಲನ್ನೊಮ್ಮೆ ಕೃಷ್ಣಪ್ಪ ನೋಡಿದರು. ಪಶ್ಚಿಮಕ್ಕೆ ವೇಗವಾಗಿ

ಧಾವಿಸುತ್ತಿದ್ದ ಸೂರ್ಯನನ್ನೂ ಎಚ್ಛಿಸಿದರು.

  “ಇದೇನು ಹುಡುಗಾಟವೆ? ಎರಡು ದಿವಸ ಜತೇಲಿ ఆಟನಾಡಿ ಮೂರನೇ

ದಿನ ಬಿಡೋದಕ್ಕೆ?”

  “ನನಗೆ ನೀವು ಹಿತೋಪದೇಶ ಮಾಡಬೇಕಾದ್ದಿಲ್ಲ.”
  “ಉಪದೇಶ ಯಾರಿಗೆ ಬೇಕಾಗಿದೆ ಈಗಿನ ಕಾಲದಲ್ಲಿ? ನನ್ನ ಮಗಳ ಗತಿ

ಏನು ಅಂತಲಾದರು ಕೇಳೋ ನನಗಿದೆ ತಾನೆ?"

  “ನನ್ನನ್ನೇನು ಕೇಳ್ತೀರಾ? ನಿಮ್ಮ ಮಗಳು ವಿದ್ಯಾವಂತೆ-ಪ್ರಾಯಸ್ಥೆ.ಎನು 

ಮಾಡೋದಕ್ಕೂ ನನ್ನಷ್ಟೇ ಸ್ವಾತಂತ್ರ ಆಕೆಗೂ ಇದೆ!”

  “ಮಾತು ಅತಿಯಾಯ್ತು. ವಿವೇಚನೆ ఇల్లದೆ ಹೀಗೆಲ್ಲ ಆಡಬಾರದು.”
  ಪುಟ್ಟಣ್ಣ ತಟಕ್ಕೆನೆ ಎದ್ದು ನಿಂತ. ಕರವಸ್ತ್ರವನ್ನೆತ್ತಿಕೊಂಡು ಮಡಚಿ
ಕೋಟಿನ ಜೇಬಿನೊಳಗಿರಿಸಿದ. ಆತನ ಮುಖ ರಕ್ತಕಣಗಳ ಸಿಕ್ಕುಬಲೆ

ಯಾಯಿತು.

  ಕ್ಷೀಣಧ್ವನಿಯ ಆರ್ತನಾದವೇ ಎನ್ನುವ ಹಾಗೆ ಕೃಷ್ಣಪ್ಪನೆಂದರು: