ಪುಟ:Ekaan'gini.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ನಲ್ಲಿ ಸೇರಿಹೋದಳು. ರಾಮಕೃಷ್ಣಯ್ಯ ಕಾಗದದಲ್ಲಿ ಬರೆದಿದ್ದ ವಿಚಾರಗಳು ಚರ್ಚೆಯಾದಾಗ ಕೃಷ್ಣಪ್ಪನವರು ತಮ್ಮ ಸಂದೇಹವನು ಮುಂದಿಟ್ಟರು. “ಮೊದಲ್ನೀ ಹೆಂಡತಿ ಬದುಕಿರುವಾಗ ಇನ್ನೊಂದು ಮದುವೆ ಹಾಗೆ ಮಾಡ್ಕೋತಾನೆ?" "ಕಾನೂನು ವಿಷಯ ತಾನೆ ನೀನು ಕೇಳೋದು ?” "ಹೌದು”. “ಇವತ್ತಾದರೆ ಮಾಡ್ಕೋ ಬಹುದು. ನಮ್ಮ ಸಂಸ್ಥಾಲ್ಲಿ ಅದಕ್ಕಿನ್ನೂ ಅವಕಾಶ ಇದೆ. ಒಂದು ತಿಂಗಳಾದೆಲೆ ಆಗೋಲ್ಲ.” “ಅಂದರೆ" ?" "ಹಿಂದೂ ವಿವಾಹದ ಮಸೂದೆ ವಾರ್ಲಿಮೆಂಟನಲ್ಲಿ ಚರ್ಚೆಯಾಗ್ತಿರೋ ವಿಷಯ ಪತ್ರಿಕೇಲಿ ಓದಿದೀರೋ ಇಲ್ವೋ ?” “ಓದಿದೀನಿ". "ಅದೇನು ಓದಿದೀಯೋ? ಇನ್ನು ಸ್ವಲ್ಪ ದಿವಸಗಳಲ್ಲೆ ಮಸೂದೆ ಮಂ ಜೂರಾಗಿ ಶಾಸನವಾಗುತ್ತೆ. ಅದಕ್ಕೆ ರಾಷ್ಟಾಧ್ಯಕ್ಷರ ಸಹಿ ಬಿದ್ಮೇಲೆ ಇಬ್ಬರು ಹೆಂಡಿರನ್ನ ಕಟ್ಟೋಳ್ಳೋಕಾಗಲ್ಲ”. "ಸೆರಿ. ಸೆರಿ." ಆ ಮಸೂದೆಯಲ್ಲಿ ಬೇರೆಯೂ ಅಂಶಗಳಿದ್ದುವು. ವಿವಾಹ ವಿಚ್ಛೇದನ ವನ್ನು ಅದು ನ್ಯಾಯ ಸಮ್ಮತಗೊಳಿಸಿತ್ತು. ಕೃಷ್ಣಪ್ಪನರಿಗೂ ಅದು ತಿಳಿ ದಿದ್ದ ಸಂಗತಿಯೇ. ಹೀಗಿದ್ದರೂ ರಾಮಕೃಷ್ಣಯ್ಯನವರು ಮಸೂದೆಯ ವಿವರ ಗಳನ್ನು ಪ್ರರ್‍ತಾಪಿಸಬಯಸಲಿಲ್ಲ. ಆಗಿನ ವಾತಾವರಣದಲ್ಲಿ ಅಂತಹ ಪ್ರಸ್ತಾಪ ಯೋಗ್ಯವಲ್ಲವೆಂದು ಅವರಿಗೆ ತೋರಿತು. ಅಷ್ಟರಲ್ಲೆ ಸುನಂದಾ ಮಗುವನ್ನೆತ್ತಿಕೊಂಡು ಹೊರಬಂದಳು. “ಏನ್ಹೇಳ್ತೀಯಮ್ಮ ಸುನಂದಾ?”ಎಂದು ರಾಮಕೃಷ್ಣಯ್ಯನವರು ಕೇಳಿದರು. "ಏನಿದೆ ನಾನು ಹೇಳೋದು ?” "ಅವಳಿಗೆ ಬಹಳ ಬೇಸರವಾಗಿದೆ ರಾಮಕೃಷ್ಣಯ್ಯ" ಎ೦ದರು ಕೃಷ್ಣಪ್ಪನವರು.