೧೦
ಹರಕೆಯು ಖಡ್ಗ
“ಮೋನ್ಯಾ...”
- “ಅಪ್ಪಾಜಿ...”
- “ಏನಾಟ ಅದು?”
- “ಯಾನಿಲ್ಲಪ್ಪಾಜಿ...ಹಿಹ್ಹಿ!”
- ನಾಲ್ಕು ವರ್ಷಗಳ ಹಸುಳೆಗೆ ಮಣಭಾರ ಹೊರುವ ಹಟ.
“ತಂದೆಯ ಖಡ್ಗ ಈಗಲೇ ಎತ್ತೋಕೆ ನೋಡ್ತೀಯೇನೋ? ಶಹಭಾಸ್!!”
ಎತ್ತುವುದೇನು బంలేు? ಖಡ್ಡ ಮಿಸುಕಲೂ ಇಲ್ಲ, ಆದರೂ, ಏನೋ ಸಾಧಿಸಿದೆನೆಂಬ ಸಮಾಧಾನ ಮೋನ್ಯಾನಿಗೆ. ಬಲಬದಿಯ ಕೆನ್ನೆಯಲ್ಲಿ ಗುಳಿ ಬಿದ್ದಿತು, ಆತ ನಕ್ಕಾಗ. ಅಹಲ್ಯೆಗೆ-ಅಲ್ಲ ರಾಣಿಗೆ (ಅವಳ ಗಂಡನ ಪಟ್ಟಾಭಿಷೇಕವಾದಂದಿನಿಂದ ಹಾಗೆ) ಯಾತನೆಯಲ್ಲಿಯೂ ಹರ್ಷ. ತನ್ನ ಗಂಡ ಸಂಸ್ಕಾರದ-ಅಲ್ಲ, ರಾಣಿವಾಸದ-ಜತೆ ಕಳೆಯುವ ವೇಳೆ, ಉಪಾಹಾರ ಸ್ವೀಕರಿಸುವ ಕೆಲವೇ ನಿಮಿಷ.
ಇನ್ನರ್ಧ ಘಳಿಗೆಯಲ್ಲಿ ಡೇರೆ ಕೀಳಬೇಕು. ಇಲ್ಲಿಂದ ಇನ್ನೆಲ್ಲಿಗೆ ಪಯಣವೊ? ಇದಕ್ಕೆ ಯಾವಾಗ ಕೊನೆಯೊ?
ಮನಸ್ಸು ಮುದುಡಿದ ಆ ವೇಳೆಯಲ್ಲಿ ಚೇತೋಹಾರಿಯಾಗುತ್ತಿದ್ದವನು ಮೋನ್ಯಾ.
ಅದೇನು ಮಾಯೆಯೊ? ಶಿಕಾರಿಪುರದ ದೇವಾಲಯದಲ್ಲಿ ಪೂಜೆ ಮಾಡಿಸಿ ಮರಳಿದ ಬಳಿಕ ಅಲ್ಲವೆ ತಾನು ಗರ್ಭವತಿಯಾದದ್ದು? ಹುಟ್ಟಿದ ಕ್ಷಣದಿಂದಲೂ ಸುಖ ಕಾಣಲಿಲ್ಲವಲ್ಲ ಮಗು? ಆದರೂ ನಗು, ನಗು..ತನಗೆ ಮೋಸ ಮಾಡಿದರೆಂದು ಗಂಡ ಕ್ರುದ್ಧ, ತಪ್ತ. ಮೋನ್ಯ ಅಂಬೆಗಾಲಿಡುವ ಹೊತ್ತಿಗೆ ಸುಲ್ತಾನರೊಡನೆ ವಿರಸ, ಮತಾಂತರದ ದಂಡನೆ, ಸೆರೆಮನೆ. ಪಟ್ಟಣ ಆಂಗ್ಲರ ವಶವಾಗಿ, ಬಿಡುಗಡೆ ಪ್ರಾಪ್ತವಾದ ಮೇಲೆ ತೂಗುಯ್ಯಾಲೆಯ ಬದುಕು-ಮೇಲಕ್ಕೆ ಹೋಯಿತು, ಕೆಳಕ್ಕೆ ಬಂತು-ಮತ್ತೆ ಮೇಲಕ್ಕೆ ಮತ್ತೆ ಕೆಳಕ್ಕೆ,
80