ಪುಟ:Kalyaand-asvaami.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮರ ಸುಳ್ಯದಲ್ಲಿ ಕ್ಷೋಭೆಯ ಕಿಡಿ "ಹಂಗಾರೆ ನಿನಗೆ ನನ್ನ ನೆನಪಾಗೋದಿಲ್ವಾ?" ತುಂಟತನದ ಪ್ರಶ್ನೆ. ಗಿರಿಜೆಯ ಮೈ ಮಿಸುಕಿತು. ಆಕೆಯ ಸಡಿಲ ಗೊಂಡಿದ್ದ ಹೆರಳಿಸೆಡೆಯಲ್ಲಿ ಪುಟ್ಟ ಬಸವ ತನ್ನ ಕೈ ಓಡಿಸಿದ. "ಊಹೂಂ." 'ಊ' ಎಂದು ರಾಗವೆಳೆಯುತ್ತ ಪುಟ್ಟ ಬಸವ ಆಕೆಯ ಮುಖದೆಡೆಗೆ ತನ್ನ ತುಟಿಗಳನ್ನೊಯ್ದ. ಮೆಲ್ಲನೆ ಆತ ಕೇಳಿದ: "ನಿನಗೆ ಏನು ಕೊಡಲೆ ಗಿರಿಜಾ?" ಸುಖಿಯಾಗಿದ್ದ ಆಕೆ ಅಂದಳು: "ನೀವು ನನ್ನ ಬಿಟ್ಟರದೇ ಇದ್ದರೆ ಸಾಕು. ನನಗೆ ಇನ್ನೇನೂ ಬೇಡಿ." ತಂಗಾಳಿ ಮೈಕೊರೆದ ಹಾಗಾಯಿತು ಪುಟ್ಟಬಸವನಿಗೆ. ಆ ಆಶ್ವಾಸನೆಯನ್ನು ಕೊಡುವುದು ಆತನಿಂದ ಸಾಧ್ಯವಿರಲಿಲ್ಲ. ತಾನು ತಿಳಿಸಬೇಕೆಂದಿದ್ದುದಕ್ಕೆ ಎಂತಹ ಹಿನ್ನೆಲೆಯಾಗಿತ್ತು ಹೆಂಡಿಯ ಮಾಡು! ಗಂಡ ಮೌನವಾಗಿದ್ದ. ಆತನ ಅಂಗೈಯನ್ನು ತನ್ನೆರಡೂ ಕೈಗಳಿಂದ ಹಿಡಿದು ಎದೆಯ ಬಳಿಗೊಯ್ಯುತ್ತಾ ಗಿರಿಜೆ ಕೇಳಿದಳು: "ಯಾಕೆ ಸುಮ್ಕಿದೀರಿ?" ಬಾಯಿ ತೆರೆದು, ಹೃದಯ ಬಿಚ್ಚಿ, ಮಾತನಾಡಲು ಬಲು ಕೆಟ್ಟ ಸಮಯ. ಅಥವಾ ಅದೇ ಸರಿಯಾದ ಅಕಾಶವೋ ಏನೋ.... "ಇನ್ನು ಒಂದ್ಸಲ ಹೋಗ್ಬಿಟ್ಟು ಬರ್ರ್ತೀನಿ. ಆ ಮೇಲೆ ಎಲ್ಲಿಗೂ ಹೋಗೊಲ್ಲ." ತಾನು ಕೇಳಿದುದು ಚಂದಮಾಮನನ್ನೆ ಎಂಬುದು ಗಿರಿಜೆಗೆ ಗೊತ್ತಿರಲಿಲ್ಲವೆಂದೆ? ಆದರೂ.... "ಓಗ್ತೀರಾ? ಎಲ್ಲಿಗೆ? ಯಾಕೆ?" ತಿಳಿಯಹೇಳುವ ವಿಶ್ವಾಸದ ಧ್ವನಿಯಲ್ಲಿ ಪುಟ್ಟಬಸವನೆಂದ: "ನಿನಗೆ ಗೊತ್ತಿಲ್ವಾ ಗಿರಿಜಾ? ಎಂಥ ದುರವಸ್ಥೆ ಬಂದೈತೆ ನಮ್ಮ ರಾಜ್ಯಕ್ಕೆ!....ಒಂದ್ಸಲ ಇಂಗ್ಲಿಷ್ನೋರನ್ನ ಓಡಿಸಿದ್ಮೇಲೆ...." ಯಾರೋ ಕಸಿದುಕೊಳ್ಳುತಿದ್ದ ತನ್ನ ಒಡವೆಯನ್ನು ಬಿಟ್ಟುಕೊಡದೆ