ಅಮರ ಸುಳ್ಯದಲ್ಲಿ ಕ್ಷೋಭೆಯ ಕಿಡಿ ಅಂತಹ ತೃಪ್ತಿಯೆ ಆಗಿತ್ತು ರಾಮಗೌಡನಿಗೆ, ಸಹಕಾರದ ಹಸ್ತವನ್ನು ಆತ ಅದುಮಿದ್ದ. ಒಲವಿನ ತುಂಬುಬಟ್ಟಲು ಹೃದಯದ ದಾಹಕ್ಕೆ ಪಾನೀಯವಾಗಿ ದೊರೆತಿತ್ತು. ಗಾಢ ಮೈತ್ರಿಯ ಆಲಿಂಗನದಿಂದ ಪುಲಕಗೊಂಡಿತ್ತು ಮೈ. ಸಾವಧಾನವಾಗಿ ಸಂತೃಪ್ತ ಸ್ವರದಲ್ಲಿ ಆತನೆಂದ : " ಏನೇನು ಆಸೆ ಕಟ್ಟಿಕೊಂಡು ಘಟ್ಟ ಹತ್ತಿ ಬಂದಿದ್ದೆನೋ ಅದೆಲ್ಲಾ ನೆರವೇರಿದ ಹಾಗಾಯ್ತು ನಂಜಯ್ಯನವರೆ". "ಸಂತೋಷ ನಿಮ್ಮ ಬಾಯಿಂದಲೇ ಆ ಮಾತು ಕೇಳಬೇಕೂಂತ ಅಪೇಕ್ಷೆಯಾಗಿತ್ತು." "ಗುರುತು ಪರಿಚಯವಿಲ್ಲದ ಜನ. ಹೊಸಬರು, ಅದೇನಿದ್ದರೂ ನಾವು ಒಡಹುಟ್ಟದವರೇ ಅಂತ ನಂಬಿಕೊಂಡು ಇಲ್ಲಿಗೆ ಬಂದೆ. ನನ್ನ ನಂಬಿಕೆ ಸುಳ್ಳಾಗಲಿಲ್ಲ. ನಿಮ್ಮನ್ನೆಲ್ಲಾ ನೋಡಿದ್ಮೇಲೆ, ನಿಮ್ಮ ಹತ್ತಿರ ಮಾತನಾಡಿದ್ಮೇಲೆ, ನಾವೆಲ್ಲಾ ಅಣ್ಣ ತಮ್ಮಂದಿರು ಅನ್ನೋದು ಸ್ಪಷ್ಟವಾಯ್ತು." ನಂಜಯ್ಯ ಹೇಳಿದ : "ಗೌಡರೆ, ನಿಜವಾಗಿ ನೋಡಿದರೆ ಈ ವಯಸಲ್ಲಿ ನಮ್ಮಂಥವರು ಮೊಮ್ಮಕ್ಕಳನ್ನು ತೊಡೆಮೇಲಿರಿಸಿಕೊಂಡು ಆಡಿಸ್ತಾ ಮನೇಲಿ ಕೂತಿರ್ಬೇಕು. ಆದರೆ ನಾವೆಲ್ಲಿದೇವೆ ಈಗ? ನಾನು ನನ್ನ ಕುಟುಂಬದ ಮುಖ ನೋಡದೆ ಎಷ್ಟು ಕಾಲವಾಯ್ತೊ - ಆ ಎಣಿಕೆಯೇ ಮರೆತು ಹೋಗಿದೆ !" "ನನಗೆ ನಾಲ್ಕು ಮಕ್ಕಳಿದಾರೆ ನಂಜಯ್ಯನವರೆ. ದೊಡ್ಡೋನು ಪ್ರಾಯಕ್ಕೆ ಬಂದಿದ್ದಾನೆ. ಈ ವಷ೯ ಮನೆಗೆ ಸೊಸೆ ತರಬೇಕೂಂತಿದ್ದೆ. ಈಗ ಆ ಯೋಚನೆ ಇಲ್ಲ." ಒಮ್ಮಿಂದೊಮ್ಮೆಲೆ ಆ ಇಬ್ಬರೊಳಗೆ ಆರಂಭವಾದ ಈ ಮಾತುಕತೆಯನ್ನು ಕೇಳುತ್ತ ಉಳಿದವರಿಗೆ ಆಶ್ಚಯ೯ವಾಯಿತು. ವಯಸ್ಸಿನಲ್ಲಿ ಇಬ್ಬರಿಗಿಂಲೂ ಹಿರಿಯನಾದ ಸೋಮಯ್ಯ ನುಡಿದ : "ನನ್ನನ್ನು ಯಾಕೆ ಮರೆತಿರಿ? ನಾನು ಯಾವ ತಪ್ಪು ಮಾಡಿದೇಂತ ? ಪುಟ್ಟ ಬಸವ ಮುಗುಳುನಕ್ಕ. "ನಂಜಯ್ಯನವರೆ, ರಾಮಗೌಡರೆ, ಕೇಳಿದಿರಾ ಸೋಮಯ್ನೋರು
ಪುಟ:Kalyaand-asvaami.pdf/೧೧೩
ಗೋಚರ