ಕಲ್ಯಾಣ ಸ್ವಾಮಿ ಮಾತನ್ನ? ಮದುವೆಗೆ ಬೆಳೆದಿರೋ ಮೊಮ್ಮಗಳಿದಾಳೆ ಅವರಿಗೆ !" ನಂಜಯ್ಯ, ರಾಮಗೌಡ, ಇಬ್ಬರೂ ಸೋಮಯ್ಯನ ಕಡೆಗೆ ನೋಡಿದರು. ಗೌಡನೆಂದ :
"ಕ್ಷಮಿಸೀಪ್ಪಾ. ಒಂದು ಬೆಟ್ಟಕ್ಕೆ ಇನ್ನೊಂದು ಬೆಟ್ಟ ಅಡ್ಡವಾಗಿರ್ತದೆ ಅನ್ನೋದು ಮರೆತ್ಹೋಯ್ತು !"
ಸೋಮಯ್ಯ ನಕ್ಕು ಸುಮ್ಮನಾದ. ತಪ್ಪು ಮಾಡಿದವನಂತೆ ಗೌಡ ಹೇಳಿದ : " ಮಾತು ಎಲ್ಲಿಗೋ ಹೋಯ್ತು. ಆದರೂ ಒಂದು ರೀತೀಲಿ ಮಕ್ಕಳನ್ನು ಮರೀದೆ ಈ ಕೆಲಸ ಮಾಡೋದೆ ಮೇಲು. ನಮಗೆ ಬಿದ್ದಿರೋ ಈ ಸಂಕೋಲೆಗಳನ್ನ ಈಗ ಮುರಿದರೆ, ಸ್ವತಂತ್ರ ದೇಶದಲ್ಲಿ ನಮ್ಮ ಸಂತಾನ ಬೆಳೆಯೋದು ಸಾಧ್ಯವಾದೀತು. ಅವರಿಗಾಗಿಯೇ ನಾವು ಇದನ್ನೆಲ್ಲಾ ಮಾಡ್ತಿರೋದು ಅಂತ ಹೇಳಿದರೆ ತಪ್ಪೇನು ?" ಪುಟ್ಟ ಬಸವನೆಂದ : " ಏನೇನೂ ತಪ್ಪಿಲ್ಲ. ನಿಜಸ್ಥಿತಿ ಇರೋದೇ ಹಾಗೆ. ಇವತ್ತು ನಾವು ಸುಮ್ಮನೆ ಕೂತರೆ, ಮುಂದಿನ ಜನಾಂಗ ನಮಗೆ ಶಾಪಾಕೊಡೋದು ಖಂಡಿತ...." ಎಲ್ಲರ ಹೃದಯಗಳು ಭಾರವಾದುವು. ಯಾವಕಾರಣವೂ ಇಲ್ಲದೆ ಯಾಕೆ ಹೀಗೆ? _ ಎಂದು ಪ್ರತಿಯೊಬ್ಬರೂ ಯೋಚಿಸುವಂತಾಯಿತು." ಅನಿವಾಯ೯ವಾಗಿ ಬಲೆಬೀಸಿದ ಮೌನವನ್ನು ಬದಿಗೆ ಸರಿಸುತ್ತ ರಾ, ಗೌಡ ಹೇಳಿದ : "ಸ್ವಾಮಿಯವರೆ, ಹಾಗಾದರೆ ನಾಳೆ ನಾವು ಹೊರಡುವುದು ನಿಶ್ಚಯವಾಯ್ತು." ಹೌದೆಂದು ಪುಟ್ಟ ಬಸವ ತಲೆಯಾಡಿಸಿದ : " ರಾತ್ರ ಇಲ್ಲಿಯೇ ತಂಗಿದ್ದು ಬೆಳಬೆಳಗ್ಗೆ ಹೊರಟುಬಿಡಿ." ಚೆಟ್ಟ ಹೇಳಿದ : "ಕತೂ೯ದೂ ನನ್ನದೂ ಕುದುರೆಗಳಿವೆಯಲ್ಲ. ಗೌಡರೂ ಮಾಚಯ್ನೋರು ಅವುಗಳನ್ನೇ ತಗೊಂಡು ಹೋಗ್ಲಿ."