ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮಗೌಡನೆಂದ: "ಹೌದು" "ಆಗಬಹುದು. ಆ ರಾಮಪ್ಪಯ್ಯನನ್ನ--" "ಆ ವಿಷಯ ನನಗೆ ಬಿಟ್ಟಿಡಿ. ನಾಳೆ ಸಾಯಂಕಾಲದೋಳಗೆ ಅವನ ಸಮಾಸ್ತಿಯಾಗ್ತದೆ," ಎಂದ ಅಣ್ಣೆಗೌಡ ಉದ್ವೇಗದಿಂದ . ಆತನನ್ನೆ ದಿಟ್ಟಿಸಿ , ದೃಢವಾದ ಮೃದು ಧ್ವನಿಯಲ್ಲಿ ಕಲ್ಯಾಣಸ್ವಾಮಿ ಯೆಂದ: "ನಿಮ್ಮ ವಿಷಯ ರಾಮಗೌಡರು ಆಗಲೆ ಹೇಳಿದ್ದಾರೆ, ಅಣ್ಣೆಗೌಡರೆ. ಇದು ವೈಯಕ್ತಿಕ ಪ್ರಶ್ನೆಯಲ್ಲ. ಆಪತ್ತು ಇಡೀ ದೇಶಕ್ಕೇ ಬಂದಿದೆ ನೋಡಿ. ಆಗಲಿ. ರಾಮಪ್ಪಯ್ಯನ ವಿಚಾರ ನಿಮಗೆ ಬಿಡ್ತೀವಿ . ಆದರೆ ನೀವೊಬ್ಬರೇ ಈ ಕೆಲಸ ಮಾಡಬಾರ್ದು. ನಮ್ಮ ಆಪ್ತರಾದ ಸರದಾರರನ್ನು ಕರಕೊಂಡು ಹೋಗಿ. ಒಂದು ನರಭಕ್ಷಕ ಹುಲೀನ ಬೀಟಿಯಾಡ್ತಿದೀವೆ ಅಂತ ಭಾವಿಸ್ಕೊಂಡು ಆತನನ್ನು ಮುಗಿಸಿ. ಸರಿಯೀ?" ಆ ಮಾತು ಸರಿ, ಎಂದರು ಎಲ್ಲರೂ. ಕಲ್ಯಾಣಸ್ವಾಮಿ ಕೇಳಿದ: ' ಹಾಗಾದರೆ ನಾಳೆ ಸಂಜೆಯೇ ಅಮರ ಸುಳ್ಯದಲ್ಲಿ ಸ್ವಾತಂತ್ರ್ಯ ಘೋಷಣೆಯೊ?" ಎಲ್ಲರ ಪರವಾಗಿ ಎನ್ನುವಂತೆ ರಾಮಗೌಡನೆಂದ: "ಹೌದು."