ಪುಟ:Kalyaand-asvaami.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣಸ್ವಾಮಿ ಬದುಕಿದೆನೆಂದು ಸರಾಗವಾಗಿ ಉಸಿರು ಬಿಡುತ್ತ ಆ ತುಂಡರಸನೆಂದ:

"ತಮ, ದಂಡನು ಸೇರಬೇಕೂಂತ ಜನರು ಆಗಲೆ ಮಾತಾಡಾ ಇದ್ದರು.”

“ ಹಾಗೋ? ಒಳ್ಳೆದು.. ನೀವು ಕೊಡಗುರಾಜರ ಸ್ನೇಹಿತರೆಂತಲೇ ಭಾವಿಸ್ತೀವಿ, ಕಡಮೆಯೆಂದರೆ ನೂರು ಜನ ಸೈನಿಕರಾದರೂ ವಿಟ್ಲದಿ೦ದ ಬರಬೇಕು.”

"ನೂರೈವತ್ತು ಜನರನ್ನು ಕಳಿಸ್ತೆನೆ.”

ಸಾಯುವವರು ಬೇರೆಯವರು ಮಕ್ಕಳೆಂದಾದರೆ ನೂರೈವತ್ತೇನು, ಇನ್ನೂರೇನು,-ಎಂದು ಮನಸಿನೊಳಗೇ ನಗುತ್ತ, ಕಲ್ಯಾಣಸ್ವಾಮಿ ಹೇಳಿದ.

"ಆಗಲಿ, ಇವತ್ತು ನಮ್ಮಲ್ಲೇ ನೀವು ಆತಿಥ್ಯ ಸ್ವೀಕರಿಸ್ಬೇಕು.”

ಅರಸು ಪುನಃ ಹಿ೦ದುಮು೦ದು ನೋಡಿದ:

"ಕ್ಷಮಿಸಬೇಕು, ನಾವು-ತಾವು-”

"ನಿಮಗೆ ತೊಂದರೆಯಾಗುವ ಹಾಗಿದ್ದರೆ ಬೇಡ. బನ್ನಿ. ಶಿಬಿರವನ್ನು ನೋಡಿ ಊರಿಗೆ ಹೋಗುವಿರ೦ತೆ."

...ಹಗಲು ಪತ್ತೆಹಚ್ಚಿದ್ದ ಅರ್ಥಧಾರಿಗಳನ್ನು ಸೈನಿಕರು ಕರೆದು ತಂದು, ರಾತ್ರೆ ಶಿಬಿರದಲ್ಲಿ ಯಕ್ಷಗಾನ ಕೂಟವೇರ್ಪಡಿಸಿದರು. ಯಕ್ಷಗಾನ ಪ್ರಿಯನಾಗಿದ್ದ ರಾಮಗೌಡನೇ ಆ ಕೂಟದ ಮೇಲ್ವಿಚಾರಣೆಯನ್ನು ನೋಡಿದ. ಮೆದುಳು ಮುಂದಿನ ಯೋಜನೆಯಲ್ಲೆ ನಿರತವಾಗಿದ್ದರೂ ని ಕರ ಜತೆ ಕಲ್ಯಾಣಸಾಮಿಯೂ బంದು ಕುಳಿತು ಅರ್ಥಧಾರಿಗಳ ವ್ಯಾಗುದ್ಧದ ಸುಖ ಅನುಭವಿಸಿದ.

ಕೊಟ ನಡೆಯುತಿದ್ದ೦ತೆ ಕಾವಲುಗಾರನೊಬ್ಬ ಬ೦ದು ರಾಮಗೌಡನ ಕಿವಿಯಲ್ಲಿ ಪಿಸುನುಡಿದ:

“ಯಾವನೋ ಒಬ್ಬ ಸವಾರ ಬ೦ದವನೆ. ಸ್ವಾಮಿಯವರನ್ನು ತಕ್ಷಣ ಕಾಣ್ಣೆಕಂತೆ.”

ಎದ್ದು ಹೋದ ರಾಮಗೌಡ, ಕೆಲ ನಿಮಿಷಗಳಲ್ಲೆ ಮರಲಿ ಬ೦ದು ಕಲ್ಯಾಣಸ್ವಾಮಿಯನ್ನು ಕರೆದೊಯ್ದ.

ಬಂದಿದ್ದ ಸವಾರ, ಸುಬ್ರಾಯಹೆಗ್ಗಡೆಯ ದೂತ.

ಸವಾರನಿಗೆ ಕೇಳಿಸದಂತೆ ರಾಮಗೌಡನೊಡನೆ ಪಿಸುಧ್ವನಿಯಲ್ಲಿ ಕಲ್ಯಾಣಸ್ವಾಮಿ ವಿಚಾರಿಸಿದ: