ಪುಟ:Kalyaand-asvaami.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ತೊಡಗಿದಳು ಎಂದಿನಂತೆ. ಕ್ಷೀಣಧ್ವನಿಯ ರೋದನ. ಒಳಗಿನ ಸಂಕಟ ಕರಗಿ ಕುದಿದು ಸ್ವಲ್ಪ ಸ್ವಲ್ಪವೆ ಹೊರಕ್ಕೆ ಒಸರಿತು. ಗಿರಿಜನ್ವನಿಗೂ ಗಂಟಲು ಒತ್ತರಿಸಿ ಬಿಕ್ಕುವಂತಾಯಿತು. ಆಕೆ ಎದ್ದು ಅತ್ತೆಯ ಬಳಿಗೆ ನಡೆದಳು. ಅಲ್ಲಿ ಆ ಹಣ್ಣು ಜೀವಕ್ಕೋತ್ತಿಕೊಂಡು ಕುಳಿತಳು. ಗಂಗವ್ವನ ಸುಕ್ಕುಗಟ್ಟದ ಕೈ ಸೊಸೆಯ ತೋಳನ್ನು ಮುಟ್ಟಿತು; ಮೈಯನ್ನು ತಡವಿತು; ಮುಖದತ್ತ ಸರಿಯಿತು. ಆ ಕಣ್ಣುಗಳಲ್ಲಿ ಹನಿಯಾಡಿತೆಂದು, ಆಕೆ ಅಂದಳು. "ನೀನ್ಯಾತಕ್ಕೆ ಅಳ್ತೀಯಾ? ಅಳಬೇಡ." "ಇಲ್ಲ ಅತ್ತೆಮ್ಮ." ಆ ಉತ್ತರವನ್ನು ಮಾತ್ರ ಅಳು ನಿರ್ಲಜ್ಜೆಯೆಂದ ಹಿಂಬಾಲಿಸಿತು.
ಅತ್ತೆ ತನ್ನ ಬಡ ಬಾಹುನಿನಿಂದ ಸೊಸೆಯನ್ನು ಬಳಸಿ ತನ್ನೆಡೆಗೆ ಬರ ಸೆಳೆದಳು. ಎಳೆಯ ಮಗುವಾಗಿ ಮುದುಡಿಕೊಂಡು ಗಂಗವ್ವನ ಎದೆಯೊಳಗೆ ಮುಖವಿಟ್ಟಳು ಗಿರಿಜೆ.
ಒಂದೇ ರೀತಿಯ ದು:ಖ ಎರಡು ಜೀವಗಳನ್ನೂ ಒಂದಾಗಿ ಬೆಸೆಯಿತು. ಹೊರಗೆ ಸುಯ್ ಸುಯ್ಯೆಂದು ಸದ್ದುಮಾಡುತ್ತ ಬೀಸುತ್ತಲೇ ಇತ್ತು ಗಾಳಿ. ಅತ್ತೆ ಕೇಳಿದಳು: "ಇವತ್ತು ಹುಣ್ಣಿಮೆ ಅಲ್ಲವಾ?" "ಹೊಂ. ಅತ್ತೆಮ್ಮ." "ಯಾಕೆ, ತಿಂಗಳ ಬೆಳಕೇ ಇಲ್ವಲ್ಲಾ. ಮೋಡ ಮುಚ್ಕೊಂಡೈತಾ? ಮಳೆ ಬರೋ ಹಂಗೈತಾ?" ಬೆಳಕು ಶುಭ್ರವಾಗಿತ್ತು. ಮೋಡ ಮುಚ್ಚಿರಲಿಲ್ಲ. ಬೇಸಗೆ ಅದೇ ಅಗ ಆರಂಭವಾಗಿದ್ದ ಆ ದಿನಗಳಲ್ಲಿ ಎಲ್ಲಿಯ ಮಳೆ? ಆದರೆ ಎದೆಕುದಿತ ದಿಂದ ವಿಚಾರ ಮಂಕಾಗಿದ್ದ, ವಯಸ್ಸಿನಿಂದ ದೃಷ್ಟಿ ಮಂದನಾಗಿದ್ದ, ಗಂಗವ್ವನ ಪಾಲಿಗೆ ಪ್ರತಿಯೊಂದೂ ತಿರುವುಮುರುವಾಗಿತ್ತು. ಅದನ್ನು ತಿಳಿ