ಪುಟ:Kalyaand-asvaami.pdf/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆ ಸ್ವರ ಬಂದ ದಿಕ್ಕಿನತ್ತ ಕಲ್ಯಾಣಸಾಮಿ ದೃಷ್ಟಿ ಹೊರಳಿಸುತಿದ್ದಂತೆ ಗುಂಡೊಂದು ಅತನ ಬಲಗೈಯನ್ನು ತಾಕಿತು. ಖಡ್ಗ ಬಿದ್ದುಹೋಯಿತು.

ಎಡಗೈಯಲ್ಲಿ ಅದನ್ನೆತ್ತಿಕೊಳ್ಳುತ್ತಾ ರೋಷಾವೇಷದಿಂದ ಕಲ್ಯಾಣಸಾಮಿ ಗರ್ಜಿಸಿದ;

ಪಾಪಿಗಳೇ! ಬನ್ನಿ ಧೈರ್ಯವಿದ್ದರೆ ಮುಂದಕ್ಕೆ !”

ಬಂದ ಇಬ್ಬರು ಗಾಯಗೊಂಡು ಉರುಳಿದರು.

ಆದರೆ ನಾಲ್ಕು ದಿಕ್ಕುಗಳಿಂದಲೂ ಮುತ್ತಿದ ಹತ್ತಾರು ಜನ ಆತನನ್ನು ಹಿಡಿದರು, ಹಿಡಿದು ಕೆಡವಿದರು.

ಕಿವಿಯೊಡೆಯುವಂತೆ ಹಾಹಾಕಾರವೆದ್ದಿತು ಸುತ್ತುಮುತ್ತಲಿಂದ. ಹೋರಾಡುವವರಿಗಿಂತಲೂ ಓಡುವವರ ಸಖ್ಯೆ ಹೆಚ್ಚಿತು.

ಬಂಗರಾಜ, ರಾಮಗೌಡ, ಅಣ್ಣಿ – ಎಲ್ಲರನ್ನೂ ಗಾಯಗೊಳಿಸಿ ಸೆರೆ ಹಿಡಿದರು ಬಿಳಿಯರು, ಅವರ ನೇತೃತ್ವದಲ್ಲಿದ್ದ ಕರಿಯರು.

ಒಂದೇ ಸಮನೆ ಉರಿಯುತ್ತ ಬಂದಿ ದೀವಟಿಗೆಯನ್ನು ನೆಲಕ್ಕೆಸೆದು, ಮಣ್ಣಲ್ಲಿ ತೀಡಿ, ಅರಿಸಿದರು.

ಧ್ವಜಸ್ತಂಭದ ಮೇಲಿದ್ದ ಸ್ವಾತಂತ್ರ ಬಾವುಟವನ್ನು ಕೆಳಕ್ಕೆಳೆದು, ಮೆಟ್ಟಿ, ತುಳಿದರು.