ಪುಟ:Kalyaand-asvaami.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕತ್ತಲು ಕವಿದ ಕೊಡಗು

ನಿಗೋಸ್ಕರ ಆಕೆಯ ಹೃದಯದಲ್ಲಿ ನೆಲೆ ನಿಂತಿತು,...

-ತನ್ನ ತೊಡೆಯ ಮೇಲೆ ತಲೆ ಇರಿಸಿ ಮುದುಡಿ ಮಲಗಿದ್ದ ಸೊಸೆ ಗಿರಿಜವ್ವನನ್ನು ಗಂಗವ್ವ ದಿಟ್ಟಿಸಿ ನೋಡಿದಳು. ಏನು ಕಾಣಿಸುತಿತ್ತು ಕಣ್ಣಿಗೆ? ಕಪ್ಪಗೆ ಮುದ್ದೆಯಾಗಿದ್ದುದೇನೋ, ಅಷ್ಟೆ.,

....ಮೂವತ್ತು ವರ್ಷಗಳಿಗೆ ಹಿಂದೆ ತಾನೂ ಹೀಗೆಯೇ ನಿದ್ದೆ ಹೋಗಿದ್ದೆ – ತನ್ನ ಅತ್ತೆಯ ತೊಡೆಯ ಮೇಲೆ.

...ಅ ಕೆಟ್ಟ ದಿನಗಳನ್ನು ಯಾಕೆಂದು ನೆನೆಸಿಕೊಳ್ಳಬೇಕೀಗ? ಆ ನೆನಪಿನಿಂದ

  • ಗಿರಿಜಾ, ನಿದ್ದೆ ಬಂತೇನೆ?”

ಉತ್ತರವಿಲ್ಲ. ಪುನಃ

  • ಏ ಗಿರಿಜಾ, ಏಳವಾ, ನಡಿ, ಒಳಕ್ಕೆ ಹೋಗಿ ಮಲಕ್ಕೊಳ್ತಾನ. ಕೇಳಿಸ್ತೇನೆ?"
  • ಆ..ಊ..?

"ಏಳವ್ವಾ”

ಗಡಬಡಿಸಿ ಗಿರಿಜವ್ವ ಎದ್ದಳು. ಗಾಬರಿಗೊಂಡು ಕಂಪಿಸುವ ಧ್ವನಿ ಯಲ್ಲಿ ಆಕೆ ಕೇಳಿದಳು. “ ಬಂದರಾ ? ಏನಾಯ್ತು , ಏನಾಯ್ತು ?”

ಕಣ್ಣ ಬಾವಿಗಳಿಂದ ಮತ್ತೆ ಒರತೆ ಚಿಮ್ಮಿದ ಹಾಗಾಯಿತು ಗಂಗವ್ವನಿಗೆ. ಅಕೆ ತನ್ನಷ್ಟಕ್ಕೆ ತಲೆಯಾಡಿಸಿ, ಸೊಸೆಯ ಮೈಮುಟ್ಟಿ ಹೇಳಿದಳು:


ಹೆದರ್ಕೊಂಡಿಯಾ? ಏಳು. ಮಾತಾಡ್ತಾ ಕುಂತಿದ್ವಿ. ಅಷ್ಟರಲ್ಲೆ ನೀನು ನಿದ್ದೆ ಮಾಡುಟ್ಟೆ, ನಡಿ, ಒಳಕ್ಕೆ ಹೋಗಾನ, ಅಬ್ಬ! ಎಂಥ ಚಳಿ!” ಪೂರ್ತಿ ಎಚ್ಚರಗೊಂಡ ಸೊಸೆ ಎದ್ದು ನಿಂತು, ಒಳಕ್ಕೆ ಹೋಗಲು ಅತ್ತೆಗೆ ನೆರವಾದಳು.

ನೆಲದ ಜವುಗು ತಾಗದಿರಲೆಂದು ಒಣ ಹುಲ್ಲಿನ ಮೇಲೆ ಹಾಸಿದ ಚಾಪೆಗಳು ಅವರ ಹಾದಿ ನೋಡುತ್ತ ಹಾಗೆಯೇ ಇದ್ದವು, ಬೂದಿ ಮುಚ್ಚಿ ಪ್ರಕಾಶಹೀನವಾಗಿದ್ದವು ಅಗ್ಗಿಷ್ಟಿಕೆಯ ಕೆಂಡಗಳು.