ಪುಟ:Kalyaand-asvaami.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಲ್ಯಾಣಸ್ವಾಮಿ

ಮಲಗಿಕೊಳ್ಳುತ್ತ ಗಂಗವ್ವ ಹೇಳಿದಳು:

"ಹುಣ್ಣಿಮೆ ಇವತ್ತು. ಪ್ರಯಾಣಕ್ಕೆ ಚೆನ್ನಗಿರ್ತೇತೆ. ಹಿಂದೆ ಎಷ್ಟೋ ಸರ್ತಿ ಪುಟ್ಟಬಸ್ಯ ಹುಣ್ಣಿಮೆ ರಾತ್ರೇಲೆ ಬಂದಿದ್ದ, ಅಲ್ಲವಾ? ರಾತ್ರೆ ಕಳೆದು ಬೆಳಗಾಗೋದರೊಳಗೆ ಬಂದರೂ ಬರ್ಬೌದು, ಅಲ್ವೇನೆ?”

“ ಹೂಂ ಅತ್ತೆಮ್ಮ,” ಎಂದಳು ಗಿರಿಜವ್ವ, ಕತ್ತಿನ ವರೆಗೂ ತನ್ನ ಕಂಬಳಿಯನ್ನೆಳೆದುಕೊಳ್ಳುತ್ತ.

ಯಾಕಾಗಬಾರದು? ಬೆಳ್ಳಿ ಮೂಡುವ ಹೊತ್ತಿಗೆ ತನ್ನ ಸ್ವಾಮಿ ಬಂದರು ಬರಬಹುದು - ಎಂಬ ಆಸೆ ಇತ್ತು ಆಕೆಗೂ.