ಪುಟ:Kalyaand-asvaami.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕತ್ತಲು ಕವಿದ ಕೊಡಗು "ಹಾಗೇ ಒಂದು ತಪ್ಪಲೆ ತನ್ನಿ.ಕುದುರೆಗಳಿಗೆ ನೀರು ಕುಡಿಸ್ಬೇಕು.ಬಾವಿ ಎಲ್ಲೈತೆ ತೋರಿಸಿ."
ಅದು ಮೂರನೆಯ ಸ್ವರ.ತಪ್ಪಲೆ ಬಂತು.ಮೆಟ್ಟಲಿಳಿದು ಹೋಗ ಬೇಕಾದ ನೀರಿನ ಹೊಂಡ ಅಲ್ಲಿಯೇ ಇತ್ತು
"ಬೇಸಗೆ.ಜಾಸ್ತಿ ನೀರಿರೋದಿಲ್ಲ.ಆದರೂ ಕಾಲು ಜಾರೀತು.ಹುಷಾರಿ!"ಎಂದ ಪುಟ್ಟಬಸವ.ಬಳಿಕ ಎಲ್ಲರನ್ನೂ ಉದ್ದೇಶಿಸಿ ಆತನೆಂದ:"ಬಂದೂಕೆಲ್ಲಾ ಒಳಗಿಟ್ಟಿಡಿ.ಜಗಲಿಯ ಮೇಲೆಯೇ ಮಲಕ್ಕೊಳ್ಳುವಿರಂತೆ."
ಒಳಗೆ ಎರಡು ಈಚಲು ಚಾಪೆಗಳಿದ್ದುವು.ಎರಡನ್ನೂ ಜೋಡಿಸಿ ಪುಟ್ಟಬಸವ ಹಾಸಿದ.ಈ ಕೆಲಸವನ್ನಷ್ಟು ಸದ್ದಿಲ್ಲದೆ ಮುಗಿಸಿದ ಬಳಿಕ ತಾಯಿಯನ್ನೆಬ್ಬಿಸ ಬೇಕೆಂದು ಯೋಚಿಸಿದ್ದ ಆತ. ಆದರೆ ಗಂಗವ್ವನಿಗಾಗಲೆ ಎಚ್ಚರವಾಗಿ ಬಿಟ್ಟಿತ್ತು.ಆಕೆ ಎದ್ದು ಕುಳಿತು ಉದ್ವೇಗದಿಂದ ಕೇಳಿದಳು:
"ಗಿರಿಜಾ! ಯಾರು ಬಂದರು? ಪುಟ್ಟಬಸ್ಯ ಬಂದ್ನಾ?"
ಸ್ನೇಹಿತರಿಗೆ ಮಲಗುವ ಜಾಗ ತೋರಿಸುತ್ತಿದ್ದ ಪುಟ್ಟಬಸವನೆಂದ:
"ಹೂನವ್ವಾ,ನಾನು ಕಣವ್ವಾ."ಎಲ್ಲಿ,ಎಲ್ಲಿದೀಯೋ?ಏನೊ ಕಾಣಿಸುವಲ್ಲದಲ್ಲೋ!"
ತಾನು ಮನೆ ಬಿಟ್ಟಾಗಲೇ ತಾಯಿಯ ದೃಷ್ಟಿ ಮಂದವಾಗತೊಡಗಿತ್ತೆಂಬುದು ಆತನ ನೆನಪಿಗೆ ಬಂತು.ಈಗ ಆಕೆ ಪೂರ್ಣ ಕುರುಡಿಯಾಗಿರುವಳೆನೋ ಎಂದು ಕಳವಳವಾಯಿತು ಆತನಿಗೆ.
"ಬಂದೆ ತಾಳವ್ವಾ" ಎನ್ನುತ್ತ ಪುಟ್ಟಬಸವ ನಡುಮನೆಗೆ ಧಾನಿಸಿದ.ತಾಯಿಯ ಮಡಿಲಲ್ಲಿ ಮುಖವಿಟ್ಟು, ಎಳೆಕರುವಿನಂತೆ ಅರ್ಥವಿಲ್ಲದ ಸ್ವರ ಹೊರಡಿಸಿದ.
"ಯಾಕವ್ವಾ,ಕಾಣಿಸೋದಿಲ್ವಾ?ನಾನು ಪುಟ್ಟಬಸ್ಯಾ."
ಎರಡು ಕೈಗಳಿಂದ ಅವನ ಅಂಗಾಗಗಳನ್ನೆಲ್ಲ ಮುಟ್ಟಿ ನೋಡುತ್ತಾ ಗಂಗವ್ವನೆಂದಳು

"ನೀನು ಓದಾಗ ದೃಷ್ಟೀನೂ ಓಗ್ತೇತೆ ಮಗಾ.ನೀನು ಬಂದಾಗ ತಿರುಗಾ ಬರ್ತೇತೆ."