ಪುಟ:Kalyaand-asvaami.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕಲ್ಯಾಣಸ್ವಾಮಿ
ಮಕ್ಕಳ ಸೌಂದರ್ಯಕ್ಕೆ ಸ್ಫುರದ್ರೂಪಿಯಾದ ತಾನೇ ಹೊಣೆ ಎಂಬಂತೆ,ವೀರರಾಜೇಂದ್ರ ನಸುನಕ್ಕ.
ಕೋಲ್ ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿದ್ದ: ಈತನ ಬಳಿಕ ಸಿಂಹಾಸನವೇರಲು ರಾಜಕುಮಾರನಿಲ್ಲ.ಆಗ ಈ ದೇಶದ 'ರಕ್ಷಣೆ'ಯನ್ನು...
ಅರಸು ಅಥಿತಿಯೊಡನೆ ಮುಖ್ಯವಾದ ವಿಷಯ ಪ್ರಸ್ತಾಪ ಮಾಡಿದ:
"ನಮ್ಮದೊಂದು ಆಸೆಯಿದೆ.ಕಂಪನಿಯವರು ಅದನ್ನು ನಡೆಸಿಕೊಡ್ಬೇಕು.""ಏನದು,ಹೇಳೋಣಾಗಲಿ."ನಮ್ಮ ಆನಂತರ ನಮ್ಮ ಹಿರಿಯ ಮಗಳು ರಾಜ್ಯವಾಳಬೇಕೂಂತ ತೀರ್ಮಾನಿಸಿದೀವಿ.ಅದು ಸಾಧ್ಯವಾಗುವಂತೆ ಕಂಪನಿಯವರು ಸಹಾಯ ಮಾಡ್ಬೇಕು."
ಕೋಲ್ ಸಂತೋಷದಿಂದ ನುಡಿದ:
"ಆಗಲಿ ಅದಕ್ಕೇನಂತೆ?"
"ನಮ್ಮ ಮಗಳ ಹೆಸರಿನಲ್ಲಿ ಆರು ಲಕ್ಷ ರೂಪಾಯಿ ನಿಮ್ಮ ಮದರಾಸು ಬ್ಯಾಂಕಿನಲ್ಲಿಡ್ತೀವಿ."
"ಓಹೋ! ಆಗಬಹುದು!"
"ಹಾಗೆಯೇ ಬೊಂಬಾಯಿಯಲ್ಲಿ ನಿಮ್ಮ ಹತ್ತಿರ ಹಣ ಇಡ್ತೀವಿ.
"ಸಂತೋಷ!"
...ಮುಂದೆ ಸ್ವಲ್ಪ ಸಮಯದಲ್ಲೇ ಅರಸು,ರಾಜಮುದ್ರೆಯನ್ನು ಮಗಳ ಕೈಗಿತ್ತು, ಕಾಲವಾದ. ಆ ಮನೆತನಕ್ಕೆ ನೆರವಾಗಬೇಕಾದುದು ತಮ್ಮ ಕರ್ತವ್ಯ ಎಂದೇನೂ ಇಂಗ್ಲಿಷರು ಭಾವಿಸಲಿಲ್ಲ.
ದೇವಮ್ಮಾಜಿಯ ಪರವಾಗಿ ಆಡಳಿತ ವಹಿಸಿದ್ದ ಲಿಂಗರಾಜ, ಎರಡು ವರ್ಷಗಳ ಅವಧಿಯೊಳಗೇ,ಕೊಡಗಿಗೇ ತಾನೇ ರಾಜನೆಂದು ಸಾರಿದ.
ಆತನ ಕಾಲದಲ್ಲಿ ರಾಜ್ಯದ ಎಲ್ಲೆ ಕಟ್ಟುಗಳು ಭದ್ರವಾದುವು. ರಾಜನೆಂದ: " ರೈತರು ಸುಖವಾಗಿರಬೇಕು.ಅದಕ್ಕೋಸ್ಕರ ಸಾಗುವಳಿ ಮಾಡುವ.