ಪುಟ:Kalyaand-asvaami.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕತ್ತಲು ಕವಿದ ಕೊಡಗು

                                                               ೫೯

ರಿಗೆ ಹೂಗಿ ಜನರನ್ನು ತಯಾರು ಮಾಡ್ತರೆ. ಹಾಗೆಯೆ ನಮ್ಮ ದೊಡ್ಡಪ್ಪನವರ ಮಕ್ಕಳಿಂದಲು ಸಹ್ಹಯವಾದಿತು. ಅಸರು ಈಗ ಹಾಲೀರಿಯಲ್ಲಿರ ಬಹುದು."

      ಹ್ರುದಯದ ತಳಮಳ ಕಡಿಮೆಯಾಗಿ ಮೆದುಳು ಚುರುಕಾಗಿದ್ದ ನಂಜಯ್ಯನೆಂದ:
 
       "ಆಗಲಿ ಮಹರಾಜರೆ. ಆ ಜವಬ್ದರಿಯನೆಲ್ಲ ನಮಗೆ ಬಿಟ್ಟ ಬಿಡಿ. ನಿಮ್ಮನ್ನು ಮೈಸೂರು ಸೀಮೆಯ ಗಡಿದಾಟಿಸಿ ನಾವು ಹಿಂತಿರುಗ್ತೆವೆ."
       "ಹಾಗೆ ಮಾಡಿ."
      ...ಮುಂದೆ ಪ್ರಯಾಣ.
        ಅಗಲುವ ದಿನ ಬಂದಾಗ ಮತ್ತೆ ವೀರರಾಜ.
       "ಇನ್ನು ನಾವಿಬ್ಬರು ಜತೆಯಾಗಿ ಬೆಟಿಯಾಡೋದು ಯಾವತ್ತು ಚೆಟ್ಟಿಕುಡಿಯ? ಹಾರುವ ಹಕ್ಕಿಯ ಕಣ್ಣಿಗೆ ನೀನಿನ್ನು ಗುರಿ ಇಡೋದು ಯಾವತ್ತು?"
       ಕಲ್ಲಿನಲ್ಲಿ ಕಡಿದ ವಿಗ್ರಹದಂತೆ ಅಚಲನಾಗಿ ನಿಂತ ಚೆಟ್ಟಿಕುಡಿಯ ಹೆಳಿದ:
      "ಆ ಬೊಪು ದಿವಾನನ್ನು ಹಿಡಿದುಕಟ್ತಿ ಮರಕ್ಕೆ ತೂಗು ಹಾಕಿ ದೀಲಿಯ ಇನ್ನು ಹಕ್ಕಿಯ ಬೆಟಿ ಮಹಾಪ್ರಭು."
       ಪುಟ್ತಬಸವನೆಂದ:
       "ಆ ಬಿಳಿಯರನೆಲ್ಲ ಚಿಳ್ಳೆಪಿಳ್ಳೆ ಸಹಿತ ದೆಶದಿಂದ ಹೊರಹಾಕಿದ ಮೆಲೆಯೆ ನಮಗಿನ್ನು ವಿಶ್ರಾಂತಿ ಮಹರಾಜರೆ."
       "ಆಪ್ತರಾದ ಹಲವರನ್ನು ಬಿಟ್ಟು ಯಾತ್ರೆ ಮುಂದುವರೆಯುವ ಘಳಿಗೆಯಲ್ಲಿ ವೀರರಾಜ ಅಳುಕಿದ.
       "ನನಗ್ಯಾಕೂ ಅಂಜಿಕೆಯಾಗ್ತಿದೆ ನಂಜಯ್ಯನವರೆ. ನಾನು ವಾಸಸು ಬರ್ತೆನೂ ಇಲ್ಲವೊ."
       ಇಬ್ಬರು ಮೂವರು ಒಂದೆ ರೀತಿಯ ಉತ್ತರವಿತ್ತರು:
      " ದಯವಿಟ್ಟು ಅಂತ ಮಾತು ಆಡ್ಬೆಡಿ!"
     ...ವೀರರಾಜನೆ ಆಪ್ತ ಸರದಾರರು ಹಲವರು ಗುಡ್ದದ ಮೆಲೆ ಹಿಂದೆ