ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉತ್ತರ ತಡವಾಗಲಿಲ್ಲ.

"ಯಾವಾಗ ಎಂದೇನು? ಇವತ್ತು ಅಂದರೆ ಇವತ್ತೇ!” ಎಂದ ಸೋಮಯ್ಯ.

ಪುಟ್ಟಬಸವ ನಸುನಕ್ಕ.

"ಈ ವಿಷಯ ಪ್ರಸ್ತಾಪ ಮಾಡಿದ ಕಡೇಲೆಲ್ಲಾ ನಮಗೆ ಸಿಕ್ಕಿರೋದು ಇಂಥದೇ ಉತ್ತರ!”

ನಂಜಯ್ಯನೆಂದ:

ಇಲ್ಲಿ ಕೇಳಿ ಸೋಮಯ್ಯನವರೆ, ಇನ್ನೇನು ಹಾಹಾ ಅನ್ನೋದರೊಳಗೆ ಸುಗ್ಗಿ ಬರ್ತೇತೆ. ಕುಯಿಲು ಮುಗಿಸಿ, ಹೊಸ ಅಕ್ಕೀನ ಕಣಜಕ್ಕೆ ಸೇರಿಸಿ, ಎಲ್ಲರೂ ಹೊರಟರಾಯ್ತು. ಮುಂದಿನ ಸಾಗುವಳಿ ಹೊತ್ತಿಗೆ,ಕೆಲಸ ಮುಗುಸಿ, ನಮ್ಮ ನಮ್ಮ ಊರಿಗೆ ನಾವು ವಾಪಸಾಗ್ಬೇಕು. ಹೌದೋ, ಅಲ್ಲವೋ?"

"ಅದ್ಸರಿ."

ಪುಟ್ಟಬಸವನ ಶಾಂತವಾದ ಸ್ವರ ಮತ್ತೆ ಕೇಳಿಸಿತು:

"ನಾವೂ ನಮ್ಮ ಗೆಳೆಯರೂ ಒಂದು ಮಾತು ಎಲ್ಲರಿಗೂ ಹೇಳ್ತಾ ಬಂದಿದೀವಿ. ಯಾರು ಯಾರು ಹೋಗ್ಬೇಕಾಂತ ಊರಿನವರು ಆರಿಸೋದು ವಾಸಿ. ನಮ್ಮ ಹೆಂಗಸರು ಮಕ್ಕಳನ್ನು ಅನಾಥರಾಗಿ ಮಾಡಿ ನಾವು ಊರು ಬಿಡಬಾರದು. ಗಂಡಸರಿಲ್ಲದ ಸಮಯದಲ್ಲಿ ಲೂಟಿ ದರೋಡೆ ಮಾಡೋ ಜನರಿಗೇನೂ ಬರಗಾಲ ಇಲ್ಲ. ಇದನ್ನು ನಾವು ಮರೀಬಾರದು.”

ಆ ವಿಚಾರಸರಣಿಯನ್ನು ಕರಿಯಪ್ಪ ಸಮರ್ಥಿಸಿದ :

"ಸರಿ ಹೇಳಿದಿರಿ ಅಣ್ಣ, ಹಂಗೇ ಮಾಡಾನ.” ...ಸಭೆ ಮುಗಿಯಿತಿನ್ನು: ಪುನಃ ಯುದ್ದವೇ- ಎಂದುಕೊಂಡಳು ಗಂಗವ್ವ. ಹೆತ್ತವಳ ಸಂಕಟ ನಿನಗೇನಾದರೂ ಅರ್ಥವಾಗುತ್ತಿದೆಯೇ, ಎಂದು ಪ್ರಶ್ನಿಸುವ ನೋಟದಿಂದ ಗಿರಿಜವ್ವನನ್ನು ಆಕೆ ನೋಡಿದಳು.

ಗಿರಿಜೆಗೆ ಸಂತೋಷವಾಗಿತ್ತು, ತನ್ನ ಕೈಹಿಡಿದ ಗಂಡಸು ವೀರನೆಂದು, ಆ ಸ್ವರವೋ ? ಕೊಳಲಧ್ವನಿಗಿಂತಲೂ ಇಂಪು; ಸಿಡಿಲಿನಂತೆ ಕರ್ಣಕಠೋರ. ಆತ ಮಾತನಾಡಿದಾಗ ಮನುಷ್ಯರಷ್ಟೇ ಅಲ್ಲ, ಮರಗಿಡಗಳೂ ಮೃಗಗಳೂ ಮೌನವಾಗಿ ಕಿವಿಗೊಡುತಿದ್ಲುವೇನೋ ಎನಿಸಿತು. ಅದು ಹಾಳು