ಪುಟ:Kalyaand-asvaami.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮ್ಮನಿದ್ದ ಗಿರಿಜವ್ವನನ್ನೆ ದಿಟ್ಟಿಸುತ್ತ ಮಾಚಯ್ಯ ಮಾತು ಮುಂದುವರಿಸಿದ:

"ಇಬ್ಬರು ಹೋಗಿದ್ವಿ, ಒಬ್ಬ ಅಲ್ಲಿಯೇ ಇದಾನೆ. ಇವರು ರಾಮ ಗೌಡರೂಂತ. ಅಡ್ಕಾರಿನ ಮುಖ್ಯಸ್ಥರು. ಅಣ್ಣನವರ ಭೇಟಿಗೆ ಕರಕೊಂಡು ಬಂದೆ.” "ಯಾರು ಬಂದರು" ಎಂದು ವಿಚಾರಿಸುತ್ತ ಗಂಗವ್ವನೂ ಸೊಸೆಯ ಹಿಂಬದಿಯಲ್ಲಿ ನಿಂತಳು. ಮನುಷ್ಯ ಆಕೃತಿಗಳು ಅಸ್ಪಷ್ಟವಾಗಿ ಕಾಣಿಸಿದುವೇ ಹೊರತು, ಮಾಚಯ್ಯನ ಗುರುತು ಆಕೆಗೆ ಸಿಗಲಿಲ್ಲ. ಸ್ವರವನ್ನೆಲ್ಲೋ ಹಿಂದೆ ಕೇಳಿದ್ದೆ' ಎನಿಸಿತು ಮಾಚಯ್ಯ ಅದರ ನೆನಪು ಮಾಡಿಕೊಟ್ಟಾಗ "ಸರಿ, ಹೌದು" ಎಂದಳು ಆಕೆ.

ಅಂತೂ, ಈ ಇಬ್ಬರು ಬಂದುದರಿಂದ ತನ್ನ ಗಂಡನಿಗೆ ಯಾವ ಅಪಾಯವೂ ಇಲ್ಲವೆಂದು ಗಿರಿಜೆಗೆ ಸಮಾಧಾನವಾಯಿತು.

ಕೊನೆಗೂ ಮಾಚಯ್ಯನಿಂದ ಪ್ರಶ್ನೆ ಬಂತು:

“ಎಲ್ಲಿ ಅಣ್ಣನವರು? ಹುಣ್ಣಿಮೆಯ ಹೊತ್ತಿಗೆ ಊರು ಸೇರ್ತೀವಿ ಅಂತ ಹೇಳಿದ್ರು.”

ಈಗ ಹಿಂಜರಿಯದೆ ಗಿರಿಜಾ ಉತ್ತವಿತ್ತಳು:

"ಬಂದಿದ್ದೋರು ಇಲ್ಲೇ ಹೆತ್ತಿರ ಎಲ್ಲಿಗೋ ಹೋಗವರೆ. ಶನಿವಾರ ಬರಬೌದು."

"ಇನ್ನೂ ಎರಡು ದಿವಸ ಕಾಯಬೇಕಲ್ಲಾ !” ಎಂದಿತು ರಾಮಗೌಡನ ಸ್ವರ.

ಯಾವುದೋ ಅವಸರದ ಕಾರ್ಯಕ್ಕಾಗಿಯೆ ಅವರು ಬಂದಿದ್ದರೆಂಬುದು ಸ್ಪಷ್ಟವಾಗಿತ್ತು.

ನಡೆದು ಬಳಲಿಕೆ ಇದ್ದರೂ ಓಜಸ್ಸಿನಿಂದ ಕೂಡಿದ ಮುಖಮುದ್ರೆ.

ಕೂದಲು ತೆಳ್ಳಗಾಗುತ್ತ ಬಂದಿದ್ದ ದುಂಡಗಿನ ತಲೆ. ಮುಖಕ್ಕೆ ಭೂಷಣವಾಗಿದ್ದ ಮೀಸೆ. ಆವಿಶ್ರಾಂತವಾಗಿ ಅತ್ತಿತ್ತ ಹೊರಳುತ್ತಲೆ ಇದ್ದ ಕಣ್ಣುಗಳು. ಕಟ್ಟಾಳು. ಘಟದ ಕೆಳಗಿನವರ ಹಾಗೆ ಪದೋಚ್ಟಾರ. ನೋಡಿದವರು ಮತ್ತೊಮ್ಮೆ ನೋಡುವಂತಿದ್ದ ಆ ರಾಮಗೌಡ.

ಮಾಚಯ್ಯ ಕೇಳಿದ: