ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮರ ಸುಳ್ಯದಲ್ಲಿ ಕ್ಷೋಭೆಯ ಕಿಡಿ

    ದಿವಾನರೊಂತ ಹೆಸರಿರೋರು ಬೇರೆಯೂ ಇಬ್ಬರು ಮೂವರಿರ್ತಾರೆ.ಈಗ ನೋಡಿ. ಬೋಪುವೇ ಮುಖ್ಯ ದಿವಾನ."
    "ಅದಕ್ಕೇ ಕೇಳಿದೆ.ಲಕ್ಷ್ಮೀನಾಯಣ ಅಂತ ಒಬ್ಬ ಬ್ರಾಹ್ಮಣನೂ ದಿವಾಬನನಾಗಿದಾನೆ, ಅಲ್ಲವೋ?"
    "ಹೌದು."
    "ಅವನ ತಮ್ಮನೇ ರಾಮಪ್ಪಯ್ಯ..."
    ....ರಾಮಪ್ಪಯ್ಯ ಅಮರ ಸುಳ್ಯದ ತುಂಡು ಪಾಳೆಯಗಾರ.ಜಾತಿಯಲ್ಲಿ ಬ್ರಾಹ್ಮಣ;ವೃತ್ತಿಯಲ್ಲಿ ಚಂಡಾಲ.ಕನ್ನಡ ಜಿಲ್ಲೆಯ ಕಲೆಕ್ಟರ ಸಾಹೇಬರಿಗೆ ಸ್ನೆಹಿತ. ಕೊಡಗಿನ ವಿಷಯದಲಂತೂ ಸ್ವತಃ ದಿವಾನನ ರಕ್ತ ಸಂಬಂಧಿಯೇ ಆತ. ಮುನ್ನೂರು ಜನ ಮೂಲದ ಹೊಲೆಯರು. ಅವರೇ ಆತನ ಯೋಧರು. ಕಡಿ--ಕಡಿಯಬೇಕು. ಸುಡು ಎಂದರೆ ಸುಡಬೇಕು. ತನ್ನನ್ನು ತಾನೇ ಕರೆದುಕೊಂಡಿದ್ದ ಆತ 'ಹತ್ತೂರ ಧೊರೆ'ಯೆಂದು.ಮಧ್ಯವಯಸ್ಸು ದಾಟಿದ್ದರೂ ಗಟ್ಟಿಮುಟ್ಟಾದ ಜೀವ. ಹುರಿಮಾಡಿದ ಮೀಸೆ ಆವಿಶ್ರಾಂತವಾಗಿ ಕಾಣುತ್ತಲೇ ಇರುತಿತ್ತು.ಬಹಿರಂಗವಾಗಿ 'ಧೊರೆ!ಪರಾಕು!'ಎನ್ನುತಿದ್ದವರು, 'ಹೆಬ್ಬುಲಿ'ಎಂಬ ಅಡ್ಡ ಹೆಸರನ್ನೂ ಇರಿಸಿದ್ದರು ಆತನಿಗೆ.ಅಂತರಂಗದಲ್ಲಿ ಮಾತ್ರ, 'ನೀಚ!ಇವನ ವಂಶ ನಿರ್ನಾಮವಾಗಲಿ!' ಎಂದು ಶಪಿಸುತಿದ್ದರು. ಕುಂಪಣಿ ಸರಕಾರಕ್ಕೆ ಕೊಡುವ ಕಂದಾಯವಲ್ಲದೆ,ರೈತರು ಈತನಿಗೂ ಒಂದು ಒಪ್ಪಿಸಬೇಕಾಗಿತ್ತು. ಒಳ್ಳೆಯ ಫಸಲು ಬರುವ ಭೂಮಿಯೆಲ್ಲ ಈತನದೇ. ದಂಡಾಯುಧದ ಭಯ ತೋರಿಸಿಯೇ ಇನ್ನೊಬ್ಬರ ಹೊಲವನ್ನು ಆತ ವಶಪಡಿಸಿಕೊಳ್ಳುತಿದ್ದ. ಆಸ್ತಿಯನ್ನು ತನಗೆ ಬರೆದು ಕೊಟ್ಟ ಹಾಗೆ,ಓಲೆಗರಿಗೆ ಒತ್ತಾಯದ ರುಜು ಹಾಕಿಸುತ್ತಿದ್ದ. ಇಷ್ಟು ಸಾಲದುದಕ್ಕೆ ಪರಸ್ತ್ರೀಯರ ಮೇಲಿನ ವ್ಯಾಮೋಹ ಬೇರೆ. ಕುದುರೆಯನ್ನೇರಿ ಆತ ಬಂದನೆಂದರೆ ಮನೆ ಬಾಗಿಲುಗಳು ಮುಚ್ಚಿಕೊಳ್ಳುತಿದ್ದವು. [ಆದರೆ ಬಾಗಿಲ ಬಿರುಕುಗಳೆಡೆಯಿಂದ ಹೆಂಗಳೆಡೆಯಿಂದ ಹೆಂಗಳೆಯರೆಲ್ಲ ತನ್ನನ್ನೆ ನೋಡುತಿದ್ದರೆಂಬುದು ರಾಮಪ್ಪಯ್ಯನಿಗೆ ಗೊತ್ತಿತ್ತು] ಹೀಗಿದ್ದರೂ ಎಲ್ಲೆಲ್ಲಿ ಎಂಥೆಂಥ ಹೆಣ್ಣು ಜೀವ ಇದೆ ಎಂಬುದನ್ನು ಆತ ತಿಳಿದಿದ್ದ....
     ಸ್ತ್ರಿಯರ ಅಪಹರಣ, ಹಲವರ ಪಾಲಿಗೆ ಆತ ರಾಕ್ಷಸನಾದ, ಪ್ರತಿ