ಪುಟ:Kanakadasa Haribhakthisara.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ೨೩ ನಿದ್ದುದಕೆ ಫಲವೇನು ಭಕ್ತಿ ವಿ ರುದ್ಧವಾಗದವೋಲು ರಕ್ಷಿಸು ನಮ್ಮನನವರತ ವರುಷವದರೊಳಗಾದುದಂತಃ ಕರಣ ನಿನ್ನೊಳು ತೋರಿ ರಕ್ಷಿಸು ನಮ್ಮನನವರತ ೧೭೬ IOSOI ಕೇಳುವುದು ಕಡುಕಷ್ಟ ಕಷ್ಟದ ಬಾಳುವೆಯ ಬದುಕೇನು ಸುಡು ಸುಡು ಗಾಳಿಗೊಡ್ಡಿದ ಸೊಡರು ಈ ಸಂಸಾರದೇಳಿಗೆಯು ಬಾಳಬೇಕೆಂಬವಗೆ ನೆರೆ ನಿ ನ್ಯೂಳಿಗವ ಮಿಗೆ ಮಾಡಿ ಭಕ್ತಿಯೋ ಛಾಳಿ ಬದುಕುವುದುಚಿತ ರಕ್ಷಿಸು ನಮ್ಮನನವರತ ಊರು ತನಗೊಂದಿಲ್ಲ ಹೊತ್ತ ಶ ರೀರಗಳ ಮಿತಿಯಿಲ್ಲ ತಾ ಸಂ ಚಾರಿಸದ ಸ್ಥಳವಿಲ್ಲ ನುಡಿಯದ ಭಾಷೆ ಮತ್ತಿಲ್ಲ ಬೇರೆ ಹೊಸತೊಂದಿಲ್ಲ ಉಣ್ಣದ ಸಾರ ವಸ್ತುಗಳಿಲ್ಲ ತನು ಸಂ ಚಾರವೀ ಬಗೆಯಾಯ್ತು ರಕ್ಷಿಸು ನಮ್ಮನನವರತ 1೭೭ IOSOL ದೇಹಧಾರಕನಾಗಿ ಬಹುವಿಧ ಮೋಹದೇಳಿಗೆಯಾಗಿ ಮುಕುತಿಗೆ ಬಾಹಿರನು ತಾನಾಗಿ ವಿಷಯಾದಿಗಳಿಗೊಳಗಾಗಿ ದೇಹವೀ ಸಂಸಾರವೆನ್ನದೆ ಮೋಹಿಸುವ ಮತಿಗೇಡಿ ಮಾನವ ಸಾಹಸಿಯೆ ಸಟೆ ಮಾತು ರಕ್ಷಿಸು ನಮ್ಮನನವರತ ಗೋಪುರದ ಭಾರವನು ಗಾರೆಯ ರೂಪುದೋರಿದ ಪ್ರತಿಮೆಯಂದದೊ ಟೀ ಪರಿಯೆ ಸಂಸಾರ ಭಾರವನಾರು ತಾಳುವರು ತಾ ಪರಾಕ್ರಮಿಯೆಂದು ಮನುಜನು ಕಾಪಥವನಯುವನು ವಿಶ್ವ ವ್ಯಾಪಕನು ನೀನಹುದು ರಕ್ಷಿಸು ನಮ್ಮನನವರತ 1೭೮ ೮೨। ಅಳಿವ ಒಡಲನು ನೆಚ್ಚಿ ವಿಷಯಂ ಗಳಿಗೆ ಕಾತರನಾಗಿ ಮಿಗೆ ಕಳ ವಳಿಸಿ ಕಾಲನ ಬಳಿಗೆ ಹಂಗಿಗನಾಗಿ ಬಾಳುವರೆ ತಿಳಿದು ಮನದೊಳು ನಿನ್ನ ನಾಮಾ ವಳಿಯ ಜಿಹ್ನೆಗೆ ತಂದು ಪಾಪವ ಕಳೆದ ಬದುಕೇ ಲೇಸು ರಕ್ಷಿಸು ನಮ್ಮನನವರತ ಬೀಜ ವೃಕ್ಷದೊಳಾಯ್ತು ವೃಕ್ಷಕೆ ಬೀಜವಾರಿಂದಾಯ್ತು ಲೋಕದಿ ಬೀಜವೃಕ್ಷನ್ಯಾಯವಿದ ಭೇದಿಸುವರಾರಿನ್ನು ಸೋಜಿಗವ ನೀ ಬಲ್ಲೆ ನಿನ್ನೊಳು ರಾಜಿಸುತ ಮೊಳೆದೋರುವುದು ಸುರ ರಾಜನಂದನ ನಮಿತ ರಕ್ಷಿಸು ನಮ್ಮನನವರತ ೭೯) ೮೩। ವರುಷ ನೂರಾಯುಷ್ಯವದರೊಳ ಗಿರುಳು ಕಳೆದೈವತ್ತು ಐವ ತರಲಿ ವಾರ್ಧಿಕ ಬಾಲ್ಯ ಕೌಮಾರದಲಿ ಮೂವತ್ತು ಇರದೆ ಸಂದುದು ಬಳಿಕವಿಪ್ಪತ್ತು ತೊಗಲು ಬೊಂಬೆಗಳಂತೆ ನಾಲಕು ಬಗೆಯ ನಿರ್ಮಾಣದಲಿ ಇದರೊಳು ನೆಗಳಿದೀ ಚೌಷಷ್ಟಿ ಲಕ್ಷಣ ಜಾತಿ ಧರ್ಮದಲಿ ಬಗೆಬಗೆಯ ನಾಮಾಂಕಿತದ ಜೀ